ಟಿ ಕೆ ತ್ಯಾಗರಾಜ್ ಕೇಳ್ತಾರೆ: ಹಸಿವಿಗೆ ಯಾವ ಜಾತಿ?

ಟಿ ಕೆ ತ್ಯಾಗರಾಜ್

ನಿನ್ನೆ ಪರಿಚಿತರೊಬ್ಬರು ಸಿಕ್ಕಿದ್ದರು. ‘ನೋಡಿ. ಅನ್ನ ಭಾಗ್ಯ ಯೋಜನೆ ಕಾರ್ಯಕ್ರಮದಲ್ಲಿ ಮುಸ್ಲಿಮರೇ ತುಂಬ ಇದ್ದಾರೆ’ ಅಂದರು. ನನಗೆ ಅವರ ಮಾತುಗಳು ಅಸಹ್ಯ ಹುಟ್ಟಿಸಿದವು.’ಬಡವರು ಯಾರಾದರೇನು? ಅಗತ್ಯ ಇದ್ದವರು ಬರುತ್ತಾರೆ. ಹೊಟ್ಟೆ ತುಂಬಿದವರಿಗೆ ಅವರ ನೋವು ಹೇಗೆ ತಾನೇ ಗೊತ್ತಾಗುತ್ತದೆ?’ ಅಂದೆ. ನನ್ನ ಪ್ರತಿಕ್ರಿಯೆಯಿಂದ ಅವರು ಅವಾಕ್ಕಾಗಿ ‘ನೀವು ಹೇಳೋದು ಸರಿ’ ಎಂದು ಸುಮ್ಮನಾಗಿಬಿಟ್ಟರು.
ಇನ್ನೊಬ್ಬರು ‘ಕೆ.ಜಿ.ಅಕ್ಕಿಗೆ ಒಂದು ರೂಪಾಯಿ ಬದಲು ಐದು ರೂಪಾಯಿ ಇಡಬೇಕಿತ್ತು. ಇನ್ನು ಏನೇನಾಗುತ್ತೆ ನೋಡ್ತಾ ಇರಿ. ಮನೆ ಕೆಲಸಕ್ಕೂ ಜನ ಸಿಗೋಲ್ಲ. ನಮಗೂ ಅಕ್ಕಿ ಕೊರತೆ ಆಗಿ ಸಿಕ್ಕದೇ ಹೋಗುವ ಸಾಧ್ಯತೆ ಇದೆ’ ಎಂಬ ಅನಗತ್ಯ ಕಳವಳ ವ್ಯಕ್ತಪಡಿಸಿದರು. ಅದಕ್ಕೆ ನಾನು, ‘ ನಿಮ್ಮ ಮನೆಗೆ ತರಿಸುವ ಅಡುಗೆ ಅನಿಲ, ನಿಮ್ಮ ಟೂ ವೀಲರ್ ನ ಪೆಟ್ರೋಲ್ ಎಲ್ಲದಕ್ಕೂ ಸಬ್ಸಿಡಿ ಕೊಡ್ತಿದೆ. ಅಡುಗೆ ಅನಿಲ ಸಿಲಿಂಡರ್ ಒಂದಕ್ಕೆ ಸರ್ಕಾರವೇ ಎಂಟು ನೂರು ರೂಪಾಯಿಗಳಿಗಿಂತ ಹೆಚ್ಚು ಸಬ್ಸಿಡಿ ಕೊಡ್ತಿದೆ. ಪೆಟ್ರೋಲ್ ಕೂಡಾ ಸಬ್ಸಿಡಿ ದರದಲ್ಲಿ ದೊರೆಯುತ್ತಿದೆ. ಸರ್ಕಾರದ ಈ ಭಿಕ್ಷೆಯನ್ನು ವಾಪಸ್ ಕೊಟ್ಟು ಇಂಥ ಮಾತುಗಳನ್ನಾಡಿ. ಮುಂದೊಂದು ದಿನ ನಮಗೇ ಅಕ್ಕಿಯ ಕೊರತೆಯಾಗುತ್ತದೆ ಎಂದು ಅನಗತ್ಯ ಆತಂಕ ವ್ಯಕ್ತಪಡಿಸುತ್ತಿದ್ದೀರಲ್ಲಾ? ಹುಟ್ಟಿನಿಂದ ಹಸಿವೇ ಬದುಕಾದವರು ಎರಡು ಹೊತ್ತು ಊಟ ಮಾಡುವುದಕ್ಕೆ ಸಿದ್ದರಾಮಯ್ಯ ತರಹದವರು ನಿರ್ಧಾರ ಮಾಡಿದ್ದಾರೆಂದರೆ ಸಂತೋಷ ಪಡಬೇಕು. ಅದು ಬಿಟ್ಟು ಈ ಪ್ರಲಾಪ ಏಕೆ? ಒಂದು ದಿನವೂ ಹಸಿವು ಸಹಿಸಿಕೊಳ್ಳಲಾಗದ ನಿಮಗೆ ವರ್ಷಗಳ ಕಾಲ ಹಸಿವಿದ್ದವರ ಬಗ್ಗೆ ಏನೂ ಅನ್ನಿಸುತ್ತಿಲ್ಲವೇ?’ ಎಂದು ಕಟುವಾಗಿಯೇ ಪ್ರಶ್ನ್ಸಿಸಿದೆ.

ವಿಚಿತ್ರ ಎಂದರೆ ಈ ಇಬ್ಬರೂ ತುಂಬ ಒಳ್ಳೆ ವ್ಯಕ್ತಿಗಳು. ಅವರಿಬ್ಬರಿಗೆ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ಭಾರತೀಯ ಸಮಾಜದ ಅಸಮಾನತೆ-ಬಡತನದ ಕಾರಣಗಳು, ಅದರ ಪರಿಣಾಮಗಳು, ಇದ್ಯಾವುದರ ಬಗ್ಗೆಯೂ ಅವರಿಗೆ ಅರಿವಿರಲಿಲ್ಲ. ಮುಸ್ಲಿಮರ ಬಗ್ಗೆ ಸಂಘ ಪರಿವಾರ ಅರ್ಥಾತ್ ವೈದಿಕ ಮನಸ್ಸು ಸೃಷ್ಟೀಸಿರುವ ದ್ವೇಷದ ಸಮೂಹ ಸನ್ನಿ, ಸಲ್ಲದ ಗೊಂದಲಗಳಿಂದ ಅವರು ಈ ರೀತಿ ಮಾತನಾಡಿದ್ದರು. ಜಾತಿ ಬೇಡ ಅನ್ನುವವರ ಮಾತು ಸುಂದರವಾಗಿಯೇ ಕೇಳುತ್ತದೆ. ಆದರೆ ಅದು ಬೇರೂರಿರುವ ಪರಿ, ಅದರಿಂದ ಉಂಟಾಗುತ್ತಿರುವ ಅನಾಹುತಗಳು ಜನಸಾಮಾನ್ಯರಿಗೆ ಅರ್ಥ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ. ಉಳ್ಳವರು ಇಲ್ಲದವರನ್ನು ಸಲುಹಬೇಕಾದ ಮನುಷ್ಯನ ಮೂಲ ಲಕ್ಷಣಗಳಾದ ಪ್ರೀತಿ, ದಯೆ, ಕರುಣೆ, ಕಾಲಾಂತರದಲ್ಲಿ ಕಡಿಮೆಯಾಗುತ್ತಾ ಸ್ವಾರ್ಥವೇ ಬದುಕಾಗಿ ಎಲ್ಲವನ್ನೂ ತಾನೇ ಬಾಚಿಕೊಳ್ಳಬೇಕೆಂಬ ದುರಾಸೆ ಹೆಚ್ಚಾಗಿ ನಿಜ “ಮನುಷ್ಯ” ಈಗ ಅಳಿವಿನಂಚಿನಲ್ಲಿರುವುದೇ ಗೆಳೆಯರಿಬ್ಬರ ಈ ಮಾತುಗಳಿಗೆ ಕಾರಣ.
ಅಳಿವಿನಂಚಿನಲ್ಲಿರುವ “ಮನುಷ್ಯ”ನ ಉಳಿವಿಗಾಗಿ ನಾವೆಲ್ಲರೂ ಪ್ರಯತ್ನ ಮಾಡೋಣ. ಮುಸ್ಲಿಮರೂ ಸೇರಿದಂತೆ ಎಲ್ಲ ಬಡವರ ಬದುಕು ಬೆಳಕಾಗುವುದರಿಂದ ಮಾತ್ರ ಭಾರತ ಬೆಳಗುವುದು ಸಾಧ್ಯ.’ಅನ್ನಕ್ಕಾಗಿ ಕಳ್ಳತನ ಮಾಡಿದವನಿಗೆ ನನ್ನ ಆಡಳಿತದಲ್ಲಿ ಶಿಕ್ಷೆ ಇಲ್ಲ. ಯಾಕೆಂದರೆ ದೇಶದ ಪ್ರತಿಯೊಬ್ಬನಿಗೂ ಅನ್ನ ಕೊಡುವುದು ಸಾಧ್ಯವಾಗದಿದ್ದರೆ ಅಂಥವನಿಗೆ ಶಿಕ್ಷೆ ಕೊಡುವ ಅಧಿಕಾರವೂ ಇಲ್ಲ’ ಎಂದು ಅಪರೂಪದ ನಾಯಕ ಜಗಜೀವನರಾಂ ಅವರ ಮಾತುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೇಂದ್ರದ ಯುಪಿಎ ಸರ್ಕಾರ ‘ಆಹಾರ ಭದ್ರತೆ ಕಾಯ್ದೆ’ ಜಾರಿಗೆ ತಂದು ಪ್ರತಿಯೊಬ್ಬರಿಗೂ ಅನ್ನದ ಹಕ್ಕನ್ನು ಕೊಟ್ಟಿದೆ. ಸಿದ್ದರಾಮಯ್ಯನವರೂ “ಅನ್ನ ಭಾಗ್ಯ ಯೋಜನ್” ಸಾಕಾರಗೊಳಿಸಿದೆ. ಈ ನಿರ್ಧಾರಗಳನ್ನು ಬೆಂಬಲಿಸಿ ಮುನ್ನಡೆಯೋಣ.

‍ಲೇಖಕರು G

July 12, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

11 ಪ್ರತಿಕ್ರಿಯೆಗಳು

  1. Mohan

    ತ್ಯಾಗರಾಜ್ ನಿಮ್ಮ ಅಭಿಪ್ರಾಯಕ್ಕೆ ನಮ್ಮ ಧ್ವನಿಯೂ ಸೇರಲಿ.ನಿಮ್ಮ ಲಂಕೇಶ್ ಲೇಖನ ಓದಿದ ನೆನಪು ಕಾಡುತ್ತಿದೆ.

    ಪ್ರತಿಕ್ರಿಯೆ
  2. Annapoorna

    ಸಾರ್, ” ವೈದಿಕ ಮನಸ್ಸು ಸೃಷ್ಟೀಸಿರುವ ದ್ವೇಷದ ಸಮೂಹ ಸನ್ನಿ” ಅಂತ ನೀವುಗಳು ಹೇಳಿ ಹೇಳಿ ವೈದಿಕ ಸಂಪ್ರದಾಯಗಳ ಬಗ್ಗೆ ದ್ವೇಷದ ಸಮೂಹ ಸನ್ನಿ ಉಂಟು ಮಾಡಿದ್ದೀರಲ್ಲ! ಅದು ಸರಿಯೇ?

    ಪ್ರತಿಕ್ರಿಯೆ
  3. yash

    ಹುಟ್ಟಿನಿಂದ ಹಸಿವೇ ಬದುಕಾದವರು ಎರಡು ಹೊತ್ತು ಊಟ ಮಾಡುವುದಕ್ಕೆ ಸಂತೋಷ ಪಡಬೇಕು. ನಿಜ

    ಪ್ರತಿಕ್ರಿಯೆ
  4. Kiran

    It is equally disgusting to read ಮುಸ್ಲಿಮರ ಬಗ್ಗೆ ಸಂಘ ಪರಿವಾರ ಅರ್ಥಾತ್ ವೈದಿಕ ಮನಸ್ಸು ಸೃಷ್ಟೀಸಿರುವ ದ್ವೇಷದ ಸಮೂಹ ಸನ್ನಿ approach of your writing. When do we surpass all this? No wonder pseudo-intellectuals are most hated community.

    ಪ್ರತಿಕ್ರಿಯೆ
  5. Umesh

    ಅನ್ನ ಭಾಗ್ಯ ಸರಿ. ಆದರೆ ಇಲ್ಲಿ “ವೈದಿಕರನ್ನು” ಎಳೆದು ತರುವ ಅವಶ್ಯಕತೆ ಏನಿತ್ತು? ಯಾವುದೊ ವಿಷಯದ ಲೇಖನ ಇನ್ನ್ಯಾವುದೋ ಅಜೆಂಡಾ ತೂರಿಸುವುದು…

    ಪ್ರತಿಕ್ರಿಯೆ
    • ವಿಜಯ್

      [“ವೈದಿಕರನ್ನು” ಎಳೆದು ತರುವ ಅವಶ್ಯಕತೆ ಏನಿತ್ತು? ]
      ಅದು ಅವರ ಲೇಖನವೆಂಬ ಊಟದಲ್ಲಿ ಉಪ್ಪಿನಕಾಯಿ ಇದ್ದ ಹಾಗೆ,,ಇಲ್ಲದಿದ್ದರೆ ಅವರಿಗೆ ಊಟ ಮಾಡಿದಂತೆಯೇ ಅನಿಸುವುದಿಲ್ಲ :). ಇದು ಲಂಕೇಶ ಕಾಲದ, ಲಂಕೇಶರಿಂದಲೇ ಜಾಣ-ಜಾಣೆಯರಾದ ಬಹುತೇಕ ಬರಹಗಾರರ ಟ್ರೇಡಮಾರ್ಕ್.

      ಪ್ರತಿಕ್ರಿಯೆ
      • Amaresh

        ಉಪ್ಪಿನ ಕಾಯಿಯಲ್ಲ ವಿಜಯ್, ವೈದಿಕ ಎಂಬುದು ಲಂಕೇಶ್ ಪಾಳಯದ ಬರಹಗಾರರಿಗೆ ಒಂದು ತರಹದ ಕೆರೆತ, ತುರಿಸಿ ತುರಿಸಿ ವಿಕೃತ ಸುಖ ಪಡೆಯುತ್ತಿದ್ದಾರೆ.

        ಪ್ರತಿಕ್ರಿಯೆ
  6. Vijendra

    vydika manasu ellide torisi sir,taruniya hottu nadi datida sanyasi mattu shishyana hage elladaku ninneya vydika/brahmanikeya uppinakayi eke?ivattigu karnatakadalli asprushyateya achareneyalli,sarvajanika jeevanadalli jaatiya visha bija bittuttiruvaru yaru?brahmanaralla!!!yaru anta
    yaaru helabekilla.in 80% of the villages there r no brahmins,yet untouchabilty still is in practise.so so who is responsible?

    ಪ್ರತಿಕ್ರಿಯೆ
  7. Kamalini Krupakar

    TK is singing the tune of Ahinda politics of CM Siddaramaiah, may be he has the desire of becoming press academy head.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: