ತರಲೆ ತಲೆಯಲ್ಲಿ ಹುಟ್ಟಿದ ಹನಿಗಳು
ಮೋಹನ್ ವಿ ಕೊಳ್ಳೇಗಾಲ
1.
ನೀನೆ ಎಂದು ಭ್ರಮಿಸಿ ಅವಳಿಗೆ ಮುತ್ತಿಕ್ಕಿದ್ದೆ
ಈಗ ನಿನಗೂ ಮುತ್ತಿಡಲಾಗದಂತೆ
ತುಟಿ ಸುಟ್ಟಿದೆ!
2.
ಗಾಂಧೀಜಿಯ ಅಹಿಂಸಾತತ್ತ್ವ ಪಾಲಿಸಲು
ಮಾಂಸ ತಿನ್ನುವುದು ತ್ಯಜಿಸಿದ್ದೇನೆ
ನಮ್ಮಮ್ಮನಿಗೆ ಒಂಥರಾ ಹಿಂಸೆ!
3.
ಕುಡಿದು ಗಾಡಿ ಓಡಿಸಬೇಡಿ ಎಂದವರು
ಬಾರ್ ಮುಂದೆ ಪಾರ್ಕಿಂಗ್ ಗೆ
ಜಾಗ ಮಾಡಿಕೊಟ್ಟದ್ದು ಅರ್ಥವಾಗುತ್ತಿಲ್ಲ
ನಾ ಕುಡಿದಿಲ್ಲ
4.
ನನ್ನವಳು ಸ್ನಾನ ಮಾಡಿ
ನೀರನ್ನೇ ತೊಳೆದುಬಿಟ್ಟಳು!
5.
ನಲ್ಲೆ
ಈ ಬಿ.ಜೆ.ಪಿ ಕಲಹ ನೋಡಲು ಭಯವೆನಗೆ
ಇಬ್ಭಾಗವಾದ ಕಮಲ
ನಿನ್ನ ಕಣ್ಣನ್ನೇ ಬಿಂಬಿಸಿ ನಗುತ್ತದೆ..!
‘ಕೈ’ ನೋಡಿದಾಗ ನೀ ಕೈಕೊಟ್ಟ ನೆನಪು..!
6.
ಜಿಟಿ ಜಿಟಿ ಮಳೆ ಸ್ನಾನದೊಂದಿಗೆ
ಇಂದು ಮರ ಮೈ ತುಂಬಿ ತೊನೆವಾಗ
ನಿನ್ನ ನೆನಪಾಯಿತು ಕಣೆ
ಹೃದಯಾಕಾರಾರದ ಮಾವನ್ನು ನೋಡಿ
ಯಾಕೋ ಬೆಚ್ಚಿಬಿಟ್ಟೆ….!
7.
ಎಂದೋ ಮಾಡಿಟ್ಟಿದ್ದ ಸಿಹಿ ಗುಲಾಬ್ ಜಾಮೂನ್
ಬೂಸ್ಟ್ ಹಿಡಿದಿದ್ದು ಕಂಡು
ಮತ್ತೆ ಅವಳ ಹೃದಯ ನೆನಪಿಗೆ ಬಂತು
ಓಡೋಡಿ ಚರಂಡಿಗೆ ಸುರಿದುಬಿಟ್ಟೆ…!
8.
ಈ ಹೊಟೇಲ್ ತಿಂಡಿ ನಿನ್ನಂತೆ
ಚಿತ್ರನ್ನಾವೋ ವಿಚಿತ್ರಾನ್ನವೋ ಅರ್ಥವಾಗದು…!
9.
ನಿನ್ನ ನೆನಪಿಸಿಕೊಂಡು
ಪೆಟ್ರೋಲ್ ಖಾಲಿಯಾದ ಗಾಡಿಗೆ
ಸಮಾಧಾನವಾಗುವವರೆವಿಗೂ ಒದ್ದೆ
ಹುಳಿ ಮಾವು ಹಣ್ಣಾಗಿತ್ತು….!
10.
ನಿನ್ನ ನೆನಪುಗಳನ್ನೆಲ್ಲ ಮೂಟೆ ಕಟ್ಟಿ
ಹೂತು ಬಿಡಲು ಗುಂಡಿ ಅಗೆಯುತ್ತಿದ್ದೆ
ಮಳೆ ಬಂದು ತಡೆಯಿತು
ಹನಿ ಹನಿ ಮಳೆಯಲ್ಲೂ ನಿನ್ನದೇ ಮುಖ
ಇದ್ದಕ್ಕಿದ್ದಂತೆ ನೀ ನಕ್ಕುಬಿಟ್ಟೆ
ಮಳೆ ಜೋರಾಯಿತು
ನೆನಪಿನ ಮೂಟೆ ದೊಡ್ಡದಾಗುತ್ತಿದ್ದಂತೆ
ಅಗೆದ ಗುಂಡಿ ಮುಚ್ಚೇ ಹೋಯಿತು!







ಚೆನ್ನಾಗಿವೆ ತರಲೆ ಹನಿಗಳು…
4.
ನನ್ನವಳು ಸ್ನಾನ ಮಾಡಿ
ನೀರನ್ನೇ ತೊಳೆದುಬಿಟ್ಟಳು!……..
ತುಂಬಾ ಹಿಡಿಸಿತು ಎಲ್ಲ ಸಾಲುಗಳೂ ಚೆನ್ನಾಗಿದೆ ಮೋಹನ್ ಜೀ!
ಮತ್ತಷ್ಟು ಬರೆಯಿರಿ!
ನಿಜವಾಗಲೂ ಮಳೆ ಹನಿಯ ಹಾಗೆ ಇತ್ತು