ಡಾ. ಭಾಸ್ಕರ ಮಯ್ಯ ಇನ್ನಿಲ್ಲ…

ಡಾ.ಭಾಸ್ಕರ ಮಯ್ಯ ಸರ್ ಇಹಲೋಕದ ಯಾತ್ರೆ ಮುಗಿಸಿದ್ದಾರೆ. ಹಿಂದಿಯ ಅನೇಕ ವೈಚಾರಿಕ ಕೃತಿಗಳನ್ನು ಕನ್ನಡಕ್ಕೆ ತರುವ ಮೂಲಕ ಹಿಂದಿ ಮತ್ತು ಕನ್ನಡದ ನಡುವಿನ ಸೇತುವಾಗಿ ಕೆಲಸ ಮಾಡಿದವರು. ಅವರ ಅಜ್ ನಭೀಪನ್- ಏಕ್ ಸೈದ್ಧಾಂತಿಕ್ ಅನುಶೀಲನ್ ಎಂಬ ವೈಚಾರಿಕ ಬರೆಹಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದರು. ಹಿಂದಿಯ ಇಪ್ಪತ್ತು ಕೃತಿಗಳೂ ಸೇರಿದಂತೆ ಒಟ್ಟೂ ಐವತ್ತೆರಡು ಕೃತಿಗಳನ್ನು ರಚಿಸಿದ್ದರು. ಬಹಳ ಓದಿದವರು. ಕನ್ನಡ, ಸಂಸ್ಕೃತ, ಹಿಂದಿ, ಇಂಗ್ಲೀಷ್, ಪ್ರಾಕೃತ ಹೀಗೆ ಬಹು ಭಾಷೆಗಳ ಓದು ಅವರದಾಗಿತ್ತು.

ವಿಮರ್ಶೆ, ಅನುವಾದ, ಚಳುವಳಿಗಳಿಗೆ ಕೊಟ್ಟಷ್ಟೇ ಸಮಯ ನೀಡಿದರೆ ಅವರಲ್ಲಿದ್ದ ಕತೆಗಾರನೂ ಬೆಳಗುತ್ತಿದ್ದ ಎಂದು ಅವರ ಕೆಲವು ಕತೆಗಳನ್ನು ಓದಿದಾಗ ಅನ್ನಿಸಿದ್ದಿದೆ. ರಾಹುಲ್ ಸಾಕೃಂತಾಯನ ಕುರಿತಾಗಿರಲಿ, ಲೋಕಾಯತದ ಬಗ್ಗೆಯಾಗಲಿ ಅವರ ಮಾತೆಂದರೆ ಆಳದ ಓದಿನಿಂದ ಒಡಮೂಡುತಿತ್ತು.

ಒಬ್ಬ ವಿದ್ವಾಂಸರನ್ನು ಕಳೆದುಕೊಂಡಿದ್ದೇವೆ.

ಉದಯ ಗಾಂವ್ಕರ್

ಕರ್ನಾಟಕ ವೈಚಾರಿಕ ಸಾಹಿತ್ಯದ ಮೇರುಕೊಂಡಿಯೊಂದು ಇದು ಕಳಚಿಕೊಂಡಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ವೈಚಾರಿಕ ಸಾಹಿತಿ ಉಡುಪಿಯ ಡಾ.ಜಿ.ಭಾಸ್ಕರ್ ಮಯ್ಯ (70) ಕೊವಿಡ್ ಗೆ ಇಂದು ಬಲಿಯಾಗಲಿದ್ದಾರೆ.

ಕಳೆದ 4 ದಿನಗಳಿಂದ ಅವರು ಉಡುಪಿ ಜಿಲ್ಲೆಯ ಸಾಲಿಗ್ರಾಮದ ಪ್ರಣವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ 4:30ರ ಸುಮಾರಿಗೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಹಿಂದಿ ಸಾಹಿತ್ಯ ಅಧ್ಯಯನದಲ್ಲಿ ಮೇರು ವ್ಯಕ್ತಿತ್ವ ಹೊಂದಿದ್ದ ಡಾ.ಜಿ.ಭಾಸ್ಕರ್ ಮಯ್ಯ ಅವರ ವೈಚಾರಿಕ ಕೃತಿಗೆ ಕೇಂದ್ರ ಸರ್ಕಾರ 2004ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಿತ್ತು.

ಇವರು ಧೀರ್ಘಕಾಲ ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜಿನಲ್ಲಿ ಹಿಂದಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದ್ದರು. ಮಾರ್ಕ್ಸ್‌ವಾದಿ ತತ್ವಶಾಸ್ತ್ರದಲ್ಲಿ ಅಪಾರ ಅಧ್ಯಯನ ನಡೆಸಿದ್ದರು. ಜತೆಗೆ ವೈಚಾರಿಕ ಹಾಗೂ ಪ್ರಗತಿಪರ ಸಾಹಿತ್ಯದಲ್ಲಿ 50ಕ್ಕೂ ಹೆಚ್ಚು ಗ್ರಂಥ ರಚಿಸಿದ್ದ ಭಾಸ್ಕರ್ ಮಯ್ಯ ಅವರ ನಿಧನವು ವೈಚಾರಿಕ – ಪ್ರಗತಿಪರ ಸಾಹಿತ್ಯ ವಲಯಕ್ಕೆ ತುಂಬಲಾರದ ನಷ್ಟ. ಭಾವಪೂರ್ಣ ಶ್ರದ್ಧಾಂಜಲಿ

-ಲಿಂಗರಾಜು ಮಳವಳ್ಳಿ

‍ಲೇಖಕರು Avadhi

May 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: