ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : 'ಮಠದ ಹೋರಿ ಮತ್ತು ಇತರ ಕಥೆಗಳು'



ಕಷ್ಟಗಳ ನಡುವೆಯೇ ಹೃದಯವಂತರಾದ, ಸಜ್ಜನಿಕೆಯ ನಡುವೆಯೂ ನಿಷ್ಠುರ ಮನಸ್ಸಿನವರಾದ, ಒರಟು ದೇಹ ಮೃದು ಮನಸ್ಸು, ಜಾತಿವಾದದ ಜಿಗುಟು ಜೊತೆಗೆ ಅನಿರೀಕ್ಷಿತ ಔದರ್ಯ, ಅತ್ಯಂತ ಕಟ್ಟುನಿಟ್ಟಿನ ವಾತಾವರಣದಲ್ಲಿ ಬೆಳೆದ ಹೆಣ್ಣುಮಕ್ಕಳು ಹಾಗೂ ಹೇರಳವಾಗಿ ಕಂಡುಬರುವ ಲೈಂಗಿಕ ಹಗರಣಗಳು ಹೀಗೆ ಹಲವು ತೊಡಕುಗಳ ವರ್ಣರಂಜಿತ ಬದುಕಿನ ಉತ್ತರ ಕರ್ನಾಟಕದ ಸೀಮೆಯಿಂದ ಬಂದಿರುವ ಸತುವುಳ್ಳ ಬರಹಗಾರನಾದ ಹನುಮಂತ ಹಾಲಗೇರಿ ನಮಗೆ ಉಣಬಡಿಸಲಿರುವ ‘ಹುಗ್ಗಿ’ ಇನ್ನೂ ಪಾಕಗೊಳ್ಳುತ್ತಿದೆ. ಆ ಹದ ದಕ್ಕಿಸಿಕೊಳ್ಳುವುದಕ್ಕೆ ಆತನಿಗೆ ಸಾಧ್ಯವಿದೆ ಎಂಬುದರ ಪುರಾವೆಯಾಗಿ ಈಗಾಗಲೇ ಪ್ರಕಟವಾಗಿರುವ ಎರಡು ಕೃತಿಗಳ ಜೊತೆಗೆ ಈ ಮೂರನೇ ಕೃತಿಯೂ ಸೇರಿಕೊಳ್ಳುತ್ತಿದೆ.
ಕತೆಯಲ್ಲಿ ಆತ ವಿವರಗಳನ್ನು ಕಟ್ಟಿಕೊಡಲು ನಿಂತಾಗ ಕಾಣಿಸುವ ಕಥನಗಾರಿಕೆಯ ಕುಶಲತೆ ಕಂಡು ನಾನು ಬಹಳ ಸಂತಸಪಟ್ಟಿದ್ದೇನೆ. ವರ್ತಮಾನದ ವಿವಿಧ ಬವಣೆಗಳನ್ನು ಕಥೆಗಳಾಗಿ ಮಂಡಿಸುವ ಆತನ ಉಮೇದು ಕಥನ ಕಲೆಯ ಅಂತರ್ಗತ ಅಂಶವಾಗಿ ಹೊಮ್ಮುವ ಸಾಮರ್ಥ್ಯದ ಬಗ್ಗೆಯೂ ಆತನ ಕಥೆಗಳು ಪುರಾವೆಯೊದಗಿಸುತ್ತಿವೆ. ಆತನ ಬರವಣಿಗೆಯ ಹಾದಿಯಲ್ಲಿ ಇನ್ನೂ ಭರಪೂರ ಸುಗ್ಗಿಗಳು ಬರಲಿವೆ ಎಂಬ ಭರವಸೆ ಹೊಂದಿದವನಾಗಿ ಈ ಸಂದರ್ಭದಲ್ಲಿ ಆತನಿಗೆ ಶುಭ ಹಾರೈಸುತ್ತಿದ್ದೇನೆ.
ಡಾ. ಬಂಜಗೆರೆ ಜಯಪ್ರಕಾಶ
 
 

‍ಲೇಖಕರು avadhi

20 January, 2014

1 Comment

  1. Madhu Das

    i like it

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading