ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಮಟೆ..

ಡಿ.ಬಿ.ರಜಿಯಾ

ಕಾರ್ಪೊರೇಟ್ ದೊರೆಗಳ
ಸೂತ್ರ ಹಿಡಿದ ವ್ಯವಸ್ಥೆ
ತ್ಯಜಿಸಲು ಕರೆಕೊಟ್ಟ
ಧೀರ ರೈತರು-
ಗಹಗಹಿಸಿ ನಗುವ
ಅಬ್ಬರಿಸಿ ಬೊಬ್ಬಿಡುವ
ಜಿಯೋ ಜಗತ್ ಜಾಹೀರರೇ-
ಸೌಧ ಕಟ್ಟುವ
ಅನ್ನಕ್ಕೆ ಕನ್ನ ಹಾಕುವ
ಖದೀಮರೇ ಎಲ್ಲೆಡೆಯೂ
ಯಾರ್ಯಾರಿಗೆ ಬೀಸಣಿಕೆಯಾದ
ಈ ಜನ ನಮ್ಮ ಭಾಷೆ, ಬಟ್ಟೆ, ಆಹಾರ
ಕಳಚಿದ ವರ್ತನೆಗೆ-
“ಶ್ರಮದ ಒಳತಾಕತೇ ವಾಸ್ತವ”

ದೇಶದ ಬೆನ್ನೆಲುಬಾದ ಅನ್ನದಾತನ
ನಡ ಮುರಿದು ನಡೆಯುವ
ಕೊಳಕಾದ ಕೊಳೆತ ನೈತಿಕತೆ-
ಮಾತು ಮಾತು ಮನದ ಮಾತಾಗಿ
ಲಜ್ಜೆಗೇಡಿ ನುಡಿಯ;
ನಡೆ ನಡುಗಿಸಲಾಗದು
ಈ ಶ್ರಮ ಸಂಸ್ಕೃತಿಯ ತಮಟೆ
ಮತ್ತೆ-ಮತ್ತೆ ಬಾರಿಸಿ
ದುಮ್ಮಾನ ಘೋಷಿಸಬೇಕಿದೆ
ಬಂದೂಕು ಮದ್ದಿನ ಗುಂಡು
ಅಂತ್ಯವಾಗಿಸದೋ ಅನ್ನವ
ಅದು ಮೊಳೆವ ಬೀಜ
ಮೊಳೆಯುತ್ತದೆ… ಬಿತ್ತಿನಂತೆ.

‍ಲೇಖಕರು Avadhi

22 December, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading