
ನಾವು ಗಾಂಧಿಯವರ ಅಹಿಸಾತ್ಮಕ ಮಾರ್ಗವನ್ನು ತುಳಿಯಬೇಕೆ ಅಥವಾ ಅವರು ಪ್ರತಿಪಾದಿಸಿದ ಸತ್ಯಾಗ್ರಹದ ಹಾದಿ ಹಿಡಿಯಬೇಕೆ ಎಂಬ ಇಬ್ಬಗೆಯ ಯೋಚನೆ ತಮ್ಮನ್ನು ಕಾಡಿತು. ಕವಲು ದಾರಿಯಲ್ಲಿದ್ದೆವು. ಅಹಿಸಾತ್ಮಕ ಚಳವಳಿ ಬೇರೆಲ್ಲ ವಿಧಾನಗಳಿಗಿಂತಲೂ ನೈತಿಕವಾಗಿ ಅತ್ಯುನ್ನತವಾದದ್ದು. ಗಾಂಧೀಜಿಯವರೂ ಕೂಡ ಪ್ರಬಲವಾಗಿ ಪ್ರತಿಪಾದಿಸಿದ್ದು ಇದನ್ನೇ. ಹಾಗಾಗಿ ಇದನ್ನೇ ಅನುಸರಿಸಲು ಅನೇಕರು ಒಲವು ತೋರಿದರು.
ಮಹಾತ್ಮಗಾಂಧಿ ಸೇರಿದಂತೆ ಜಗತ್ತಿನ ಪ್ರಮುಖ ನಾಯಕರೆಲ್ಲ ಉಪವಾಸ ಸತ್ಯಾಗ್ರಹವನ್ನೇ ಸಾಂಪ್ರದಾಯಿಕ ಪ್ರತಿಭಟನಾ ವಿಧಾನವನ್ನಾಗಿ ಒಪ್ಪಿಕೊಂಡಿದ್ದಾರೆ ಎಂದು ಉಪವಾಸ ಸತ್ಯಾಗ್ರಹದ ಉಗ್ರ ಪ್ರತಿಪಾದಕರು ಅಗ್ರಹಿಸಿದರು. ಪರಿಪೂರ್ಣವಾಗಿ ಬೆಂಬಲಿಸಿದೆ. ಹಟಮಾರಿ ಸಹಕೈದಿಗಳ ಕೆಂಗಣ್ಣಿಗೆ ತುತ್ತಾಗುತ್ತಿದ್ದೆ. ಅವರಲ್ಲೊಬ್ಬ ‘ಮಡಿಬಾ, ನನಗೆ ನನ್ನ ಆಹಾರ ಬೇಕು. ಇಷ್ಟುವರ್ಷವೂ ಚಳವಳಿಗಾಗಿ ಜೀವ ಸವೆಸಿದ್ದೇನೆ. ನಾನೇಕೆ ಉಪವಾಸ ಬೀಳಬೇಕು ನನಗೆ ಅರ್ಥವಾಗುತ್ತಿಲ್ಲ’. ಎಂದು ಹೇಳಿದ್ದು ಇನ್ನೂ ನೆನಪಿದೆ.
ಡೈಲಿ ಬುಕ್ : ’ಆಫ್ರಿಕ ಗಾಂಧಿ ನೆಲ್ಸನ್ ಮಂಡೇಲಾ’
ನಿಮಗೆ ಇವೂ ಇಷ್ಟವಾಗಬಹುದು…

0 Comments