ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋರು ಮಳೆಯ ಮುಂಜಾನೆ ಆತ ಹೊರಟುಹೋದ..

ಇರ್ಫಾನ್ ಇತ್ತೀಚೆಗೆ ಹೇಳ್ಕೊಂಡಿದ್ದ ಮಾತು –

ನಾನು ನನ್ನ ಪ್ರೀತಿಯ ಹೆಂಡತಿಗೋಸ್ಕರವಾದ್ರೂ ಬದುಕಬೇಕು ಅಂತ. ಎನ್ ಎಸ್ ಡಿ ಕಾಲದಿಂದಲೇ ಅವರ ಗೆಳೆತನ, ಪ್ರೇಮ. ಇಷ್ಟವಿಲ್ಲದಿದ್ದರೂ ಆಕೆಗೆ ಬಾಯ್ ಮಾಡಿ ಹೋಗೇಬಿಟ್ಟ..

ಮಾತಿನ ಅಗತ್ಯವೇ ಇಲ್ಲದೇ ಕಣ್ಣು, ಚಲನೆಗಳಲ್ಲೇ ಎಲ್ಲವನ್ನೂ ಹೇಳುತ್ತಿದ್ದ ಇರ್ಫಾನ್, ನೆಲದ ಮೇಲೆ ಕೂತು ರಾತ್ರಿಯಿಡೀ ಪುಸ್ತಕ ಹಿಡಿದು ಕೂರುತ್ತಿದ್ದ ಇರ್ಫಾನ್, ಪಾತ್ರಕ್ಕಾಗಿ ತುಂಬ ಹಾರ್ಡ್ ವರ್ಕ್ ಮಾಡುತ್ತಿದ್ದ ಇರ್ಫಾನ್..

ಜೋರು ಮಳೆಯ ಮುಂಜಾನೆ ಆತ ಹೊರಟುಹೋದ ಸುದ್ದಿ ಬಂತು.

ಈ ಸಮಯದಲ್ಲಿ ಏನು ಹೇಳಿದರೂ ಅದು ಆರ್ಟಿಫಿಷಿಯಲ್ಲೇ. ಮಾತಿನ ಅಗತ್ಯವೇ ಇಲ್ಲದೇ ಎಲ್ಲವನ್ನೂ ಹೇಳುತ್ತಿದ್ದವನಿಗೆ ನಾವು ಮಾತಿನ ಮೂಲಕ ಏನು ತಾನೇ ಹೇಳಲು ಸಾಧ್ಯ..

-ಪ್ರಿಯಾ ಕೆರ್ವಾಶೆ 

‍ಲೇಖಕರು avadhi

29 April, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading