ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಡೈಲಿ ಬುಕ್ : ಬೆರ್ಟೋಲ್ಟ್ ಬ್ರೆಷ್ಟ್ ಎಂಬತ್ತು ಕವಿತೆಗಳು

ಅನುವಾದ: ಶಾ. ಬಾಲುರಾವ್

ಪ್ರಸ್ತಾವನೆಯಿಂದ ಆಯ್ದ ಭಾಗ
ಕವಿಯಾಗಿ ಬೆರ್ಟೋಲ್ಟ್  ಬ್ರೆಷ್ಟ್
ಜರ್ಮನ್ ಸಾಹಿತಿ ಬೆರ್ಟೋಲ್ಟ್  ಬ್ರೆಷ್ಟ್ ಕನ್ನಡ ಸಾರಸ್ವತ ಪ್ರಪಂಚಕ್ಕೆ ಅವನು ನಮ್ಮವರಲ್ಲೇ ಒಬ್ಬ ಅನ್ನುಷ್ಟರ ಮಟ್ಟಿಗೆ ಪರಿಚಿತ.
ಕಳೆದ ಎರಡು ದಶಕಗಳಲ್ಲಿ ಅವನ ಅನೇಕಪ್ರಮುಖ ನಾಟಕಗಳು ಕನ್ನಡಕ್ಕೆ ಅನುವಾದವಾಗಿ ಮತ್ತೆ ಮತ್ತೆ ರಂಗದ ಮೇಲೆ ಕಾಣಿಸಿಕೊಳ್ಳುತ್ತ ಬಂದಿವೆ.
ಬ್ರೆಷ್ಟ್ ನನ್ನು ನಾವು ಕಂಡಿರುವುದು ಕೇವಲ ನಾಟಕಕಾರನನ್ನಾಗಿ.ಆದರೆ ಅವನಿಗೆ ನಾಟಕದಷ್ಟೇ ಅಥವಾ ಅದಕ್ಕಿಂತ ಹೆಚ್ಚು ಭದ್ರವಾದ ಇನ್ನೂ ಒಂದು ಮುಖವಿದೆ:
ಅವನೊಬ್ಬ ವಿಶ್ವಮಾನ್ಯ ಕವಿ. ಪ್ರಖ್ಯಾತ ಬ್ರಿಟಿಷ್ ಕವಿ ಡಬ್ಲ್ಯೂ. ಎಚ್. ಆಡೆನ್ತಾನು ಯಾರು ಯಾರಿಂದ ಕಾವ್ಯಕಲೆಯನ್ನು ಕಲಿತನೆಂದು ಗುರುತಿಸಿದ ಸುಮಾರು ಹದಿನೈದು ಕವಿಗಳಲ್ಲಿ ಬ್ರೆಷ್ಟ್ ಒಬ್ಬ.
ಕನ್ನಡದ ಮಟ್ಟಿಗೆ ಹೇಳುವುದಾದರೆ, ಅಪರೂಪವಾಗಿಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವ ಒಂದೊಂದು ಕವಿತೆಯನ್ನು ಬಿಟ್ಟರೆ ನಿಜವಾಗಿ ನಾವು ಅವನ ಕವಿರೂಪವನ್ನು ಕಾಣೆವು.
ಈ ಮಾತು ಕರ್ನಾಟಕಕ್ಕೆ  ಏಕೆ, ಅವನಹುಟ್ಟುನಾಡಾದ ಜರ್ಮನಿಗೂ ಅನ್ವಯಿಸುತ್ತದೆಂದರೆ ಆಶ್ಚರ್ಯದ ಮಾತಾಗಬಹುದು.

 

 

‍ಲೇಖಕರು avadhi

20 February, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading