‘ಜೈ ಭೀಮ್’ ನೋಡಲು ಅಂತಃಕರಣ ಬೇಕು…

ಆಕಾಶ್ ಆರ್ ಎಸ್

ದಕ್ಷಿಣ ಭಾರತದ ಚಿತ್ರರಂಗವು ಕೇವಲ ಮನರಂಜನೆ ಮಾತ್ರ ಸೀಮಿತವಾಗಿದ್ದರೆ ತಮಿಳು ಚಿತ್ರರಂಗ ಇದರ ತದ್ವಿರುದ್ಧವಾಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲಾ ಚಿತ್ರರಂಗಕ್ಕಿಂತ ತಮಿಳು ಚಿತ್ರರಂಗದ ಸಿನಿಮಾಗಳು ಮನರಂಜನೆಗಿಂತ ಹೆಚ್ಚಾಗಿ ಸಾಮಾಜಿಕ ಕಟ್ಟಳೆಗಳಲ್ಲಿ ನಡೆಯುವ ನೈಜ ಕಥೆಗಳನ್ನು ತೆರೆಮೇಲೆ ತರುತ್ತಿದ್ದಾರೆ.

ಜಾತಿ ವ್ಯವಸ್ಥೆ, ದಲಿತ ಕಥನದಂತ ಕಥೆಯನ್ನು ಸಿನಿಮಾ ರೂಪದಲ್ಲಿ ತರಲು ಹಿಂಜರಿಯುವ ಅನೇಕ ಚಿತ್ರರಂಗಳ ಮಧ್ಯೆ ತಮಿಳು‌‌ ಚಿತ್ರರಂಗ ಯಾವುದೇ ಭಯವಿಲ್ಲದೆ ಸಿನಿಮಾ ಮಾಡುತ್ತಿದೆ. ಅಸುರನ್, ಕರ್ಣನನ್ ನಂತಹ ಸಿನಿಮಾಗಳ ಮುಖಾಂತರ ವ್ಯವಸ್ಥೆಯಲ್ಲಿ‌ ಕೆಳವರ್ಗಗಳ ಸ್ಥಿತಿಯನ್ನು ಸಮಾಜ ನೋಡುವ ರೀತಿಯನ್ನು ತೆರೆಮೇಲೆ ತಂದಿರುವುದು ನಾವೆಲ್ಲ ಕಾಣಬಹುದು. ಈಗ ಅಂತಹದೇ ಆದ ಸಿನಿಮಾ ತೆರೆಮೇಲೆ ತರುವ ಮುಖಾಂತರ ತಮಿಳು ಚಿತ್ರರಂಗದ ಮತ್ತೇ ತನ್ನ ಗಟ್ಟಿತನ ತೊರಿದೆ.

ನಿನ್ನೆ‌ ಅಷ್ಟೇ ಬಿಡುಗಡೆಯಾದ ಜೈ ಭೀಮ್ ಸಿನಿಮಾ ಸಮಾಜಕ್ಕೆ ಹಿಡಿದ ಕನ್ನಡಿಯಾಗಿದೆ. ಪೋಲಿಸ್ ವ್ಯವಸ್ಥೆಯ ಅಸಲಿ ತನವನ್ನು ತೆರೆಮೇಲೆ ತಂದಿದ್ದಾರೆ. ಒಂದು ಬುಡಕಟ್ಟು ಸಮುದಾಯದ ಜನರನ್ನು ಜಾತಿಯ ಆಧಾರದಿಂದ ಅವರನ್ನು ಕೇಳುವರು ಯಾರು ಇಲ್ಲ ಎಂದು ಅವರ ಮೇಲೆ ಸುಳ್ಳು ಕೇಸ್ ದಾಖಾಲಿಸುವ ಮುಖಾಂತರ ಶುರುವಾಗುವ ಕಥೆ ನಂತರದಲ್ಲಿ ಪೋಲಿಸರು ಉಳ್ಳವರ‌ ಪರವಾಗಿ ನಿಂತು ಕೆಳವರ್ಗದವರ ಸುಳ್ಳು ಕೇಸ್ ಒಪ್ಪಿಕೊ ಎಂದು ದುಂಡ ವರ್ತನೆ ಮಾಡುತ್ತಾ ಅವರನ್ನು ಠಾಣೆಯಲ್ಲಿ ಮನ ಬಂದಂತೆ ದಂಡಿಸುವ ಪೋಲಿಸರು ಕಾನೂನಿನ ಚೌಕಟ್ಟು ಮೀರಿ ಅನೈತಿಕವಾಗಿ, ಕೆಳವರ್ಗಗಳನ್ನು ಶೋಷಣೆ ಮಾಡುವ ರೀತಿಯನ್ನು ನಿರ್ದೇಶಕ ತೋರಿಸಿದ್ದಾರೆ.

ಹೈಕೋರ್ಟ್ ಲಾಯರ್ ಆಗಿ ಅಂಬೇಡ್ಕರ್, ಪೆರಿಯಾರ್, ಮಾರ್ಕ್ಸ್ ಆದರ್ಶ ಇಟ್ಟುಕೊಂಡು ನೊಂದವರ ಪರವಾಗಿ ಯಾವುದೇ ಹಣ ಪಡೆಯದೆ ಅವರಿಗೆ ನ್ಯಾಯ ಒದಗಿಸುವ ಸೂರ್ಯನ (ಚಂದ್ರು) ಪಾತ್ರ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ಪೋಲಿಸ್ ವ್ಯವಸ್ಥೆಯ ವಿರುದ್ಧ ನಿಲ್ಲುವ ನಾಯಕ ಚಂದ್ರು ಕಾನೂನಿನ ವಿರುದ್ದವಾಗಿ ಕಾರ್ಯನಿರ್ವಹಿಸುವ ಪೋಲಿಸ್ ರ ಅಸಲಿ ತನವನ್ನು ಎಳೆ ಎಳೆ ಬಿಚ್ಚಿಡುತ್ತಾ ನೊಂದವರಿಗೆ ನ್ಯಾಯ ಒದಗಿಸಲು ಮುಂದಾಗುತ್ತಾನೆ‌.

ಇನ್ನು ನಿರ್ದೇಶಕ ಟಿಜೆ ಜ್ಞಾನವೇಲ್ ಕಥೆಯಲ್ಲಿ ಎಲ್ಲು ತಪ್ಪದೆ ಕುತೂಹಲ ಮುಡಿಸಿದ್ದಾರೆ ಕಥೆಕ್ಕೆ ತಕ್ಕಂತೆ ಲೋಕೆಷನ್ ಹಾಗೂ ಸಂಗೀತ ,ಸೂರ್ಯನ ಅಭಿನಯ ಚಿತ್ರದ ಪ್ಲಸ್ ಪಾಯಿಂಟ್ ಆಗಿದೆ. ‘ಗಾಂಧಿ, ಬೋಸ್, ಭಗತ್ ಎಲ್ಲರು ಇಲ್ಲೆ ಇದ್ದಾರೆ ಅಂಬೇಡ್ಕರ್ ನಾ ಮಾತ್ರ ಯಾಕೆ ಒಬ್ಬಂಟಿ ಮಾಡಿದ್ದಿರಾ’ ಎನ್ನುವ ಸಂಭಾಷಣೆ ವಾಸ್ತವಕ್ಕೆ ಹತ್ತಿರವಾದಂತೆ ಇದೆ.

ಜೈ ಭೀಮ್ ನೋಡುಗರಿಗೆ ಸಮಾಜದ ವ್ಯವಸ್ಥೆ ಮತ್ತು ಮೇಲು ಕೀಳುಗಳ ತಾರತಮ್ಯ ,ಪೋಲಿಸ್ ಒಳ ವ್ಯವಸ್ಥೆಗಳ ಅರಿವಾಗುತ್ತದೆ. ಯಾವುದೆ ಮತದಾನ ಗುರುತಿನ ಚಿಟಿ, ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮನೆ, ಇಲ್ಲದೆ ಬದುಕುವ ಜನರು ಅಲ್ಲಿನ ರಾಜಕಾರಣಿಗಳು ಯಾವುದೇ ಸೌಲಭ್ಯ ಒದಗಿಸದೇ ಇರುವುದು ಅವರನ್ನು ಮುಟ್ಟಿಸಿಕೊಳ್ಳದೆ ದೂರ ತಳ್ಳುವುದು ಇತಂಹ ದೃಶ್ಯಗಳು ಕಣ್ಣು ಒದ್ದೆ ಮಾಡುವುದರೊಟ್ಟಿಗೆ ವ್ಯವಸ್ಥೆಯ ಮೇಲೆ ಸಿಟ್ಟಾಗುವಂತೆ ಮಾಡುತ್ತದೆ‌.ಹೀಗೆ‌ ಹಲವಾರು ಕಾರಣಗಳಿಂದ ಜೈ ಭೀಮ್ ಸಿನಿಮಾ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿದೆ ಹಾಗೆಯೇ ಈ ಸಿನಿಮಾ ನೋಡಲು ಬರೀ ಕಣ್ಣುಗಳಿದ್ದರೆ ಸಾಲದು ಗುಂಡಿಗೆ ಬೇಕು, ಅಂತಃಕರಣವು ಬೇಕು…

‍ಲೇಖಕರು Admin

November 3, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಚಂದ್ರಪ್ರಭ ಕಠಾರಿ

    ಲೇಖನ ಚೆನ್ನಾಗಿದೆ… ಕೆಳವರ್ಗ ಎನ್ನುವುದಕ್ಕಿಂತ ತಳಜಾತಿ, ಸಮಾಜದ ಅಂಚಿನಲ್ಲಿರುವ ಕತೆಯೆನ್ನುವುದು ಹೆಚ್ಚು ಸೂಕ್ತ

    ಪ್ರತಿಕ್ರಿಯೆ
  2. MADHU BN

    ಈ ತರಹದ ಸಿನೆಮಾಗಳು ನಮ್ಮ ಕನ್ನಡ ಮಣ್ಣಿನ ಘಮಲನ್ನು ಹೊತ್ತು ತಯಾರಾಗಿ ಅದನ್ನು ನಾವೆಲ್ಲರೂ ಆನಂದಿಸುವುದು ಯಾವಾಗಲೋ? ಹೌದು ನಮ್ಮ ತಮಿಳು ಸಹೋದರರು ಜಾತಿ ಗಲೀಜನ್ನು, ಶೋಷಣೆಯನ್ನು, ಅಸ‌ಹ್ಯಕರ ಜಾತಿ ಮೇಲ್ಮೇಯನ್ನು ಸಿನೆಮಾ ಮಾಧ್ಯಮದ ಮೂಲಕ ಜಾಡಿಸುತ್ತಿದ್ದರೆ ನಾವು ಕನ್ನಡಿಗರು ಇನ್ನೂ ಹೀರೋ ಬಿಲ್ಡಪ್ ಸಿನೆಮಾ ಮಾಡಿಕೊಂಡು ತೃಪ್ತರಾಗಿದ್ದೇವೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: