ಜಿತೇಂದ್ರ ಬೇದೂರು
—–
ಪರದೆ ಸರಿಯುವ ಮೊದಲೇ
ತೊಳೆದು ಹೋಗಿದೆ ಬಣ್ಣ,
ಆಟ ಮುಗಿಯುವ ಮೊದಲು
ತೆರೆಯಬಹುದೇ ಕಣ್ಣ?
ತೊಗಲು ಗೊಂಬೆಯ ಸೂತ್ರದ ತುದಿಯ ಹಿಡಿದವರಾರು?
ಯಾರು ಬರೆದಿಹ ಕತೆಯೋ, ಎಷ್ಟು ಗೋಜಲು,
ಪಾತ್ರಗಳು ಬದಲಾಗಿ, ಅಂಕಗಳು ಕಳೆದವು,
ಅರ್ಥವಾದುದು ಎಷ್ಟು?,ಯಾವ ಮಜಲು?!

ಅವನ ವೇಷದ ಮೋಹ, ಇವನಿಗೆ
ಇವನ ಪಾತ್ರದ ಬಯಕೆ, ಅವನ ಮನದೊಳಗೆ
ಅವರಿವರ ಪಾತ್ರಗಳ ತಾ ತೊಡುವ ಭರದಲ್ಲಿ,
ತನ್ನ ಪಾತ್ರದ ಪರಿವೆ ಎಲ್ಲಿ??
ನಡೆಯುತಿದೆ ನಾಟಕವು ಯಾರ ರಂಜನೆಗೋ?
ಯಾವ ಮನ ತಣಿಸಲು ಈ ರಂಗಸಜ್ಜಿಕೆಯೋ?
ಬಗೆ ಬಗೆಯ ಭಾವ, ಥರಥರದ ವೇಷ,
ಹುಸಿ ಎಷ್ಟು, ನಿಜವೆಷ್ಟು ಈ ರಂಗಸ್ಥಳದೊಳು?






0 Comments