ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೀವನದ ಹೊಟ್ಟೆ ತುಂಬಿ

ಮಾಲಾ.ಮ.ಅಕ್ಕಿಶೆಟ್ಟಿ

ವಿಧ ವಿಧ ಭಕ್ಷ್ಯಗಳು ಸಿಹಿ ಖಾರ ಹುಳಿ ಒಗರು 
ಈರುಳ್ಳಿ ಬೆಳ್ಳುಳ್ಳಿ ಹುಣಸೆ ಬೆಲ್ಲ  
ಎಣ್ಣೆ ಹೆಚ್ಚೋ ಕಡಿಮೆಯೋ 
ರುಚಿ ಪಾಪಿ ನಾಲಿಗೆ ಬಯಕೆ 

ಆಸೆಗಳು ಮೃಷ್ಟಾನ್ನ ಭೋಜನ 
ಸ್ವಾದಗಳ ಏರಳಿತ ಹುಳಿ ಕಹಿ ಹೆಚ್ಚು 
ಸಿಹಿ ಕಡಿಮೆ ಖಾರ ಒಗರು ಹಾಜರಿ ಯಾವತ್ತೂ 
ಹಿತಮಿತ ಸ್ವಾದ ಕನಸು 

ಶುದ್ಧ ಮನಸ್ಸು ಆಸೆ ಪಟ್ಟು 
ಹಿಡಿದು ಕೈಯಲ್ಲಿ ಭಿಕ್ಷಾಪಾತ್ರೆ 
ಸ್ವರ್ಗದ ಬಾಗಿಲ ಮುಂದೆ 
ಬರಲಿಲ್ಲ ಆತ ಸ್ವಾದಿಷ್ಟ ಕವಳ ಹಾಕಲು 

ಕಸುವಿನ ಯವ್ವನದ ಅಭಿಲಾಷೆಗಳು 
ನನಸಾಗಲಿಲ್ಲ ತರು ಕನಸುಗಳು 
ಸುಟ್ಟ ಬೂದಿಯೇ ಶಬ್ದ ಆಸೆ 
ತೂತಾದ ಕೊಡ ಯಾವತ್ತೂ ಖಾಲಿ 

ನಿರಾಸೆಯ ಬೇಗುದಿ ಉಚ್ಛ್ರಾಯ 
ಕುಸಿದು ಬಿದ್ದ ಆಸೆ ಮಹಲು 
ಬೇಸರಗಳ ಜೀವನದ ಹೊಟ್ಟೆ ತುಂಬಿ 
ರೋಧಿಸುತ್ತಿದೆ ಅಲ್ಲೆಲ್ಲೊ ಅತೃಪ್ತ ಆತ್ಮ ಮಣ್ಣಲ್ಲೂ  

‍ಲೇಖಕರು Avadhi

26 November, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading