ಟೀವಿಗಳನ್ನು ವೀಕ್ಷಿಸುವಾಗ ಎಷ್ಟೇ ರಿಯಾಲಿಟಿ ಶೋಗಳು ಪ್ರಸಾರ ಆದ್ರು ಕಳೆ ಕಳೆದುಕೊಳ್ಳದ ಧಾರಾವಾಹಿಗಳು ಅಂದ್ರೆ ಹಾಸ್ಯ ಧಾರಾವಾಹಿಗಳು.
ಕಾರಣಾಂತರಗಳಿಂದ ಅದು ಅರ್ಧಕ್ಕೆ ಬೈ ಬೈ ಹೇಳಿದ್ರು ಅದರ ಬಗ್ಗೆ ವೀಕ್ಷಕರಿಗೆ ಆಸಕ್ತಿ ಇದ್ದೆ ಇದೆ. ನಾನು ಹಲವು ಪತ್ರಿಕೆಗಳಲ್ಲಿ ವೀಕ್ಷಕರು ತಮ್ಮ ಅಭಿಪ್ರಾಯ ಹೇಳಿರುವುದನ್ನು ಕಂಡಿದ್ದೇನೆ.
ಒಮ್ಮೆಯಂತೂ ಚಾನೆಲ್ ಒಂದರಲ್ಲಿ ಪ್ರಸಾರ ಆದ ಹಾಸ್ಯ ಧಾರವಾಹಿ ಇದ್ದಕ್ಕಿದ್ದ ಹಾಗೆ ನಿಂತ ಬಗ್ಗೆ ಓದುಗರೊಬ್ಬರು ತಮ್ಮ ಸಿಟ್ಟು ಬರಹದ ಮೂಲಕ ವ್ಯಕ್ತ ಪಡಿಸಿದ್ದರು. ಇಷ್ಟೆಲ್ಲಾ ಇನ್ವಾಲ್ವ್ ಆಗ್ತಾರಾ ಎಂದು ಆಗ ಅನ್ನಿಸಿತ್ತು ನನಗೆ.ಕನ್ನಡ ವಾಹಿನಿಗಳು ತುಂಬಾ ವಿಶಿಷ್ಟ ಅಂತ ನನಗೆ ಸಿಕ್ಕಾಪಟ್ಟೆ ಸರ್ತಿ ಅನ್ನಿಸಿದೆ.
ಎಲ್ಲ ಬಗೆ ಕಾರ್ಯಕ್ರಮಗಳು ವೀಕ್ಷಕರ ಕೈಗಿತ್ತಿದ್ದಾರೆ ಅದರೊಂದಿಗೆ ಹಾಸ್ಯ-ವಿಡ೦ಬನೆಯಿಂದಲೂ ಅದು ದೂರ ಉಳಿದಿಲ್ಲ.
ಪೂರ್ಣ ಓದಿಗೆ- ಮೀಡಿಯಾ ಮೈಂಡ್




0 Comments