ಟೆಕ್ಕಿಗಳ ಸಾಮಾಜಿಕ ಕಾಳಜಿಯ “ಅಭಿವ್ಯಕ್ತಿ”

ಅಭಿನಯದಲ್ಲಿ ಆಸ್ತಕಿ ಯಾರಿಗಿರಲ್ಲ ಹೇಳಿ. ಬೆಳ್ಳಿ ಪರದೆಯ ಮೇಲೆ ನಟನೆ ಮಾಡಬೇಕೆನ್ನುವುದು ಬಹಳ ಜನರ ಆಸೆಯಾಗಿರುತ್ತೆ, ಚಿತ್ರ ನಿರ್ಮಿಸುವುದು ಕನಸಾಗಿರುತ್ತೆ. ಹೀಗೆ ಅಭಿನಯದ ಗೀಳು ಹಚ್ಚಿಕೊಂಡಿರುವ ಬೆಂಗಳೂರಿನ ಕೆಲವು ಟೆಕ್ಕಿಗಳು ಒಂದು ತಂಡ ಕಟ್ಟಿಕೊಂಡು ‘ಅಭಿವ್ಯಕ್ತಿ’ ಎನ್ನುವ ಕಿರುಚಿತ್ರ ಮಾಡಿದ್ದಾರೆ.  ಸಾಮಾಜಿಕ ಸಮಸ್ಯೆಯ ಮೇಲೆ ಬೆಳಕು ಚೆಲ್ಲುವ ಈ ಕಿರುಚಿತ್ರ, ತಂಡದ ಮೊದಲ ಪ್ರಯತ್ನ.

ಅದೇ ಕ್ಲಾಸ್, ಕಾರಿಡಾರು, ಬೆಂಚು, ಮೇಡಂ, ಸರ್ ಬೈಗುಳ, ಬ್ಯಾಕಾದ ಪೇಪರುಗಳು ಇಂಥಾ ಯಾವ ಗೋಜಿಗೂ  ಈ ವಿದ್ಯಾರ್ಥಿಗಳು ಬಿದ್ದಿಲ್ಲ. ಎಂಜಿನಿಯರಿಂಗ್ ಓದುವಾಗ   ಜೊತೆಯಲ್ಲಿ ನಟನೆ, ಕಾರ್ಯಕ್ರಮ ನಿರೂಪಣೆ ಅಂತೆಲ್ಲ   ಸಂವಹನದ ನಾನಾ ಸಾಧ್ಯತೆಗೆ ತೆರೆದುಕೊಂಡಿದ್ದವರು  ಈಗ ಉದ್ಯೋಗಮುಖಿಗಳಾದ ಮೇಲೆ  ತಂಡಕಟ್ಟಿ  ಏಳು ತಿಂಗಳ ಪರಿಶ್ರಮದಿಂದ  31 ನಿಮಿಷಗಳ ಕಿರುಚಿತ್ರ ನಿರ್ಮಿಸಿದ್ದಾರೆ. ಅಮಿತ್ ಕಶ್ಯಪ್ ಈ ಕಿರುಚಿತ್ರದ  ಸೂತ್ರಧಾರ, ಅವರದೇ ಚಿತ್ರಕಥೆ,ಕಥೆ, ಸಂಭಾಷಣೆ,ನಿರ್ದೇಶನ, ಸಂಕಲನ, ಜೊತೆಗೆ ಮುಖ್ಯ ಪಾತ್ರದಲ್ಲಿ  ನಟನೆ ಕೂಡ .ಚಿತ್ರದ ಲೊಕೇಶನ್- ಬೆಂಗಳೂರ ಸುತ್ತಮುತ್ತ. ಕಶ್ಯಪ್ ಜೊತೆ ನಳಿನಿ, ಅರುಣ್, ಪರೀಕ್ಷಿತ್ ಮೊದಲಾದ ಎಂಜಿನಿಯರಿಂಗ್ ವಿದ್ಯಾರ್ಥಿಗಳೂ ಈ ಕಿರುಚಿತ್ರದಲ್ಲಿ ಆಭಿನಯಿಸಿದ್ದಾರೆ.

ಯೂಟ್ಯೂಬ್ ಗೆ ಅಪ್‍ಲೋಡ್ ಮಾಡಿದ್ದೇ ತಡ ಹತ್ತು ಸಾವಿರಕ್ಕೂ ಹೆಚ್ಚು ಜನ ವೀಕ್ಷಿಸಿದ್ದಾರೆ. ವೀಕ್ಷಕರ ಮೆಚ್ಚುಗೆಯಿಂದ ಪುಳಕಿತವಾದ  ತಂಡ  ಇನ್ನಷ್ಟು ಇಂಥಾ ಕಿರುಚಿತ್ರ ನಿರ್ಮಾಣದತ್ತ ಹೆಜ್ಜೆಯಿಟ್ಟಿದೆ.

 

 

‍ಲೇಖಕರು avadhi

December 23, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: