ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಠಾಕು ಠೀಕಿನ ಅಂಗಿ, ನಾಜೂಕಿನ ಪ್ಯಾಂಟು…

ಠಾಕು ಠೀಕು

ನವೀನ್ ಪವಾರ್

ಠಾಕು ಠೀಕಿನ ಅಂಗಿ
ನಾಜೂಕಿನ ಪ್ಯಾಂಟು
ಸಪಾಟು ಬೆಲ್ಟು
ಕತ್ತ ಹಿಸುಕುವ ಬಿಗಿಯಾದ
ಹಾವಿನ ಹೆಡೆ ಯಂತಿರುವ
ಅಂಗಿಯ ಮೇಲೆ ಅಂಗಾತ
ಮಲಗಿಹ ನಾಗರ “ಟೈ”
ಅಸಹನೀಯ,ಎನಿಸಿದರೂ
ಸಹ್ಯ ಗೊಳಿಸಿಕೊಂಡು
ಹಾರುವ ಅದರ ಮೂತಿಗೆ
ಅದೆಂತದೋ ಪಿನ್ನ ಸಿಕ್ಕಿಸಿ
ಆಗಾಗ ಸಾಪು ಮಾಡುತ್ತಾ
ಸಹನೀಯಗೈಯುವುದು

ಅಂತೆಯೆ ಮಾಲಿಶಾಗದ
ಬೂಟುಗಳಿಗೆ ಪಾಲೀಷ್ ಅಚ್ಚಿ
ಬಿಸಿಲಿಗೆ ಮಿರುಗಿ, ಮಿಕ್ಕಿ
ಉಳಿಯುವ ಪಾಲಿಶ್ ಡಬ್ಬಿಯ
ಮುಚ್ಚಳ ಮುಚ್ಚುವುದು
ಮುಂದುವರಿದು
ಉಡುಪು ಸುಕ್ಕು ಅಡರ
ಬಾರದೆಂಬಂತೆ,ಅತ್ಯಂತ
ಕಾಳಜಿ ಇಡುವುದು
ಅಂತೆಯೆ ಇಂಗ್ಲೀಷ್
ಕಂಗ್ಲೀಷ್,ಹಿಂದಿಶ್,
ಇತ್ತಿತ್ಲಾಗೆ,ಫ್ರೆಂಚು,
ಜೆರ್..ಮನಿ,ಸ್ಪ್ಯಾನಿಶ್ಸು ಮಿಕ್ಸು
ಒಟ್ಟಿನಲ್ಲಿ ಕನ್ನಡ ಭಾಷೆಗೆ
ಅಡರಿಕೊಂಡಿರೋ
ನಾನ್ಸೆನ್ಸು…..
 
ಅಡ್ಡ ಮೆನ್ಸನ್ನು : ಇನ್ಶರ್ಟುಗೈಯುವುವರಿಗೆ ಇನ್ಸಲ್ಟ್ ಮಾಡಲು ಇದಲ್ಲ.
 

‍ಲೇಖಕರು G

16 September, 2014

1 Comment

  1. mmshaik

    kone saalu kaditu…! nija..sir..!!!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading