ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಮಧು ಲಿಮಯೆ ಅವರ ’ಆತ್ಮಕಥೆ’

ಮಧು ಲಿಮಯೆ
ಅನುವಾದ: ಡಾ. ಸರಜೂ ಕಾಟ್ಕರ್
ಭಾರತದ ರಾಜಕೀಯ ಕ್ಷಿತಿಜದ ಮೇಲೆ ಪ್ರಕಾಶಮಾನರಾಗಿ ಬೆಳಗಿದ ಮಧು ಲಿಮಯೆಯವರ  ಆತ್ಮಕಥೆ ಇದು. ತುರ್ತು  ಪರಿಸ್ಥಿತಿ ಕಾಲದಲ್ಲಿ ಸರ್ವಾಧಿಕಾರಿ ಸರ್ಕಾರ ಅವರನ್ನು ಬಂಧಿಸಿ ಜೇಲಿನಲ್ಲಿಟ್ಟಿದ್ದಾಗ ಮಧು ಲಿಮೆಯ ತಮ್ಮ ಆತ್ಮಕಥೆಯನ್ನು ಬರೆಯಲಾರಂಭಿಸಿದರು. ಪ್ರತಿದಿನ ಬೆಳಿಗ್ಗೆ ಎರಡು ಗಂಟೆಗಳ ಕಾಲ ನಿಯಮಿತವಾಗಿ ಅವರು ತಮ್ಮ ನೆನಪುಗಳನ್ನು ಬರೆದಿಟ್ಟರು. 1977 ರಲ್ಲಿ ತುತು೵ ಪರಿಸ್ಥಿತಿ ರದ್ದಾಗಿ ಸವಾ೵ಧಿಕಾರಿ ಸಕಾ೵ರ ಚುನಾವಣೆಯಲ್ಲಿ ಪತನಗೊಂಡ ನಂತರ ಮಧು ಲಿಮಯೆ ರಾಜಕೀಯದಲ್ಲಿ ಸಕ್ರಿಯರಾಗಿದ್ದರಿಂದ,ಆತ್ಮಕಥೆಯ ಮುಂದಿನ ಪುಟಗಳು ಅಲ್ಲಿಯೇ ನಿಂತು ಬಿಟ್ಟಿದ್ದವು. ಮಧು ಲಿಮಯೆಯವರ ಪತ್ನಿ ಚಂಪಾ, ಲಿಮಯೆಯವರನ್ನು ಒಂದೆಡೆಗೆ ಕೂಡ್ರಿಸಿ, ಆತ್ಮಕಥೆ ಮುಂದುವರೆಯುವಂತೆ ನೋಡಿಕೊಂಡರು. ಮಧು ಲಿಮಯೆ ತಮ್ಮ ಾತ್ಮಕಥೆಯನ್ನು ಮೂರು ಖಂಡಗಳಲ್ಲಿ ಬರೆಯುವ ಸಂಕಲ್ಲಪ ಮಾಡಿದ್ದರು. ಮೊದಲ ಖಂಡ ಸ್ವಾತಂತ್ಯ್ರ ಪಡೆದ ದಿನ(ಆಗಸ್ಟ್ 15, 1947) ಕ್ಕೆ ಮುಕ್ತಾಯಗೊಂಡಿದ್ದರೆ. ಎರಡನೆಯ ಖಂಡದಲ್ಲಿ 1947 ರಿಂದ 1964 ವರೆಗಿನ ಭಾರತದ ರಾಜಕೀಯ ಪರಿಸ್ಥಿತಿ, ಸಮಾಜವಾದಿ ಪಕ್ಷ, ಗೋವಾ ಮುಕ್ತಿ ಸಂಗ್ರಾಮ ಹಾಗೂ ಮೂರನೆಯ ಖಂಡದಲ್ಲಿ 1964 ನಂತರದ ತಮ್ಮ ಲೋಕಸಭೆಯ ದಿನಗಳ ನೆನಪುಗಳನ್ನು ಮಧು ಲಿಮಯೆ ದಾಖಲಿಸುವವರಿದ್ದರು. ಮೊದಲ ಖಂಡ 24 ಡಿಸೆಂಬರ್ 1994 ರಂದು ಮುಕ್ತಾಯವಾಯಿತು. ಎರಡನೆಯ ಖಂಡವನ್ನು ಆರಂಭಿಸಬೇಕೆನ್ನುವಷ್ಟರಲ್ಲಿ 8 ಜನೇವರಿ 1995 ರಂದು ಮಧು ಲಿಮಯೆ ಆಕಸ್ಮಿಕವಾಗಿ ನಮ್ಮನ್ನು ಆಗಲಿದರು. ಹೀಗಾಗಿ ಲಿಮಯೆಯವರ ಆತ್ಮಕಥೆಯ ಮುಂದಿನ ಭಾಗಗಳು ಅಪೂರ್ಣವಾಗಿಯೇ ಉಳಿದವು.
ಕನ್ನಡದ ಖ್ಯಾತ ಲೇಖಕರಾದ ಡಾ. ಸರಜೂ ಕಾಟ್ಕರ್ ಮರಾಠಿಯಲ್ಲಿದ್ದ ಮಧು ಲಿಮಯೆಯವರ ಆತ್ಮಕಥೆಯನ್ನು ಕನ್ನಡಕ್ಕೆ ತಂದಿದ್ದಾರೆ. ಡಾ. ಸರಜೂ ಕಾಟ್ಕರ್ ಸಮಾಜವಾದಿ ಚಳುವಳಿಯ ಹಿನ್ನೆಲೆಯುಳ್ಳವರು. ಇದು ಕಾಟ್ಕರ್ ಅವರ ಐವತ್ತನೇ ಕೃತಿ. ಮಧು ಲಿಮಯೆಯವರಂತೆಯೇ ಡಾ. ಸರಜೂ ಕಾಟ್ಕರ್ ರ ಬರಹದ ಶೈಲಿಯೂ ಕೃತಿಯಲ್ಲಿಯೂ ಇರುವುದು ಈ ಕೃತಿಯ ವೈಶಿಷ್ಟ್ಯ.

‍ಲೇಖಕರು avadhi

3 February, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading