ನಕ್ಕುಬಿಟ್ಟೆ
ಮುಕುಂದಾ
ಜೋರಾಗಿ ಗಹಗಹಿಸಿ
ನಕ್ಕುಬಿಟ್ಟೆ
ಹುಚ್ಚನೆಂದ ಯಾರೋ
ಹುಚ್ಚಪ್ಪ ಬೆಚ್ಚಿಬಿದ್ದು !
ವಾಗತ್ಯ ಯಂದನವ
ದರ್ಪದಿಂದ
ಅಗತ್ಯ ಮುಗಿದಾಯಿತಲ್ಲ !
ಎಂದು ನಕ್ಕುಬಿಟ್ಟೆ
ಅಶುಭವೆಂದು ಕೂಗಿದ
ಜಂಬದಿಂದ
ಶುಭವಾಗಲಿ
ಎಂದು ನಕ್ಕುಬಿಟ್ಟೆ

ಆಚಾರವಿದೆಂದು ಕೆಣಕಿದ
ಕುಹುಕದಿಂದ
ವಿಚಾರಮಾಡಿನ್ನೊಮ್ಮೆ
ಎಂದು ನಕ್ಕುಬಿಟ್ಟೆ
ಗುದ್ದುಕೊಡುವ ಭರದಲ್ಲಿ
ಬಿದ್ದುಬಿಟ್ಟೀ ಜೋಕೆ
ಕುಕ್ಕುವುದ ಬಿಟ್ಟು ತಬ್ಬಿನೊಡೊಮ್ಮೆ
ಎಂದು ನಕ್ಕುಬಿಟ್ಟೆ
ಬೆತ್ತಲೆ ಬಂದು ಬೆತ್ತಲೆ
ಹೋಗುವ ನಶ್ವರ ದೇಹ
ಅಂಕು ಡೊಂಕೇ
ಎಂದು ನಕ್ಕುಬಿಟ್ಟೆ
ತುಕ್ಕು ಹಿಡಿದ ಬುದ್ದಿಗೆ ತಕ್ಕಡಿಯಾಕೆ
ಹುಚ್ಚನೋ ಬೆಪ್ಪನೋ ಹಡದಪ್ಪ ನೋಡ್ಯಾನೇ
ಬಿದ್ದುಬಿದ್ದು ಗಹಗಹಿಸಿ
ನಂಗ್ಯಾಕೆ ಎಂದು ನಕ್ಕುಬಿಟ್ಟೆ…….






0 Comments