ಭೂಮಿಗಂಟಿದ ಧ್ಯಾನ ..
ಎಂ ಎಂ ಶೇಖ್ ಯಾದಗಿರಿ

ನಿರೀಕ್ಷೆಗಂಟಿಕೊಂಡು ಕೊರಗುವ ತಲ್ಲಣಗಳಿಗೆ
ಅಲೆಗಳ ತರೆಹವಾರಿ ಒಡನಾಟಗಳು ಒರೆಗೆ
ಹಚ್ಚುತ್ತವೆ. ಖಾಲಿ ಬದುಕ ಪಾರಿವಾಳಗಳು
ಸಿಕ್ಕಿದ್ದನ್ನು ಕುಟುಕುತ್ತವೆ ಸುತ್ತಲೂ ನಿಗಾ ಇಟ್ಟು .
ಕಾಂಕ್ರಿಟ್ ಯೋಚನೆಗಳು ಬೇಡ ಸಖಿ ತೀರ್ಮಾನಕ್ಕೆ
ನನ್ನೆದೆಯ ದನಿ ಕೇಳು ನಿನ್ನೆದೆಯ ತೆರೆದಿಟ್ಟು
ತಂಗಾಳಿ ಹೊತ್ತು ತರುವ ಪರಿಮಳಕ್ಕೆ
ನನ್ನ ಹಗಲು ರಾತ್ರಿಗಳು ಜೀತಕುಂಟು .
ಈ ನೆಲಕ್ಕೆ ನಾ ಬದ್ದವಾಗಿರಬೇಕು ಇಲ್ಲಿರುವುದು
ನನ್ನ ಮನೆ ಅದರ ಮುಂದಿರುವ ಗಿಡಕ್ಕೆ
ಈ ಮನೆಗೇ ನೆರಳು ಗಾಳಿ ಒದಗಿಸುವ ತವಕವಿಲ್ಲ..
ನಿಜ ನನ್ನ ಆಯಸ್ಸು ಪ್ರಾರ್ಥನೆಗೆ ಕಾದಂತೆ .
ಆತ್ಮದ ಪಿಸುಮಾತುಗಳು ಗಿಡದ ಬೇರುಗಳು
ಉಸಿರಾಡುತ್ತವೆ ನನ್ನ ಆಸ್ತಿತ್ವಕ್ಕೆ ಸಾಧ್ಯತೆಗಳು .






ಸುಂದರ ಆಲಾಪದ ಕವನ…ಸ್ವಗತವೇ?
– ಗಹನ ಅರ್ಥ ಹೊಮ್ಮಿಸುವ ಸತ್ವಪೂರ್ಣ ರಚನೆ.
chennagide kavite-smitha.
ಸುಂದರ ಸಾಲುಗಳಿವು ‘…ಈ ಮನೆಗೇ ನೆರಳು ಗಾಳಿ ಒದಗಿಸುವ ತವಕವಿಲ್ಲ’ – ಇಷ್ಟವಾಯಿತು
-ಅನಿಲ ತಾಳಿಕೋಟಿ