ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಣ್ಣಗೆ ಉರಿಯೆಂದು ಚಂದ್ರ ತಿಳಿಸಿಕೊಟ್ಟ..

ದೀಪದಿರುಳು

ತಣ್ಣಗೆ ಉರಿಯೆಂದು
ಚಂದ್ರ ತಿಳಿಸಿಕೊಟ್ಟ
ತಂತಾನೆ
ಆರಿಬಿಡೆಂದು
ಸೂರ್ಯ ಹೇಳಿಕೊಟ್ಟ

ಮಿನುಗು ನಕ್ಷತ್ರ,
ಬೊಗಸೆಯಲಿ
ಕಿಡಿ ಹಚ್ಚಿತು

ದಾರಿದೀಪವಾಗು
ತಾರಮಂಡಲ
ದಾರಿ ತೋರಿತು

ಮೈಮರೆತು ಬೆಳಗು,
ಕಣ್ಣಿಟ್ಟು ಕಲಿಸಿ….
ತಿರುಳು

ದೀಪ,
ಬಿಡುಗಣ್ಣ ಮಾಡಿ
ಹೊದ್ದು ಮಲಗದೆ
ಸೋಜಿಗಪಟ್ಟಿತು;
ಲಾಲಿ ಹಾಡುವಿರುಳ
ನೋಡಿ,
ಇದೇನು?
ಇರುಳೇ? ಬೆಳಗೇ?

ಮಂಪರಿಡಿದು,
ಹಿಡಿದು, ತೂಕಡಿಸಿ
ಬಿದ್ದಿತು ದೀಪ
ಬೆಳಕು!
ಸೂರ್ಯನೆದ್ದು ಆಗ
ಆಕ…..ಳಿಸಿ ನಕ್ಕ.

ತನ್ನೇ ಮರೆತ ದೀಪ
ಲೀನ ತಲ್ಲೀನ
ಅವನರಿವ ಧ್ಯಾನ
ನೆರಳ ಗ್ಯಾನ.

 

ದೀಪ ಮತ್ತು ಪತಂಗ

 

ದೀಪಕ್ಕಷ್ಟೆ ಗೊತ್ತು!

ಪತಂಗದ ರೆಕ್ಕೆಗಳೆಷ್ಟು?

ರೆಕ್ಕೆ ಸುತ್ತುವ ವೇಳೆ

ದೀಪ, ಮೈದುಂಬಿದ,

ಭ್ರಮರ!

ಎಣಿಕೆ ತಪ್ಪಿತೋ ಹೇಗೆ?

ತಣ್ಣನ ಉರಿಗೂ

ಶಾಖ ತೀವ್ರತೆ

ಸುಟ್ಟಿದ್ದು,

ರೆಕ್ಕೆಯೊಂದೇ ಅಲ್ಲ!

ಬೆಳಕಿನ ಅಂಚು ಕೂಡ

 

ಸುಟ್ಟುಕೊಂಡಿತು ತನ್ನತಾನೆ

ಎದೆಯ ಹೊಯ್ಯುವ ಶಾಖ

ಶಬ್ಧ, ನಿಶ್ಯಬ್ಧ! ದುಖಃ

ಕರಗಿ ಧರೆಗೆ

ಇಳಿದ ಬೆಳಕು.

ಮಾಗಿದ ಜೀವ, ಮೆಲುಕು

 

ಬಿದಿರಿನ ಸಖ್ಯ,

ಎಷ್ಟೊತ್ತು?

ರಾಧೆ ಬಳಿ,

ಇದ್ದಷ್ಟೇ ಹೊತ್ತು.

 

ಉಲಿದಿದ್ದೇನು?

ಕೊಳಲು

ಕಾಡಿನೆದೆಯಲಿ….

 

ಉಳಿದಿತ್ತೇನು?

ಕೊರಳು

ಹಾಡಿನೆದೆಯಲಿ

 

ಕ್ರಷ್ಣಾ…..

ದೇವನಾದ ಗೊಲ್ಲ,

ಮತ್ತೆ ಹುಲ್ಲಾಗ….ನಲ್ಲ.

 

ದಟ್ಟಡವಿಯಿರುಳು

ಬಿದಿರು, ಕೊಳಲು,

ದೀಪದುಳು

ಮಿಣುಕು,

ದಣಿವು

ಯಮುನೆ ಹರಿವು 

‍ಲೇಖಕರು Admin

15 October, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading