'ಡ್ರಾಮಾ ಜ್ಯೂನಿಯರ್ಸ್' ಮಕ್ಕಳನ್ನು ಅದೆಲ್ಲಿಂದ ತಂದರೋ?

s c dinesh kumar

ದಿನೇಶ್ ಕುಮಾರ್ 

ಯಾವ ದೃಷ್ಟಿಯಿಂದ ನೋಡಿದರೂ ಕನ್ನಡ ಟಿವಿಯಲ್ಲಿ ಬರುತ್ತಿರುವ ಅತ್ಯುತ್ತಮ ಕಾರ್ಯಕ್ರಮ ಡ್ರಾಮಾ ಜೂನಿಯರ್ಸ್.
ನನಗೆ ತಿಳಿದಂತೆ ಇದು ಇನ್ಯಾವುದೋ ಭಾಷೆ ಕಾರ್ಯಕ್ರಮದ ರೀಮೇಕ್ ಅಲ್ಲ.
ಎಲಿಮೇಷನ್ ಇದ್ರೂ ಇಲ್ಲಿ ಇತರೆ ಶೋಗಳ ಹಾಗೆ ಗೋಳು, ಅಳು ಇತ್ಯಾದಿ ಇಲ್ಲ. ಸ್ಪರ್ಧಿಗಳ ಹಿನ್ನೆಲೆ, ಬಡತನ, ವೈಕಲ್ಯತೆ ಇಟ್ಟುಕೊಂಡು ತರೇವಾರಿ ಗಿಮಿಕ್ಕುಗಳನ್ನು ಮಾಡುವ ಗೋಜು ಇಲ್ಲಿಲ್ಲ.
drama juniors2ಲಕ್ಷ್ಮಿ ಇಲ್ಲಿ ತೀರ್ಪು ಹೇಳೋದಕ್ಕೆ ಬಂದಿರೋದಕ್ಕಿಂತ ಹೆಚ್ಚಾಗಿ ಅಕ್ಕರೆಯ ಅಮ್ಮಳಂತೇ ಕಾಣುತ್ತಾರೆ. ಟಿ.ಎನ್.ಸೀತಾರಾಂ ಪಾಠ ಕೊರೆಯದ ಮೇಷ್ಟ್ರಾಗಿ ಮಕ್ಕಳ ಅಭಿನಯಕ್ಕೆ ಮಗುವಿನಂತೆಯೇ ಕರಗುತ್ತಾರೆ. ವಿಜಯ ರಾಘವೇಂದ್ರ ಮಕ್ಕಳೆದುರು ತೋರುವ ವಿನಯಕ್ಕೆ ಬೆರಗು ಮೂಡುತ್ತದೆ. ಇನ್ನು ನಿರೂಪಕ ಮಾಸ್ಟರ್ ಆನಂದ್ ಮಕ್ಕಳಲ್ಲಿ ಮಗುವಾಗಿ ಹೋಗಿದ್ದಾರೆ.
ಇದೆಲ್ಲ ಒಂದು ತೂಕವಾದರೆ ಡ್ರಾಮಾ ಜ್ಯೂನಿಯರ್ಸ್ ನ ಮಕ್ಕಳನ್ನು ಅದೆಲ್ಲಿಂದ ತಂದರೋ? ಯಾವ ಗಂಧರ್ವ ಲೋಕದಿಂದ ಧರೆಗಿಳಿದು ಬಂದವರೋ ಅವರು? ಅವರ ಅಭಿನಯಕ್ಕೆ ಸಾಟಿ ಇಲ್ಲ. ತುಷಾರ್, ಪುಟ್ಟರಾಜು, ತೇಜಸ್ವಿನಿ, ಚಿತ್ರಾಲಿ, ಮಹೇಂದ್ರ, ನಿಹಾಲ್, ರೇವತಿ, ಮಹತಿ, ಅಚಿಂತ್ಯ, ಅಭಿಷೇಕ್, ಸೂರಜ್ , ಅಮೋಘ… ಇತ್ಯಾದಿ ಎಲ್ಲ ಮಕ್ಕಳೂ ಅದ್ಭುತ.
ಜೀ ಟೀವಿಯ ಪೂರ್ಣ ತಂಡಕ್ಕೆ, ಇಂಥ ಕಾರ್ಯಕ್ರಮವನ್ನು ರೂಪಿಸಿದ ಮೆದುಳುಗಳಿಗೆ, ಎಲ್ಲರಿಗೂ ಕೋಟಿ ಥ್ಯಾಂಕ್ಸ್… ಅಂದಹಾಗೆ, ಕಳೆದ ವಾರ ರಾಷ್ಟ್ರಕವಿ ಕುವೆಂಪು ಅವರ ‘ಜಲಗಾರ’ ನಾಟಕವನ್ನು ಈ ಮಕ್ಕಳು ಅಭಿನಯಿಸಿದರು, ಮೈ ಜುಂ ಎನಿಸಿತು. ನೋಡದಿದ್ದವರು ಒಮ್ಮೆ ನೋಡಿ, ಕಣ್ಣು ತೇವಗೊಳ್ಳದೇ ಇರದು..
CkJJPV-WEAArJMr
drama juniors3

‍ಲೇಖಕರು Avadhi

July 27, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Vikram Nayak

    ದಿನೇಶ್ ಕುಮಾರ್ ಅವರೇ,
    ಡ್ರಾಮಾ ಜ್ಯೂನಿಯರ್ಸ್ ಹಿಂದಿಯ ‘ಡ್ರಾಮೇ ಬಾಜ್’ ನ ಕನ್ನಡ ಅವತರಣ. ಆದರೆ ಮಕ್ಕಳ ಪ್ರತಿಭೆ ಯಾವ ರೀಮೇಕೂ ಅಲ್ಲ ಎಂದು ನಿಶ್ಶಂಶಯವಾಗಿ ಒಪ್ಪಿಕೊಳ್ಳಲೇಬೇಕು.

    ಪ್ರತಿಕ್ರಿಯೆ
  2. Sangeeta Kalmane

    ವೀಕ್ಷಕರು ಮೈಮರೆಯುವಷ್ಟು ನಗುವಿನಲ್ಲಿ ಮುಳುಗಿಸುವಷ್ಟು ಮಕ್ಕಳ ಅಭಿನಯ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: