ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ತಂಗಾಳಿಯಲ್ಲೂ ಸೂಜಿಮೊನೆ..’ – ಟಿ ಎಸ್ ಗೊರವರ ಕವಿತೆ

ಒಂದು ಕವಿತೆ

ಟಿ ಎಸ್ ಗೊರುವರ


1
ನಿನ್ನ ವಾರೆಗಣ್ಣಿನ ಒಂದು ನೋಟಕ್ಕಾಗಿ
ಸವೆದು ಹೋದ ರಾತ್ರಿ, ಹಗಲಿಗೆ ಲೆಕ್ಕವಿಲ್ಲ
ಚೈತ್ರ ಪಲ್ಲವಿಸದ ಹಾಳು ದಿನಗಳು
ಒಂದಿನವೂ ನವಿಲು ಕುಣಿಯಲಿಲ್ಲ
ಮರೆತೇ ಹೋಗಿತ್ತು ಚೆಂದದ ಹಾಡು, ಹಬ್ಬದ ಬೆಳದಿಂಗಳು.
 
2
ಲೋಕದ ದಂದುಗಗಳೇ ನೂರೆಂಟು
ಹವಾ ಹಿತವಾಗಿಲ್ಲ, ತಂಗಾಳಿಯಲ್ಲೂ ಸೂಜಿಮೊನೆ
ಮನೆಯೊಳಗಿದ್ದೂ ಮನೆ ಮಂದಿಗೆ ಅಪರಿಚಿತರು ನಾವು
ಕ್ಷುಲ್ಲಕವಾಗಿದೆ ಮರದ ಸೊಬಗು, ಪಾತರಗಿತ್ತಿಯ ಸಂಭ್ರಮ
ಎಡವಿದ ವಸಂತನ ಕಾಲಿಗೆ ಮಾಯದ ಗಾಯವಾಗಿದೆ.
3
ಉದುರುವ ಎಲೆ ಉದರಿ ಹೋಗಲಿ
ಬಿಸಿಲೊಳಗಿನ ತುಸುವೇ ನೆರಳು ಸಾಕೆನಗೆ
ಗೊತ್ತಾಗುವುದಿಲ್ಲ ಲೌಕಿಕದ ರಾಜಕಾರಣಕ್ಕೆ
ಪ್ರೇಮದ ಧೂಳಿಯೂ ಧೂಮಪಾನ ಅದಕ್ಕೆ
4
ನಿನ್ನದೊಂದು ಮುಗುಳ್ನಗೆ, ಕಾಲ್ಗೆಜ್ಜೆಯ ಇಂಪು
ಮೋಡದ ಮುಕ್ಕು ಹನಿ, ಮಣ್ಣ ವಾಸನೆ
ಕಾಯುವ ದಣಿವಿಗಿಂತ ಮಿಗಿಲು ;
ಇಷ್ಟು ಸಾಕು ಜೀವಚೈತ್ರ ಪಲ್ಲವಿಸಲು.
 
 

‍ಲೇಖಕರು G

15 February, 2013

2 Comments

  1. Anonymous

    ಎಡವಿದ ವಸಂತನ ಕಾಲಿಗೆ ಮಾಯದ ಗಾಯವಾಗಿದೆ. supper

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading