ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ತಂಬಿ' ಕವಿತೆಗಳು

ಕಾಳಿಮುತ್ತು ನಲ್ಲತಂಬಿ 

 
ಕೊಲೆ
crow hangಒಬ್ಬನನ್ನು
ಕೊಲೆ ಮಾಡಲು
ಬಹಳ ಉಪಾಯಗಳಿವೆ
ಅನ್ನದಲ್ಲಿ ಸ್ವಲ್ಪ
ವಿಷ ಬೆರಸಿಬಿಡಬಹುದು
ಒಂದು ಹಗ್ಗವ ಕೊರಳಿಗೆ ಸುತ್ತಿ
ನೇಣು ಹಾಕಬಹುದು
ಬೆನ್ನನ್ನು ಚಾಕುವಿನಿಂದ
ಇರಿದು ಬಿಡಬಹುದು
ದಾರಿಯಲ್ಲಿ ಒಂದು ವಿಪತ್ತಿಗೆ
ಗುರಿ ಮಾಡಬಹುದು
ನಿದ್ರಿಸುವಾಗ ದಿಂಬಿಂದ
ಮುಖವ ಅದುಮಿ ಉಸಿರ ನಿಲ್ಲಿಸಬಹುದು
ಎತ್ತರವಾದ ಕಟ್ಟಡದ ಮೇಲಿಂದ
ತಳ್ಳಿಬಿಡಬಹುದು
ಹೀಗೆ ಇನ್ನೂ ಎಷ್ಟೋ ದಾರಿಗಳ
ಕಂಡುಕೊಳ್ಳಬಹುದು
ಆದರೆ
ಕಹಿ ಮಾತುಗಳ ಜೇನಲ್ಲಿ ತೊಯ್ದು
ಎದೆಯೊಳಗೆ ಸುರಿಯುತ್ತಾರೆ
ಚೂಪಾದ ಭಾಷೆಗೆ ಬೆಣ್ಣೆ ಹಚ್ಚಿ
ಹೃದಯವ ಚುಚ್ಚುತ್ತಾರೆ
ಮುಳ್ಳಂತ ಪದಗಳಿಗೆ
ರೇಷ್ಮೆ ಉಡುಗೆ ತೊಡಿಸಿ
ಅಂದ ನೋಡುತ್ತಾರೆ
ಆಮ್ಲದಲಿ ಅದ್ದಿದ ಅಕ್ಷರಗಳ
ಮುಖದಮೇಲೆ ಎರಚುತ್ತಾರೆ
ಆದರೆ
ಮಾತುಗಳೋ ಬಹಳ ಜಾಣರು
ಅದ ಆಲಿಸಿದವರನ್ನು ಒಮ್ಮೆಯೂ
ಅದು ಅವಮಾನಗೊಳಿಸುವುದಿಲ್ಲ
ಆಡಿದವರ ಮಾತ್ರ ಆಸಹ್ಯಗೊಳಿಸದೆ
ಬಿಡುವುದೇ ಇಲ್ಲ
 
ಪರಸ್ಪರ ತುರಿಸಿಕೊಂಡೆವು
hanging shirtಇಬ್ಬರು ಪರಸ್ಪರ
ಬೆನ್ನು ತುರಿಸಿಕೊಂಡೆವು
ಉಗುರ ಸಂದಿಯಲ್ಲಿ ರಕ್ತ
ಕೈಗಂಟಿದ ತೊಗಲಿನ ಚೂರುಗಳು
ನಮ್ಮ ಪ್ರೇಮದ ನವೆ ಶಮನವಾಯಿತು.
ಇಬ್ಬರು ಪರಸ್ಪರ
ಬೆನ್ನು ತುರಿಸಿಕೊಂಡೆವು
ಉಗುರ ಸಂದಿಯಲ್ಲಿ ರಕ್ತ
ಕೈಗಂಟಿದ ತೊಗಲಿನ ಚೂರುಗಳು
ನಮ್ಮ ಕವನಗಳು ಸಾರ್ಥಕವಾದವು.
ಇಬ್ಬರು ಪರಸ್ಪರ
ಬೆನ್ನು ತುರಿಸಿಕೊಂಡೆವು
ಉಗುರ ಸಂದಿಯಲ್ಲಿ ರಕ್ತ
ಕೈಗಂಟಿದ ತೊಗಲಿನ ಚೂರುಗಳು
ನಮ್ಮ ರಾಜಕೀಯದ ತೀಟೆ ತೀರಿತು.

‍ಲೇಖಕರು Avadhi

24 November, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading