
ಪ್ರೊ. ನಾರಾಯಣ ಪ್ರಸಾದರ ವಿಡಿಯೋ ದಾಖಲೆ

* ದೀಪಾವಳಿಯ ಪಟಾಕಿ ಸದ್ದು ಇನ್ನು ಶುರುವಾಗಿರಲಿಲ್ಲ. ಇಳಿಹೊತ್ತಿನ ೩.೩೦ರ ಸಮಯ. ನಮ್ಕ ಮನೆ ಕಷ್ಟಪಟ್ಟು ಹುಡುಕಿ ಬಂದವರು ಪ್ರೊ. ನಾರಾಯಣ ಪ್ರಸಾದ್. ಹಾಗೆ ನೋಡಿದರೆ ೮-೯ ತಿಂಗಳ ಹಿಂದೆಯೇ ಅವರು ಬರಬೇಕಿತ್ತು. ನಮ್ಮ ಸಮಯದ ಹೊಂದಾಣಿಕೆ ಆಗದಿದ್ದರಿಂದ ದೀಪಾವಳಿ ದಿನ ಯೋಗ ಕೂಡಿಬಂದಿತ್ತು.

* ನಾರಾಯಣ ಪ್ರಸಾದ್ ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಂದಿ ಸಹ ಪ್ರಾಧ್ಯಾಪಕರು. ಅವರ ಹವ್ಯಾಸ Blogsಗಳನ್ನು ನಿರ್ಮಿಸಿ ಆ ಮೂಲಕ ಸಾಹಿತ್ಯ, ಸಂಗೀತ, ರಂಗಭೂಮಿಯಲ್ಲಿ ಸಾಧಿಸಿದವರ ವಿವರಗಳನ್ನು ವಿಶ್ವದಾದ್ಯಂತ ಇರುವ ಕನ್ನಡಿಗರಿಗೆ ತಲುಪಿಸುವುದು.
* ಸಾಹಿತಿ ಕಲಾವಿದರ ಬಾಲ್ಯ, ಶಿಕ್ಷಣ, ತಮ್ಮ ಕ್ಷೇತ್ರದ ಸಾಧನೆ, ಕೃತಿಗಳ ವಿವರಗಳು, ಪ್ರಶಸ್ತಿ, ಗೌರವ, ಒಂದು ಪದದ ವಿಶ್ಲೇಷಣೆ ಒಳಗೊಂಡಂತೆ ಸುಮಾರು ೨೦ ನಿಮಿಷ ಚಿತ್ರೀಕರಿಸಿಕೊಳ್ಳುತ್ತಾರೆ. ನಂತರ ಸಣ್ಣಪುಟ್ಟ Edit ಮಾಡಿ ಅದನ್ನು Internet ಮೂಲಕ “you tube”ಗೆ ಅಳವಡಿಸುತ್ತಾರೆ. ಇದುವರೆವಿಗೆ ನೂರಕ್ಕು ಮಿಕ್ಕಿ ಸಾಹಿತಿ ಕಲಾವಿದರ ಇಂಥ ಮಾಹಿತಿಗಳನ್ನು ಸ್ವ ಆಸಕ್ತಿಯಿಂದ ಮಾಡಿದ್ದಾರೆ… ಯಾವುದೇ ಫಲಾಪೇಕ್ಷೆ ಇಲ್ಲದೆ!
* ನಾವು ವಾಸವಾಗಿರುವ ಚಿಕ್ಕಲ್ಲಸಂದ್ರದ ಅಪಾರ್ಟಮೆಂಟಿನ ಮಹಡಿ ಮೇಲೆ ಒಂದೂವರೆ ಗಂಟೆ ಪ್ರಸಾದ್ ತಮ್ಮ ಹ್ಯಾಂಡಿ ಕ್ಯಾಮೆರಾದಲ್ಲಿ ಚಿತ್ರೀಕರಣ ನಡೆಸಿದರು. ಸಂಗಾತಿ ಡಾ. ಎಚ್.ಎಲ್. ಪುಷ್ಪಾ ಹಾಗೂ ನನ್ನ ಸಾಹಿತ್ಯದ ಬಗೆಗಿನ ಅನುಭವ ದಾಖಲಿಸಿದರು. ಜತೆಗೆ ನಮ್ಮಿಬ್ಬರ ಪ್ರಕಟಿತ ಕೆಲವು ಕೃತಿಗಳನ್ನೂ ಚಿತ್ರೀಕರಿಸಿದರು.
* ನಾರಾಯಣ ಪ್ರಸಾದರ ಏಕವ್ಯಕ್ತಿಯ ಸಾಹಸದ ಈ ಸಾಂಸ್ಕೃತಿಕ ದಾಖಲೆಗೆ ಶುಭಕೋರಿ, ಅವರಿಗೆ ಕೃತಜ್ಞತೆ ಅರ್ಪಿಸುವೆ.
* ನೋಡಲು Blogs: “Napsonic”
* “Napskannada”. ಹಾಗೂ U tube ಮೂಲಕ ನೋಡಬಹುದು





0 Comments