ಟೈಮ್ ಪಾಸ್ ಕಡ್ಲೆ ಕಾಯ್ : ಡರ್ಟಿ ಪಿಕ್ಚರ್ಸೂ ಮತ್ತು ನೋ ಕಾನ್ಫಿಡೆನ್ಸ್ ' ಮೋಸ 'ನ್ನೂ!


ಸೂತ್ರಧಾರ ರಾಮಯ್ಯ

ದೇಶ ದೇಶದ ನಡುವೆ ದ್ವೇಷ, ಪಾರ್ಟಿ ಪಾರ್ಟಿಯ ನಡುವೆ, ತಮಗೇ ಮತ-ಲಭಿ ಸಲಿ ಎಂಬ ಹುನ್ನಾರದ ಪೈಪೋಟಿ, ಪ್ರೊವೊಕೇಶನ್. ಇತ್ತ , ಮಳೆಬರದ ನಾಡಲ್ಲಿ ಬರ, ಸಾಮಾನ್ಯ ಜನರನ್ನು ದರ ದರನೆ ಎಳೆ ತಂದು ರಸ್ತಿಗೆ ನಿಲ್ಲಿಸುವ ಏರಿದ ದರ! ರಾಜಕೀಯದ ತಂದುರಸ್ತಿಯನ್ನಐ ಮೀನ್, ವೈಪರೀತ್ಯವನ್ನು ಕೇಳುವುದೇ ಬೇಡ: ಕೆಡವುವೆವು ನಾವೆಂದು ಹೊರಡುವ ಸೆಲ್ಫ್ ಗೋಲಿಗರ ಗುಂಪು, ಒಟ್ಟಾರೆ, ವಿಶ್ವಸನೀಯವಾಗಿದ್ದ ವಿಶ್ವ-ಅಸಹನೀಯ! ಎಂದು ಗೊಣಗುತ್ತಾ ಹೊರಟ ರಂಗನಿಗೆ ಎದುರಾದ ಸಿಂಗ.

ಸಿಂಗ: ರಂಗು ರಂಗಿನ ಸಮಾಚಾರಗಳೇನು ಮಾರಾಯ?

ರಂಗ: ಸಮ ಸಮ ಆಚಾರಗಳ ಕಾಲ ಹೋಯ್ತು. ಈಗೇನಿದ್ರು ಸಮಾಸಮ ದುರಾಚಾರಗಳ, ಅತಿಯಾದ ಆಚಾರಗಳ ನೆರೆ. ನ್ಯೂಸ್ ನೋ ಯೂಸ್– ಜಸ್ಟ್ ನೂಸ್! ಸದ್ಯ, ದಿನನಿತ್ಯದ ಭಯೋತ್ಪಾದನೆಗ ಳಿಂದ ಮುಕ್ತಿ ಸಿಕ್ಕರೆ ಸಾಕು.
ಸಿಂಗ: ದಿನನಿತ್ಯದ ಭಯೋತ್ಪಾದನೆ?
ರಂಗ: ಎನಿಲ್ಲಾ, ಮನೆಗೆ ನೆಂಟರು ಬಂದ್ರು. ಹತ್ತು ಕೇಜೀ ಅಕ್ಕಿ ತರೋಣ ಅಂತ ಸಾವಿರ ರುಪಾಯಿ ತಗೊಂಡು ಹೊರಟಿದ್ದೀನಿ, ಅಂಗಡೀ ಸೇರೋವಷ್ಟರಲ್ಲಿ ಮತ್ತೆ ಬೆಲೆ ಏರಿ ಬಿಟ್ರೆ ಆನ್ನೋ ಭಯ!
ಈ ನೆಂಟರು ಬೇಡ- ಅಕ್ಕಿಯು ಬೇಡ ಅನ್ನೋ ಹಾಗಿದೆ ಪರಿಸ್ ತಿಥಿ.
ಸಿಂಗ: ಮೊನ್ನೆ ತಾನೆ ಮಗಳ ಮದುವೆ ಮಾಡಿದ ನನ್ನ ಸ್ತಿಥಿ ಎನಾಗಿರ್ಬೇಡ. ಕಳೆದ ತಿಂಗಳಷ್ಟೇ ಕ್ಕ್ಯಾಪಿಟೇಶನ್ ಸುರಿದು ಮಗನ್ನ ಬೀಯಿಗೆ ಸೇರಿಸ್ತೆ. ಇನ್ನು ಈ ಯೋಚ್ನೇಲಿ ಬೀಪಿ ಜಾಸ್ತಿಯಾಗಿ ನರ್ಸಿಂಗ್ ಹೋಮ್ ಸೇರಿದ್ರೆ, ಅವರ ಬಿಲ್ ವಿದ್ಯೆಯಿಂದ ಪಾರಾಗೋದು ಹ್ಯಾಗೆ ಅನ್ನೋ ಚಿಂತೆ ಬೇರೆ ಕಾಡ್ತಿದೆ! ಯಾವ ಭಯೋತ್ಪಾದನೆಗು ಇವು ಕಮ್ಮಿಯಲ್ಲಾ! ಜನರು ಇಷ್ಟೆಲ್ಲಾ ಪರದಾಡ್ತಾ  ಇದ್ರೂ ನಮ್ಮ ನಾಯಕರ ಬಾಲಗಳು ಮಾತ್ರ ನೆಟ್ಟಗೆ ಆಗೋ ಹಾಗೆ
ಕಾಣ್ತಾ ಇಲ್ಲ, ಪರಾರ್ಥದ ಡೆವೆಲಪ್ಮೆಂಟಿಗಿಂತಲು ಸ್ವಾರ್ಥದ ಡೆವಿಲ್ ಅಪ್ ಮೆಂಟ್ ‘ ಜಾಸ್ತಿಯಾದ ಹಾಗೆ ಕಾಣತದೆ.
ರಂಗ: ಎಲ್ಲದಕ್ಕೂ ಕಾರಣ ನಂಬಿಕೆ, ವಿಶ್ವಾಸದ ಕೊರತೆ ಗುರು. ಎಲ್ಲಾ ಗೋಳಿಗೂ ಕಾರಣ ಕ್ರೆಡಿಬಿಲಿಟಿ cry-sis’. ವಿಶ್ವವೇ ಅವಿಶ್ವಾಸದ ದಾರಿ ಹಿಡಿದಿದೆ. ಯಾರಿಗೂ ಯಾರಮೇಲು ವಿಶ್ವಾಸ ಇಲ್ಲಾ!
ಸಿಂಗ: ಮತ್ತೆ, ಅವಿಶ್ವಾಸ ಇದೆ ಅಂತ ಹೇಳಿ ಬಿಡಬಹುದಲ್ಲಾ ಗಾಡಿಯನ್ನು ರಾಜಮಾರ್ಗದಲ್ಲಿ?
ರಂಗ: ಅಯ್ಯೋ ಮಂಕೆ, ಮಂತ್ರಿಮಾರ್ಗ ಬಂದು ದಶಕಗಳೇ ಕಳೆದ ಮೇಲೆ ಆ ಮಾತ್ಬಿಟ್ ಹಾಕು. ಬರ್ತಾ ಬರ್ತಾ ಅಧಿಕಾರ ಅನ್ನೋದು ಕುಡಿತಕ್ಕೆ ಸಮ: ಟಿಲ್ ದ ಲಾಸ್ಟ್ ಡ್ರಾಪ್,  ಅರ್ಥಾತ್ ಕೊನೆ ದಿನದವರೆಗೆ ಕುರ್ಚಿ ಬಿಡದವನೆ, ಅಧಿಕಾರದಲ್ಲಿರುವವರಿಗೆ ಅಯ್ಯ ಅಂದವನೇ, ಬೋಪ- ರಾಕ್ ಹೇಳಿದವನೇ ಜಾಣ. ಅಸೆಂಬ್ಲಿ ಡಿಸಾಲ್ವ್ ಆದ್ರೆ ಅಂಬ್ಲಿ ಎಲ್ ಸಿಕ್ತದೆ? ಪ್ರಾಬ್ಲಮ್ ಎಲ್ ಸಾಲ್ವ್ ಆಗ್ತದೆ? ಮುಖ್ಯವಾಗಿ, ಮತ್ತೆ ಗೆದ್ದು ಬರ್ತೀನಿ ಅನ್ನೋ ‘ ಕಾನ್ಫಿಡೆನ್ಸ್ ‘ ಬೇಕಲ್ಲ? ಪರಿಸ್ಥಿತಿಯ ಪಿತೂರಿ ಅಂದ್ರೆ :ಒಮ್ಮೆ ಸಿ.ಎಂ ಆದವನು ಅದು ಹ್ಯಾಗೋ ‘confident man’ ಆಗಿ ಬಿಡ್ತಾನೆ, ಪಿ.ಎಂ ಆದವನು ‘ಪವರ್ಫುಲ್ ಮ್ಯಾನ್ ‘ ಆಗಿಬಿಡ್ತಾನೇ – ಮುಖ್ಯಮಂತ್ರಿ ನಾಟ್ಕ ನೋಡಿದವರಿಗೆ ಇದು ಹೊಸದಲ್ಲ.ಆಡಿಸಿ ನೋಡು, ಬೀಳಿಸಿ ನೋಡು ಅನ್ನೋ ಅಣ್ಣನ ಹಾಡೇ ಹೆಚ್ಛು ಜನಪ್ರಿಯ. ಎಲ್ಲದಕ್ಕೂ ಮುಖ್ಯ ನಂಬರು. ಸರ್ಕಾರ ಬೀಳಿಸುವಷ್ಟು ನಂಬರ್ ನಮ್ಮ ಬಳಿ ಇದೆ ಎಂದರೆ ಯಾರೂ ನಂಬರು? ಮೊನ್ನೆ ಡೆಲ್ ಲೀಲೆ ನೋಡಿದೆವಲ್ಲ; ದೀದಿ ಮಮತೆಯಿಂದ ಗಾಯಗೊಂಡ ಸಿಂಗರ ಗಾಯಕ್ಕೆ ಮುಲಾಮ್ ಹಚ್ಚಿ ಆಸರೆ ಯಾದವರು ಹುಟ್ಟಿಕೊಂಡರಲ್ಲ. ಅಖಾಡದಿಂದಲೇ ಮಾಯ ವಾದರಲ್ಲಾ ಮಂದಿ? ಗೆಲ್ಲೋ ಕುದರೆ ಜೊತೆ ಇರೋದು ಬಿಟ್ಟು ‘ಸೋಲು ಸರ್ಚಿಂಗ್‘ ಯಾರ್ ಮಾಡ್ಕೊತಾರೆ ಈ ಕಾಲದಲ್ಲಿ?
ನಮ್ಮವರೇ ಸಿ.ಎಂ.ಅಂತಾ ಉದಾಸಿನ ಮಾಡಬಾರದು ಯಾರೇ ಅನ್ನೋದು ಒಟ್ಟು ಕತೆಯ ನೀತಿ. ಇದರಿಂದ ಬಹು ಲೋಕೋಪಯೋಗಿಗಳು, p.w.d . I mean, ಪಾರ್ಟಿ ವಿಥ್ ಡಿಫರೆನ್ಸ್ ಅಂದುಕೊಳ್ಳುವವರೂ ಹೊರತಲ್ಲಾ. ಲಾಯಲ್ಟಿ ಇರೋವರ್ಗೂ ರಾಯಲ್ಟಿ. ಇಲ್ಲಾ, ಜಸ್ಟ್ ಟೀನು ಇರಲ್ಲ.
ಸಿಂಗ: ಅಲ್ಲಾ, ಇದಕ್ಕೆಲ್ಲ ಲೀಗಲ್ಲು ,ಇಲ್ಲೀಗಲ್ಲು , ಎತ್ಹಿಕ್ಸು, ನೀತಿ ಗೀತಿ  ಇವೆಲ್ಲ ಬೇಡವೆ ಅಂತ?
ರಂಗ: ಎಲ್ಲ ಎತ್ಹಿಕ್ ಬಿಟ್ಟವರೆ. ಎಲ್ಲಾ ಕಡೆ ಮಬ್ಬು. ಗ್ರೇ ಏರಿಯಾ ಕಣ. ಅದ್ನೆಲ್ಲ ಹುಡುಕೋದು ಕತ್ತಲು ಕೋಣೆಲಿ ಕರಿ ಬೆಕ್ಕನ ಹುಡುಕಿದನ್ಗೆ. ಯಾಕೋ ಬರ್ತಾ ಬರ್ತಾ ಪೀಪಲ್ಲೋಕ್ರಸಿ, ಲೀಡ ರೋಕ್ರಸಿ ಆಗೋಯ್ತು ಅನ್ನು?
ರಂಗ: ಅದು ನಿಜ.ಡಳಿತ ಪಕ್ಷದವರ ತಂತ್ರ, ವಿರೋಧಿಗಳ ಪ್ರತಿತಂತ್ರದಲ್ಲಿ ಪ್ರಜಾತಂತ್ರ ಆವಿ ಆಗಿ ಹೋಯಿತು. ಒಟ್ಟಾರೆ, ತಮ್ಮಲ್ಲೇ ಎಮ್ಮೆಲ್ಲೇಗಳಿಗೆ ವಿಶ್ವಾಸ ಇಲ್ಲದಿರೆ,ನಂಬಿಕೆ ಇಲ್ಲದಿರೆ ಉಂಟಾ ಗೋ ದೇ, ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಅನ್ನೋ  cry sis ಗೆ ಕಾರಣ. ಅದಕ್ಕೇ ಇರಬೇಕನ್ನೋದು ಕಾನ್ಫಿಡೆನ್ಸ್?
ಸಿಂಗ: ಹಾಗಿದ್ದ ಮೇಲೆ ಚುನಾವಣೆಗೆ ಹೋಗಬಹುದಲ್ಲಾ? ಮತ್ತೇನ್ ಸಮಸ್ಯೆ? ಒಳ್ಳೆ ಸರ್ಕಾರಾನ ಜನ ಆರಿಸಬಹುದಲ್ಲಾ?
ರಂಗ: ಆದರೆ ಅಲ್ಲೂ ಅಸಲಿ ಆತ್ಮ ವಿಶ್ವಾಸವೇ ಇಲ್ಲವಲ್ಲಾ: ಮತಕ್ಕೆ ಪ್ರತಿಯಾಗಿ ಟೀವಿ, ವಾಚು, ಗುಂಡು, ಬಳೆ, ಸೀರೆಪಂಚೆಯೇ ಮುಖ್ಯವಾದರೆ! ಇಲ್ಲವಾಗುವುದಲ್ಲಾ ಕಾನ್ಫಿಡೆನ್ಸ್ !
ಸಿಂಗ: ಅಲ್ಲ, ಈಗಲೇ ಇಷ್ಟೊಂದು ಅಕ್ರಮ. ಮುಂದೇನ ಕಾದಿದೆಯೋ?
ರಂಗ: ‘ಹಿಂದಿನ’ ಎಲ್ಲಾ ಅಕ್ರಮಗಳ ಸಕ್ರಮಿಸುವ ಓವರ್ ಕಾನ್ಫಿಡೆನ್ಸ್. ಎಂಡ್ ಆಫ್ ಆಲ್ ಕ್ರೈ ಸಿಸ್! ಜೈ ಹಿಂದ್.

‍ಲೇಖಕರು avadhi-sandhyarani

January 30, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪೂಜೆ!!

ಪೂಜೆ!!

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: