ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಟಿ ಎಸ್ ಗೊರವರ ಕವಿತೆ: ಚೆಲುವೊಂದು ಮೈ ಮರೆಸಿತು

ಟಿ ಎಸ್ ಗೊರವರ

 
ಹಾಡ ಹಗಲು ಅಂಗಳದಲ್ಲಿ ತಂಪೊತ್ತು ಸುರಿಯುತಿದೆ
ಕೊಲ್ಲತೊಡಗಿದ್ದೆ ಸಮಯ ಮರದ ಕೆಳಗೆ ಕುಳಿತು
ನೆರಳೊಳಗೆ ಚೆಲ್ಲಿಕೊಂಡಿವೆ ಪಕ್ಷಿ ತಿಂದು ಬೀಸಾಕಿದ ಬೀಜಗಳು
ಎಷ್ಟೊಂದು ಬೀಜಗಳು? ಯಾವುದರ ಚಹರೆಯೂ ಪತ್ತೆಯಾಗುತ್ತಿಲ್ಲ
ಒಂದೊಂದೇ ಬೀಜವಿಡಿದು ಅದರ ಮೈ ನೇವರಿಸಿದೆ
ಯಾವ ಬೀಜದಲ್ಲಿ ಯಾವ ಮರ ಅಡಗಿದೆಯೋ ಗೊತ್ತಿಲ್ಲ

ಅಲ್ಲೇ ಎದುರುಗಡೆ ಹೂವೊಂದು ಅರಳಿದೆ
ಅದರ ಹೆಸರು, ತಳಿ, ವಿಳಾಸ ಒಂದೂ ಗೊತ್ತಿಲ್ಲ
ಎಷ್ಟು ಚೆಂದವಿದೆ ಹುಡುಗಿಯಂತೆ
ಪರಿಮಳವೂ ಇದೆ ಅವಳ ಮೈ ಘಮದಂತೆ
ಮನಸ್ಸು ನಿರ್ಧರಿಸಿತು ಹೂವಾಗಿಬಿಡಬೇಕೆಂದು
 
ಮರದ ಹಸಿರ ಎಲೆಗುಂಟ ತುಂಬಿದೆ ಚೆಲುವು
ಉಮೇದಿಗೊಳಿಸುತ್ತಿದೆ ಗಿಳಿವಿಂಡುಗಳು, ಅಳಿಲುಗಳ ಕ್ರೀಡೋತ್ಸಾಹ
ತಳಿಕೆ ಹಾಕಿದ ಹಾವುಗಳು ಚಂಚಲಗೊಳಿಸುತಿವೆ
ಆಟವಾಡತೊಡಗಿದೆ ಗೊತ್ತೇ ಇಲ್ಲದೆ ಬೆಕ್ಕೊಂದು ಬೆರಳಗುಂಟ
 
ಚೆಲುವೊಂದು ಮೈ ಮರೆಸಿತು
ಮರದ ನೆರಳು ವಿರಹದ ಸೀರೆಯಾಗಿ ಮೈ ಸುತ್ತಿಕೊಂಡಿತು
ಮೈ, ಮನಗಳ ಸುಳಿಯಲ್ಲಿ ಸುಖದ ನರಳಿಕೆ
ನಾಚಿಕೊಂಡವು ಹೂ, ಅಳಿಲು, ಗಿಳಿವಿಂಡು
 

‍ಲೇಖಕರು G

20 September, 2013

9 Comments

  1. Vithal Dalawai

    Goravar, Kavite chennagide. Idu nammurige bandaga munjane chaliyalli walking hodagina photo allave?

    • t.s.goravar

      haa, houdu. nimmuralli tagedirodu.

  2. MANJUNATH.P

    superb…

  3. ಮಹದೇವ ಹಡಪದ

    ಸೊಗಸಾಗಿದೆ

  4. ಹನುಮಂತ ಹಾಲಿಗೇರಿ

    ಚಂದದ ಗೆಳೆಯ, ಇನ್ನಷ್ಟು ಬರಿರಿ, ಕವನ ಸಂಕಲನಕ್ಕೆ ಕಾಯ್ತಾ ಇದ್ದಿವಿ.

  5. ಅರುಣ್ ಜೋಳದಕೂಡ್ಲಿಗಿ

    ಪರಿಮಳವೂ ಇದೆ ಅವಳ ಮೈ ಘಮದಂತೆ
    ಮನಸ್ಸು ನಿರ್ಧರಿಸಿತು ಹೂವಾಗಿಬಿಡಬೇಕೆಂದು..
    ಚಲುವೊಂದು ಕವಿತೆಯಾಗಿದೆ ಅನ್ನಿಸಿತು. ಇಷ್ಟವಾಯ್ತು.

  6. MANJUNATH DOLLIN

    olleya kavithe

  7. haravu spoorthy

    ಮರದ ನೆರಳು ವಿರಹದ ಸೀರೆಯಾಗಿ ಮೈ ಸುತ್ತಿಕೊಂಡ ರೂಪಕ ಖುಷಿಯಾಗಿದೆ:)

  8. BHUVANESHVARI

    Chennagide

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading