ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಹಸನ್ ನಯೀಂ ಸುರಕೋಡರ 'ಒಬ್ಬ ಕೈದಿಯ ಕತೆ’

ಹಸನ್ ನಯೀಂ ಸುರಕೋಡ

ಪ್ರಸಿದ್ಧ ಉರ್ದು ಕವಿ ಮೌಲಾನಾ ಹಸ್ರತ್ ಮೊಹಾನಿ ಮುಂಚೂಣಿಯ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ನಿರ್ಭೀತ ಪತ್ರಕರ್ತರೂ ಆಗಿದ್ದರು.ಒಮ್ಮೆ ಅವರ ‘ಉರ್ದು-ಎ-ಮೊಲ್ಲಾ’ದಲ್ಲಿ ಪ್ರಕಟವಾಗಿದ್ದ ಲೇಖನ ಬ್ರಿಟಿಷ್ ಸರ್ಕಾರವನ್ನು ವಿಪರೀತ ಕೆರಳಿಸಿತ್ತು. ಸರ್ಕಾರ ಲೇಖಕನ ವಿಳಾಸವನ್ನು ತಿಳಿಸಲು ಮೌಲಾನಾರನ್ನುಸೂಚಿಸಿತು. ಸಂಪಾದಕರಾಗಿದ್ದ ಮೌಲಾನಾ ಲೇಖಕನ ಕೋರಿಕೆ ಮೇರೆಗೆ ಅವರ ಹೆಸರನ್ನು ಹಾಕಿರಲಿಲ್ಲ. ಆದರೆ ಸರ್ಕಾರ ಮೌಲಾನಾರನ್ನು ಪೀಡಿಸುತ್ತಲೇ ಇತ್ತು. ಕೊನೆಗೆ ಸಂಪಾದಕನಾಗಿ ನಾನು ನಮ್ಮ ಲೇಖಕರನ್ನು ರಕ್ಸಿಸುವುದು ನನ್ನ ಧರ್ಮ. ನೀವು ನನ್ನ ವಿರುದ್ಧ ಕ್ರಮ ಕೈಗೊಳ್ಳಬಹುದೆಂದು ತಿಳಿಸಿದರು.

ಕಡೆಗೆ ಅವರನ್ನು ಬಂಧಿಸಿ ಜೈಲಿಗಟ್ಟಿತು. ಮೌಲಾನಾ ಅವರ ಜೈಲು ಡೈರಿ ಒಂದು ಐತಿಹಾಸಿಕ ದಾಖಲೆಯಾಗಿತ್ತು.  ಅದನ್ನು ಅನುವಾದಿಸುವುದರ ಜೊತೆಗೆ ಅವರು ತಮ್ಮ ಮಡದಿಗೆ ಜೈಲಿನಿಂದ ಬರೆದಿದ್ದ ಪತ್ರಗಳನ್ನು ಹಾಗೂ ಮೌಲಾನಾರ ಕೆಲವು ಗಜಲ್‍ಗಳನ್ನು ಅನುವಾದಿಸಿ ಸುರಕೋಡರು ಮೌಲಾನಾ ಕುರಿತ ಈ ಪುಸ್ತಕ ರೂಪಿಸಿದ್ದಾರೆ. ಇದೀಗ ‘ಒಬ್ಬ ಕೈದಿಯ ಕತೆ’ ಮಾರುಕಟ್ಟೆಯಲ್ಲಿ ಲಭ್ಯವಿದೆ.
 

‍ಲೇಖಕರು G

22 April, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading