
ಭವ್ಯ ಎಲ್ ಹಳ್ಳಿ
ಟೀ ಮಾಡುವುದೆಂದರೆ ಬಹು ಕಷ್ಟದ ಕೆಲಸ ನನಗೆ
ನನ್ನ ಮನಸ್ಥಿತಿಯನ್ನು ಹೊರಗೆಡುವುದೆಂದು
ಆದರೂ ಮಾಡಲೇ ಬೇಕಲ್ಲ ಮಾಡುತ್ತೇನೆ
ಗ್ಯಾಸ್ ಹಚ್ಚಿ ಅಳತೆಗೂ ಮೀರಿ ನೀರು ಸುರಿದು
ದಡ ಬಡ ಶಬ್ಧ ಮಾಡುತ್ತಾ..
ಟೀ ಡಬ್ಬವನ್ನು ತೆಗೆದು ಪುಡಿ ಸುರಿಯುತ್ತಿರುತ್ತೇನೆ
ಆ ಕಡೆಯಿಂದ ಸಕ್ಕರೆ ಸರಿಯಾಗಿರಲೆಂಬ ಕರ್ಕಶ ಧ್ವನಿ
ಧ್ವನಿ ಕೇಳಿ ಮೈಯಲ್ಲಾ ಚುಚ್ಚಿದಂತಾಗುತ್ತದೆ
ತಕ್ಷಣವೇ ಮೂತಿ ತಿರುಗಿಸಿ ನನಗೂ ಗೊತ್ತು ಎಂದು ಗೊಣಗುತ್ತೇನೆ
ಹಾಲು ಹಾಕಿ ತಿರುಗಿಸಿ ಭಾವನೆಗಳನ್ನು ಕುದಿಯಲು ಬಿಡುತ್ತೇನೆ
ಟೀ ಮತ್ತು ಭಾವನೆ ಕುದಿಯಲಾರಂಭಿಸುತ್ತದೆ
ಕುದಿಸಿ ಆರಿಸಿ ಗ್ಲಾಸಿಗೆ ಹಾಕಿ ಕೊಡುತ್ತೇನೆ
ಕುಡಿದವರು ಹೇಳುವುದಿಷ್ಟೇ ಟೀ ನಿನ್ನ ಮುಖದಂತೆ ಇದೆಯೆಂದು





ಹಾಲು ಹಾಕಿ ಭಾವನೆಗಳನ್ನು ಕುದಿಯಲು ಬಿಟ್ಟ ಸಮಯದಿ ಉಕ್ಕಿನ ಬರಹ ತುಂಬಾ ಚೆನ್ನಾಗಿದೆ.
Aduge mane enda chendada kavite yannu bhatti ilisiddiri !
ennastu, mogedastu padyagalu nimma bhavanegala banale enda moodi baralendu aashisuttene.
Regards,