ಡಾ. ಪ್ರಕಾಶ ಖಾಡೆ ಅವರಿಗೆ ಶಿವಯೋಗಿ ಕಳಸದ ಪ್ರಶಸ್ತಿ ಪ್ರದಾನ

ಸಾಹಿತ್ಯ ಕ್ಷೇತ್ರದ ಸಾಧನೆಗೆ ಡಾ. ಪ್ರಕಾಶ ಖಾಡೆ : ಗಣರಾಜ್ಯೋತ್ಸವ ಸತ್ಕಾರ
ಡಾ. ಪ್ರಕಾಶ ಖಾಡೆ

ಬಾಗಲಕೋಟ –ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಲ್ಲಿಸಿದ ಸಾಧನೆಯನ್ನು ಪರಿಗಣಿಸಿ ಸಾಹಿತಿ ಡಾ.ಪ್ರಕಾಶ ಖಾಡೆ ಅವರಿಗೆ 2014 ನೇ ಸಾಲಿನ ಗಣರಾಜ್ಯೋತ್ಸವ ಪ್ರಶಸ್ತಿ ನೀಡಿ ಜಿಲ್ಲಾಡಳಿತ ವತಿಯಿಂದ ಸತ್ಕರಿಸಲಾಯಿತು. ವಿದ್ಯಾರ್ಥಿದೆಸೆಯಿಂದ ಬರವಣಿಗೆ ಆರಂಭಿಸಿರುವ ಡಾ. ಪ್ರಕಾಶ ಗಣಪತಿ ಖಾಡೆಯವರು ಜಮಖಂಡಿ ತಾಲೂಕಿನ ತೊದಲಬಾಗಿಯಲ್ಲಿ 10 ನೇ ಜೂನ 1965 ರಲ್ಲಿ ಜನಿಸಿದರು. ತೊದಲಬಾಗಿ, ಕೆರೂರು,ಇಳಕಲ್ಲಗಳಲ್ಲಿ ಓದಿ ಸ್ನಾತಕೋತ್ತರ ಪದವಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಕನ್ನಡ ವಿಭಾಗದಲ್ಲಿ ಪೂರೈಸಿಕೊಂಡ ಇವರು ಎಸ್.ಎಲ್.ಇ.ಟಿ(ಸೆಟ್) ಪರೀಕ್ಷೆಯಲ್ಲೂ ತೇರ್ಗಡಯಾಗಿದ್ದಾರೆ. ‘ನವೋದಯ ಕಾವ್ಯದ ಮೇಲೆ ಜಾನಪದದ ಪ್ರಭಾವ’ ಎಂಬ ವಿಷಯದ ಮೇಲೆ ಸಂಶೋಧನಾ ಮಹಾ ಪ್ರಬಂಧವನ್ನು ಸಿದ್ದಪಡಿಸಿ 2005 ರಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ ಡಾಕ್ಟರೇಟ್ ಪದವಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು 20 ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಕೃಷ್ಣಾತೀರದ ಜನಪದ ಒಗಟುಗಳು, ನೆಲಮೂಲ ಸಂಸ್ಕೃತಿ, ಜಾನಪದ ಲೋಕ, ಮೌನ ಓದಿನ ಬೆಡಗು, ಕನ್ನಡ ಪತ್ರಿಕೆ ಮತ್ತು ಸಾಹಿತ್ಯ, ಸಾಹಿತ್ಯ ಸಂಗತಿ, ಮುಂತಾದ ಕೃತಿಗಳು ಪ್ರಕಟವಾಗಿವೆ.2008 ರಿಂದ 2012 ರವರೆಗೆ ಬಾಗಲಕೋಟ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಗೌರವ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಸಾಧನೆಗೆ ಸಂದ ಪ್ರಶಸ್ತಿಗಳು ಅನೇಕ  ಅವುಗಳಲ್ಲಿ ಬೇಂದ್ರೆ ಸಾಹಿತ್ಯ ಪ್ರಶಸ್ತಿ, ಹುಬ್ಬಳ್ಳಿಯ ಬೊಮ್ಮಾಯಿ ಪ್ರತಿಷ್ಠಾನ ಪ್ರಶಸ್ತಿ ಮತ್ತು ಸಂಕ್ರಮಣ ಸಾಹಿತ್ಯ ಪ್ರಶಸ್ತಿಗಳು ಪ್ರಮುಖವಾದವುಗಳು.ಇವರ ತಂದೆ ಜಿ.ಬಿ.ಖಾಡೆ ಜಾನಪದ ವಿದ್ವಾಂಸರಾಗಿದ್ದಾರೆ.
ಬದಲಾಗುತ್ತಿರುವ ಮತ್ತು ತೀವ್ರಗತಿಯಿಂದ ಸ್ಪಂದಿಸುತ್ತಿರುವ ಆಧುನಿಕ ತಂತ್ರಜ್ಞಾನದೊಂದಿಗೆ ತಮ್ಮ ಸಾಹಿತ್ಯವನ್ನೂ ಸಮನ್ವಯಗೊಳಿಸಿಕೊಂಡ ಡಾ.ಖಾಡೆ ಅವರು ಕನ್ನಡ ಪ್ರಮುಖ ಬ್ಲಾಗ ಪತ್ರಿಕೆಗಳಲ್ಲಿ ವಿಶೇಷ ಲೇಖನ, ಕವಿತೆಗಳನ್ನು ನಿರಂತರವಾಗಿ ಬರೆಯುತ್ತಿದ್ದಾರೆ.ಸಾಹಿತ್ಯ ಸಂಗಾತಿ, ಖಾಡೆ @ ಮುನ್ನುಡಿ, ಖಾಡೆ@ಜಾನಪದ, ಖಾಡೆ ಕವಿತೆಗಳು,ಸಾಹಿತ್ಯ ಸಿರಿ ಹೀಗೆ ಐದಕ್ಕೂ ಹೆಚ್ಚು ಬ್ಲಾಗ ಪತ್ರಿಕೆಗಳನ್ನು ಸ್ವತಃ ರೂಪಿಸಿ ಅವುಗಳಲ್ಲಿ ವಿದ್ವತ್ ಪೂರ್ಣ ಲೇಖನಗಳನ್ನು ಬರೆಯುತ್ತಿದ್ದಾರೆ,  ಫೇಸಬುಕ್ ದಲ್ಲಿ ನಿತ್ಯ ಬರೆಯುತ್ತಿರುವ ನಾಲ್ಕು ಸಾಲಿನ ಪದ್ಯಗಳು ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿವೆ. ದೇಶ ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಇವತ್ತು ಇವರ ಬರಹಗಳನ್ನು ಓದುವ ಓದುಗ ವಲಯವನ್ನು ರೂಪಿಸಿಕೊಂಡಿದ್ದಾರೆ,ಇಂಥ ಬಹುಮುಖ ಪ್ರತಿಭೆಯ ಸಾಧಕರನ್ನು ಜನೇವರಿ 26 ರಂದು ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಜಿಲ್ಲಾ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಆಯುಕ್ತರಾದ ಶಿವಯೋಗಿ ಕಳಸದ ಪ್ರಶಸ್ತಿ ನೀಡಿ ಸತ್ಕರಿಸಿದರು. ಜಿಲ್ಲಾ ಉಸ್ತುವಾರಿ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾದ ಎಸ್.ಆರ್.ಪಾಟೀಲ,ಸಂಸದ ಪಿ.ಸಿ.ಗದ್ದಿಗೌಡರ,ಶಾಸಕರಾದ ಎಚ್.ವೈ.ಮೇಟಿ,ಜಿಲ್ಲಾಧಿಕಾರಿ ಮನೋಜ ಜೈನ್,ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮೊದಲಾದವರು ಉಪಸ್ಥಿತರಿದ್ದು ಗೌರವಿಸಿದರು.

‍ಲೇಖಕರು avadhi

February 3, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: