-ನಾಗೇಶ್ ಜೆ. ನಾಯಕ
ಬುರುಡೆ ದಾಸಯ್ಯರ ಪ್ರವರ
ಆ ಗುಂಪಿನಲ್ಲಿ
ಅವರತ್ತ ವಾಲುತ್ತಾ
ಈ ಗುಂಪಿನಲ್ಲಿ
ಇವರತ್ತ ವಾಲುತ್ತಾ
ಸ್ವಂತಿಕೆಯೇ ಇಲ್ಲದೆ
ಬುರುಡೆ ಬಿಡುವ ಜಾಯಮಾನದ
ಜೀ ಹುಜೂರ್ ಜನಗಳಿವರು!
ನಮ್ಮೆದುರು ವಿನೀತರಾಗಿ
ಅವರ ದೌರ್ಬಲ್ಯಗಳ ಬಗ್ಗೆ
ಖಂಡಿಸುತ್ತಾ ಆಡಿಕೊಂಡವರು
ಅವರೇ ಇದಿರು ಬಂದಾಗ
ಬಣ್ಣದ ಮಾತುಗಳಿಂದ
ಎತ್ತರಕ್ಕೇರಿಸುತ್ತಾ ಧನ್ಯರಾಗುತ್ತಾರೆ
ನಮ್ಮನ್ನೇ ಅಲ್ಲಿ ಕೀಳಾಗಿ ಕಾಣುತ್ತಾರೆ
ಗೋಸುಂಬೆಗಳೇ ನಾಚುವಂತೆ!
ತೂಕವಿಲ್ಲದ ಮಾತುಗಳ
ಆಸರೆಯಲ್ಲಿಯೇ ದಿನಗಳೆವವರು
ತಮ್ಮ ತಪ್ಪುಗಳನ್ನೆಲ್ಲಾ ಇತರರ
ಓಲೈಕೆಯಲ್ಲಿಯೇ ಮರೆಯಾಗಿಸಿಕೊಂಡವರು
ಹಲ್ಲುಕಿರಿಯುತ್ತಲೇ ಪ್ರಾಮಾಣಿಕರನ್ನು
ಹಗುರಾಗಿ ಕಂಡವರು…
ಕಾಲನ ಚಕ್ರದ ಅಡಿ
ಒಮ್ಮೆ ಸಿಗಲೇಬೇಕು ಎಂಬುದ
ಮರೆತ೦ತೆ ನಟಿಸಿಹರು
ಬಣ್ಣ ಬಯಲಾದ ದಿನ…
ಬುರುಡೆ ದಾಸಯ್ಯರು
ಅದೆಷ್ಟೋ ಕಾಲ್ಗಳ ಕೆಳಗೆ ಸಿಕ್ಕು
ಮಣ್ಣಾಗುವ ದಿನಗಳು ದೂರವಿಲ್ಲ
ಕಾಯಬೇಕಷ್ಟೇ…!






0 Comments