ಡೈಲಿ ಬುಕ್ : ನಾಗೇಂದ್ರ ಬರೆದ ’ರೇಡಿಯೋ ಧ್ವನಿ’

ಬಾನುಲಿ ಒಂದು ರೊಮಾಂಚಕಾರಿ ಮಾಧ್ಯಮ. ಇದರ ಭು ದೊಡ್ಡ ವಿಶೇಷತೆ ‘ವೇಗ’. ಕ್ಷಣಮಾತ್ರದಲ್ಲಿ ಲಕ್ಷಾಂತರ ಶೋತೃಗಳನ್ನು ಮನಮುಟ್ಟಬಲ್ಲ ವಿಶೇಷತೆ ಈ ಮಾಧ್ಯಮಕ್ಕಿದೆ. ನಿಮಗೆ ಕಿರಿಕಿರಿ ಎಣಿಸದೆ, ಸುದ್ದಿ ಸಂಗೀತದ ಸವಿ ಉಣಿಸುತ್ತದೆ. ಶಬ್ದದ ಬಹುರೂಪಿ ಪ್ರದರ್ಶನಕ್ಕೆ ಈ ಮಾಧ್ಯಮ ಹೇಳಿ ಮಾಡಿಸಿದೆ.
ಗೆಳೆಯ ನಾಗೇಂದ್ರ ಅವರ ಈ ಕೃತಿ ಬಾನುಲಿ ಲೋಕದ ಪಕ್ಷಿನೋಟವನ್ನು ಮೂಡಿಸುತ್ತದೆ. ಶಬ್ದ ಸೃಷ್ಟಿ ಹಾಗೂ ರಚನೆಗಳು ಹೇಗೆ ತಾಂತ್ರಿಕ ನೆರವಿನಿಂದ ನಮ್ಮ ಶ್ರವಣ ಸಾಧನಗಳ ಮೂಲಕ ಹೃದಯ ಹೊಕ್ಕುತ್ತವೆ ಎಂಬುದರ ಚಿತ್ರಣವನ್ನು ಬಹು ಪ್ರಭಾವಿತವಾಗಿ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಎಫ್ ಎಂ ಕ್ರಾಂತಿ ನಮ್ಮ ದೇಶದಲ್ಲಿ ಬಾನುಲಿಗೆ ಪುನರುಜ್ಜೀವನ ನೀಡಿದೆ. ಬಾನುಲಿಯ ಬಗೆಗೆ ಹೊಸ ಉತ್ಸಾಹ ಎಲ್ಲೆಡೆ ಮೂಡುತ್ತದೆ. ಕೇಂದ್ರ ಸರ್ಕಾರದ ನೂತನ ಬಾನುಲಿ ನೀತಿಯ ಅನುಸಾರ ಅಧಿಕ ಸಂಖ್ಯೆಯ ಸಮುದಾಯ ಹಾಗೂ ಖಾಸಗಿ ಬಾನುಲಿ ಕೇಂದ್ರಗಳು ತಲೆ ಎತ್ತಲಿವೆ. ಈ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವ ಆಸಕ್ತಿ ಯುವ ಶಕ್ತಿಗೆ, ಇಂತಹ ಹೊತ್ತಿಗೆಗಳು ಬಹು ಉಪಯುಕ್ತವಾಗಲಿವೆ. ಬಾನುಲಿಯ ತಾಂತ್ರಿಕ ಬೆಳವಣಿಗೆಗಳನ್ನು ಬಹು ವಿವರನಾತ್ಮಕವಾಗಿ ಪ್ರತಿಪಾದಿಸಿರುವ ಲೇಖಕರು ಬಾನುಲಿಗೆ ಬೇಕಾದ ವಿಶೇಷವಾದ ಭಾಷೆ, ಧ್ವನಿಯ ಪರಿಣಾಮಕಾರಿ ಬಳಕೆ ಹಾಗೂ ಪ್ರಸ್ತುತ ಭಾರತದಲ್ಲಿನ ಬಾನುಲಿಯ ಬೆಳವಣಿಗೆಗಳನ್ನು ಪ್ರಭಾವಯುತವಾಗಿ ಪರಿಚಯಿಸಿದ್ದಾರೆ. ಬಾನುಲಿ ಇಂದಿನ ಎಲ್ಲ ಪತ್ರಿಕೋದ್ಯಮ ಕೋರ್ಸುಗಳಲ್ಲಿ ಕಲಿಸುವ ಕಡ್ಡಾಯ ವಿಷವಾಗಿದೆ. ಈ ವಿಷಯವನ್ನು ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಇದೊಂದು ಅತ್ಯುತ್ತಮ ಮಾರ್ಗದರ್ಶಿಯಾಗಿದೆ. ನಾಗೇಂದ್ರ ಅವರ ಭೋಧನಾ ಅನುಭವಗಳಿಂದ ಇಂತಹ ಹೆಚ್ಚು ಉಪಯುಕ್ತ ಕೃತಿಗಳು ಆಶಿಸುವ.
ಡಾ ಎ ಎಸ್ ಬಾಲಸುಬ್ರಹ್ಮಣ್ಯ
ಶ್ರೀ ಚನ್ನಕೇಶವ ಪ್ರಕಾಶನ
ಬೆಲೆ: ರೂ ೨೦೦/-
 

‍ಲೇಖಕರು avadhi

April 22, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: