ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೇನುಗನಸಿನ ಕಚಗುಳಿಯಿಟ್ಟಳು..

ನಿಘಂಟು

ಸುನೀತ, ಕುಶಾಲನಗರ

ಕಾಡೊಳಗಿನ ಪ್ರಣಯದಲಿ
ದಕ್ಕಿದ ಮುತ್ತುಗಳಿಗೆಲ್ಲಾ
ಹೊಳೆ ಮೈದುಂಬಿ
ನಿನಾದಿಸಿದ್ದಳು

sheಕೈಕೈ ಹಿಡಿದು
ಲಲ್ಲೆಗೆರೆಯುತಾ
ಹೊಳೆ ದಂಡೆಯನು
ಹಾಯುವಾಗಲೆಲ್ಲಾ
ಹಿಂಬಾಲಿಸಿ ಗೇಲಿಸಿದ್ದಳು

ಕಾಲ ಸರಿದು
ನಡು ನೀರೇ ಉಳಿದರೂ
ನಮ್ಮೊಲವಿಗೆ
ಜೇನುಗನಸಿನ
ಕಚಗುಳಿಯಿಟ್ಟಳು

ಬೇಸಗೆಯ
ಸುಡು ಬಿಸಿಲಲಿ
ಹೊಳೆ ಹರಿಯುತ್ತಿದ್ದ
ಕುರುಹಷ್ಟೆ
ಒಣದಡದ
ಹೆಜ್ಜೆ ಮೇಲಿನ ಹೆಜ್ಜೆಗಳಲ್ಲಿ
ನಾವಿಟ್ಟ ಹೆಜ್ಜೆಗಾಗಿ ತಡಕಾಡಿದೆ
ಕಾದ ಮರಳ ಮಣ್ಣಿನ
ಬೆವರಿಗೂ ಸಾಕ್ಷಿಯಾದಳು

ಎಲ್ಲವನು ನಿಘಂಟಿನಲಿ
ಬಚ್ಚಿಡಲು ಸೊರಗಿದ ಹೊಳೆ
ಮಾತನಾಡಲು ಆಗದೆ
ಹರಿಯುತ್ತಲೇ ಇದ್ದಾಳೆ.

‍ಲೇಖಕರು Admin

20 November, 2016

3 Comments

  1. smitha Amrithraj.

    Chennagide akka….

  2. Ashok Dr

    ಜೇನುಗನಸಿನ ಕಚಗುಳಿಯಿಟ್ಟಳು.. Sweet…..

    • SUNEETHA

      Thank you

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading