
2019ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು ಹಿರಿಯ ಪತ್ರಕರ್ತೆ ಡಾ. ವಿಜಯಾ ಅವರ ಆತ್ಮಕಥೆ
‘ಕುದಿ ಎಸರು’ ಕೃತಿ ಆಯ್ಕೆಯಾಗಿದೆ.
‘ನಾಕುತಂತಿ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಪ್ರಶಸ್ತಿಯು ₹ 1 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನ ಒಳಗೊಂಡಿದೆ.
2020ರ ಫೆಬ್ರುವರಿ 25ರಂದು ಪ್ರಶಸ್ತಿ ನೀಡಲಾಗುವುದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಬಿ.ಆರ್. ಲಕ್ಷ್ಮಣ ರಾವ್, ಡಾ. ನಾ. ದಾಮೋದರ ಶೆಟ್ಟಿ, ಡಾ. ಲತಾ ಗುತ್ತಿ ಅವರನ್ನು ಒಳಗೊಂಡ ಆಯ್ಕೆ ಸಮಿತಿ ವಿಜಯಾ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತು.






ನಿಜಕ್ಕು ಸಂತೋಷದ ಸಮಾಚಾರ. ಡಾ.ವಿಜಯಮ್ಮನವರಿಗೆ ಅಭಿನಂದನೆಗಳು.
Congratulations to Vijaya Madam
ಅಭಿನಂದನೆಗಳು, ಡಾ. ವಿಜಯಾ ಅವರಿಗೆ
ಅಭಿನಂದನೆಗಳು ಅಮ್ಮಾ.