ಜಿ.ಕೆ.ಮಧ್ಯಸ್ಥ ಅವರ ‘ಪದೋನ್ನತಿ’ ಪದ ಕೋಶ ಪುಸ್ತಕ ಬಿಡುಗಡೆ ಸಮಾರಂಭದ ಫೋಟೋಗಳಿಗಾಗಿ ಭೇಟಿ ಕೊಡಿ ಓದು ಬಜಾರ್ ಮತ್ತು ಮೀಡಿಯಾ ಮೈಂಡ್
oppanna
ಶ್ರೀ ಜಿ.ಕೆ. ಮಧ್ಯಸ್ಥ – ಇವು ಪತ್ರಿಕೋದ್ಯಮ ಲೋಕಲ್ಲಿ ತುಂಬಾ ಮೇಗೆ ಹೋಯಿದವು.
ವಿಜಯಕರ್ನಾಟಕ ಪೇಪರಿಲಿ ಉನ್ನತ ಹುದ್ದೆಲಿ ಇದ್ದುಗೊಂಡು, ನಿತ್ಯವೂ ಜೆನರಿಂಗೆ ಅತ್ಯುತ್ತಮ ಗುಣಮಟ್ಟದ ಪತ್ರಿಕೆ ಕೊಡ್ಳೆ ಕಾರಣ ಆಯಿದವು.
ಅವು ಪೇಪರಿನ ಗುಣಮಟ್ಟ ನೋಡಿಗೊಂಬದರೊಟ್ಟಿಂಗೆ ಮತ್ತೊಂದು ಕಾರ್ರ್ಯವನುದೇ ಮಾಡಿಗೊಂಡು ಇದ್ದವು
– ಅದೆಂತರ?
“ಪದೋನ್ನತಿ” ಹೇಳ್ತ ಹೆಸರಿಲಿ ಒಂದು ಅಂಕಣ ಬರದು, ಅದರ ಮೂಲಕ ಓದುರಿಂಗೆ ಪ್ರತಿನಿತ್ಯ ಒಂದು ಶೆಬ್ದದ ಸಾರಾರ್ಥ ಹೇಳ್ತ ಕಾರ್ಯ ಮಾಡಿಗೊಂಡು ಇದ್ದವು.
ಅವರ ಅಕ್ಷರ ಸೇವೆಯ ಗುರುತಿಸಿ, ಮೊನ್ನೆ ಆಯಿತ್ಯವಾರ ಬೆಂಗುಳೂರಿಲಿ ಅವಕ್ಕೆ ಸಮ್ಮಾನ ಮಾಡಿದವು.
ಅದರೊಟ್ಟಿಂಗೆ, ಅಂಕಿತಪುಸ್ತಕ ಹೇಳ್ತ ಅಂಗುಡಿಯೋರು ಅವರ ಶಬ್ದಾರ್ಥಂಗಳ “ಪದೋನ್ನತಿ” ಸಂಗ್ರಹವ ಪುಸ್ತಕ ಮಾಡಿ ಹೆರತಯಿಂದು.
ನಮ್ಮ ಬೈಲಿನ ಪತ್ರಿಕೋದ್ಯಮ ಹಿರಿಯರಾದ ಶ್ರೀ ಮಧ್ಯಸ್ಥ ರ ನಮ್ಮ ಬೈಲಿಂಗೆ ಪರಿಚಯ ಮಾಡ್ತದು “ನಮ್ಮೂರು-ನಮ್ಮೋರು” ಅಂಕಣಕ್ಕೆ ಹೆಮ್ಮೆ.
ಸಮ್ಮಂದಲ್ಲಿ ಹೇಳ್ತರೆ, ನಮ್ಮೆಲ್ಲರ ಪ್ರೀತಿಯ ಸುವರ್ಣಿನಿ ಅಕ್ಕಂಗೆ ಇವು ಸೋದರಮಾವ!
ಸೋದರಮಾವನ ಪರಿಚಯ ನಮ್ಮೆಲ್ಲರಿಂಗೆ ಸುವರ್ಣಿನಿ ಅಕ್ಕ ಮಾಡಿ ಕೊಡ್ತವು.
ಓದಿ, ಮಧ್ಯಸ್ಥರ ಮುಂದಾಣ ದಾರಿಯೂ ಯಶಸ್ಸುಗಳಿಂದ ಕೂಡಿರಲಿ ಹೇಳ್ತ ಆಶಯ ನಮ್ಮೆಲ್ಲದಾಗಿರಲಿ.
~
ಗುರಿಕ್ಕಾರ°
ಜಿ.ಕೆ. ಮಧ್ಯಸ್ಥರ ಸಣ್ಣ ಪರಿಚಯ:
ಮೂಲತಃ ಕಾಸರಗೋಡು ಜಿಲ್ಲೆಯ ಬೇಳ ಗ್ರಾಮದ “ಕುಂಜಾರು” ಹೇಳ್ತ ಊರಿನವ್ವು.
ಶಾಲೆ ಕಾಲೇಜಿಂಗೆ ಹೋಪಗಲೇ ಸಾಹಿತ್ಯದ ಬಗ್ಗೆ ಆಸಕ್ತಿ.
ಗಡಿನಾಡಿನ ಕನ್ನಡಿಗ ಆಗಿ ಕನ್ನಡ ಪರ ಹೋರಾಟ ಮಾಡಿತ್ತಿದ್ದವು.
ಇಂಗ್ಲಿಷ್ ಸಾಹಿತ್ಯಲ್ಲಿ ಪದವಿ ವಿದ್ಯಾಭ್ಯಾಸ (ಕಾಸರಗೋಡಿಲ್ಲಿ) ಮುಗುಶಿ ಮೊದಾಲಿಂಗೆ “ಉದಯವಾಣಿ” ದಿನಪತ್ರಿಕೆಲಿ ಉದ್ಯೋಗ ಶುರು ಮಾಡಿದವು.
14 ವರ್ಷ ಉದಯವಾಣಿಲಿ ಕೆಲಸ ಮಾಡಿ ಮತ್ತೆ “ಮುಂಗಾರು” ಹೇಳ್ತ ದಿನಪತ್ರಿಕೆಲಿ ಮೂರು ವರ್ಷಂಗಳ ಕಾಲ ಇತ್ತಿದ್ದವು.
ಆಮೇಲೆ ಅಲ್ಲಿಂದ ಬೆಂಗ್ಳೂರಿಂಗೆ ಬಂದು “ಪ್ರಜಾವಾಣಿ”ಗೆ ಸೇರಿದವ್ವು.
ಅದರ್ಲಿ ಇಪ್ಪತ್ತು ವರ್ಷ ಇದ್ದು ನಿವೃತ್ತಿ ಆದವು.
ನಿವೃತ್ತ ಜೀವನಲ್ಲಿ ಮನೆಲಿಪ್ಪಗ, “ವಿಜಯಕರ್ನಾಟಕ” ಪತ್ರಿಕೆಂದ ಕರೆಬಂತು, ಗುಣಮಟ್ಟ ನಿಯಂತ್ರಕರಾಗಿ ಕಾರ್ಯ ನಿರ್ವಹಿಸಲೆ.
ಅಲ್ಲಿ ಸೇರಿ ಈಗ 3-4 ವರ್ಷ ಆತು,
ಅದಾಗಲೇ ಇವು ಕೆಲವು ಪುಸ್ತಕಂಗಳ ಬರದು ಪ್ರಕಟಮಾಡಿದ್ದವು. (“ದುಡ್ಡು-ಕಾಸು” ಬರದ ಒಂದು ಪುಸ್ತಕ ತುಂಬ ಪ್ರಸಿದ್ಧಿಗೆ ಬಯಿಂದು.)
ಹುಟ್ಟಿದ್ದು: 16 ಅಗೋಸ್ತು, 1946
(ಇವ್ವು ಎನ್ನ ಅಮ್ಮನ ಅಣ್ಣ, ಎನ್ನ ಸೋದರ ಮಾವ )






0 Comments