ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೋಗಿ ಕವಿತೆ: ಅವಳನ್ನು ನೋಯಿಸಿದ ಮುಸ್ಸಂಜೆಗೆ

ಆ ಅಪರಾತ್ರಿ ನಾನು

ತೀರಿಕೊಂಡೆ.

ಒಂದು ಮಾತು, ಮತ್ತೊಂದು ಸಂದೇಶ,

ಕಣ್ಣೀರ ಹನಿ, ಬಿಕ್ಕುವ ಸದ್ದು, ಮುಗಿಯದ ದಾರಿ

ನಾಳೆ

ಖಗ್ರಾಸ ಸೂರ್ಯಗ್ರಹಣ.

sakhi3

ಆ ಅಪರಾತ್ರಿ

ನಾನು ನನ್ನನ್ನೇ

ಕೊಂದುಕೊಂಡೆ.

ದೂರದಲ್ಲಿ ರೇಲಿನ ಸಿಳ್ಳೆ

ಯಾರದೋ ನಿಟ್ಟುಸಿರಿನಂತೆ.

ಯಾವುದೋ ಮೆರವಣಿಗೆ

ಎಲ್ಲೋ ಮಳೆ ಬಂದಿದ್ದಕ್ಕೆ

ನನ್ನ ಹೊಟ್ಟೆಯೊಳಗೆ ಧಗೆ.

ಆ ಅಪರಾತ್ರಿ

ನಾನು ಮತ್ತೆ ಹುಟ್ಟಿದೆ.

ಕಲಿಯುತ್ತಿದ್ದೇನೆ; ಮಾತು,.

ಅಂಬೆಗಾಲು..

ಯಾರ ಕಾಲನ್ನೂ ತುಳಿಯದೇ

ಎಲ್ಲೂ ಎಡವದೇ ನಡೆಯಲು.

ಮತ್ತೆ ಎಂದೂ ಅಪರಾತ್ರಿಯಲ್ಲಿ

ಸಾಯದಿರಲು.

sakhi3

ಆ ಅಪರಾತ್ರಿ

ನಾನವಳನ್ನು ಮತ್ತಷ್ಟು ಪ್ರೀತಿಸಿದೆ.

ಸಮರ್ಥನೆ ಇಲ್ಲದ ಮಾತಿನ ಹಾಗೆ

ಬುಡವಿಲ್ಲದ ಮೋಡ.

ರೋಹಿಣಿಯ ಸಂಗವಿಲ್ಲದ ಚಂದ್ರ.

ನನ್ನೆದುರಿನ ಕಗ್ಗತ್ತಲು.

ಕಡ್ಡಿಗೀರಿದ ಪ್ರೀತಿ ಗುಡ್ಡ ಸುಟ್ಟೀತೇ?

ಈ ಅಪರಾತ್ರಿಗಳಲ್ಲಿ ನಾನು

ಅವಳಾಗಿದ್ದೇನೆ.

ಮುನಿವ ರಾತ್ರಿಗಳ ಪಾಲಿಗೆ ಮೌನಿ.

ಸಣ್ಣಗೆ ಅಳುವ ದನಿ

ನನ್ನೊಳಗೆ ಕಣ್ಣೀರ ತುಳುಕಿಸಿ

ನನ್ನ ಅಮರತ್ವದ ಆಶೆಯನ್ನು ಹುಸಿಗೊಳಿಸುತ್ತಿದೆ.

ಅವಳು

ನನ್ನೊಳಗೆ ನಿರಂತರ

ದಾಹ. ಅಕ್ಕರೆ ಮತ್ತು

ನನ್ನ ಸಣ್ಣತನಕ್ಕೆ ಸವಾಲು.

sakhi3

ಕ್ಷಮಿಸು

ನಾನು ಸಂತನಾಗಲಾರೆ

‍ಲೇಖಕರು avadhi

23 July, 2009

8 Comments

  1. srinivasagowda

    ahhaa, chennaagide.. jogi padya modi
    haakuthave avra haage…

    • avadhi

      ಇದು ನಿಮ್ಮ ಕವಿತೆಯಲ್ಲ
      ನನ್ನದೇ ಕವಿತೆ
      -ಜಿ ಎನ್ ಮೋಹನ್

      • anu

        arthaa aagilla.. sir nimma uttara

        • shiva

          ok.

  2. Santhosh Ananthapura

    ಖಂಡಿತಾ ನಿಮ್ಮನ್ನು “ಸಂತನಾಗಲು” ಬಿಡಲಾರೆವು….!!! ಚೆನ್ನಾಗಿದೆ…..
    — ಸಂತೋಷ್ ಅನಂತಪುರ

  3. ಆಲಾಪಿನಿ

    ನೋಯಿಸಿದ್ದು ಆ ಒಬ್ಬಳನ್ನು,
    ಆದರೆ ಕವಿತೆ ತಟ್ಟಿದ್ದು? 🙂

  4. ಚಂದಿನ

    “ಬುಡವಿಲ್ಲದ ಮೋಡ”
    “ರೋಹಿಣಿಯ ಸಂಗವಿಲ್ಲದ ಚಂದ್ರ”

    ವಾಹ್… ಮಸ್ತಾಗಿದೆ.

  5. ಮಧುವಂತಿ

    ಆ ಅಪರಾತ್ರಿಗಳಲ್ಲಿ ಅವನು ನಾನಾದಾಗ
    ನನ್ನನ್ನು ನಾನು ಕಳೆದುಕೊಂಡು
    ಚೆಲ್ಲಾಪಿಲ್ಲಿಯಾಗಿದ್ದೇನೆ.
    ನಾವಿಬ್ಬರೂ ನೊಂದುಕೊಂಡ
    ರಾತ್ರಿಯ ನೆರಳಿನಲ್ಲಿ
    ಮೌನ, ಮತ್ತಷ್ಟು ಪ್ರೀತಿಸುವ ಆಕಾಂಕ್ಷೆ,
    ಚಂದ್ರಪ್ರಭೆ ಮತ್ತು
    ಅವನು ಕವಿ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading