ಜಿ.ಟಿ. ನಾರಾಯಣ ರಾಯರ (ನನ್ನ ತಂದೆ,) ಮುದ್ರಣದಲ್ಲಿ ಅಲಭ್ಯ ಕೃತಿಗಳನ್ನೆಲ್ಲಾ ನನ್ನ ಅನುಕೂಲದ ಕಂತುಗಳಲ್ಲಿ ಅಂತರ್ಜಾಲಕ್ಕೇರಿಸಿ, ಸಾರ್ವಜನಿಕಕ್ಕೆ ಮುಕ್ತವಾಗಿಸುತ್ತಿದ್ದೇನೆ. ಇವುಗಳನ್ನು ಮೂಲಕ್ಕೆ ನಿಷ್ಠವಾಗಿ ಬೆರಳಚ್ಚಿಸುವ ಕೆಲಸದ ಜೊತೆಗೆ ನಾನು ನನ್ನ ಮಿತಿ ಮತ್ತು ಸೌಕರ್ಯಕ್ಕೆ ನಿಲುಕಿದಂತೆ ಚಿತ್ರಗಳನ್ನೂ ಕಾಲಿಕವಾಗಿ ನನ್ನ ಅರಿವಿಗೆ ಬಂದ ತಿದ್ದುಪಡಿಗಳನ್ನೂ ಸೇರಿಸಲಿದ್ದೇನೆ. ಇದರಲ್ಲಿ ತಂದೆಯ ವಿಜ್ಞಾನ ಮತ್ತು ಅದರ ಕನ್ನಡ ಪ್ರಸರಣ ಗರಡಿಯಲ್ಲಿ ಪಟ್ಟ ಶಿಷ್ಯನಂತೇ ಪಳಗಿದ ಎ.ಪಿ. ರಾಧಾಕೃಷ್ಣನ ಸಹಾಯವನ್ನು ಮತ್ತು ವಿದ್ಯುನ್ಮಾನ ಮಾಧ್ಯಮದ ಅನುಕೂಲದಲ್ಲಿ ಏನಾದರೂ ಸೇತುಗಳನ್ನು ಕಲ್ಪಿಸುವುದಿದ್ದರೆ ಎಂದಿನಂತೆ ನನ್ನ ಜಾಲತಾಣದ ಪೂರ್ಣ ನಿರ್ವಾಹಕ ಅಭಯಸಿಂಹನ (ನನ್ನ ಮಗ) ಪರಿಣತಿಯನ್ನೂ ಬಳಸಿಕೊಳ್ಳುತ್ತೇನೆ. ಸದ್ಯ `ಭವಿಷ್ಯವಿಜ್ಞಾನ’ ಪುಸ್ತಕದ ಮೊದಲ ಕಂತು ಓದಲು ಇಲ್ಲಿ ಚಿಟಿಕೆ ಹೊಡೆಯಿರಿ
ಇಂತು ವಿಶ್ವಾಸಿ
ಅಶೋಕವರ್ಧನ
ಸದ್ಯ ನನ್ನಲ್ಲಿ ಲಭ್ಯ ಜಿಟಿನಾ ಕೃತಿಗಳು: ಜಾತಕ ಮತ್ತು ಭವಿಷ್ಯ ರೂ ಹದಿನೈದು, ಬಾನಬಯಲಾಟ ಗ್ರಹಣ ರೂ ಹತ್ತು, Sceintific temper Rs 15, With great minds Rs. 30, Crossing the dateline rs. 40, ಸಪ್ತ ಸಾಗರದಾಚೆಯೆಲ್ಲೋ ರೂ ೬೦. ಫರ್ಮಾ ಯಕ್ಷಪ್ರಶ್ನೆ ರೂ ಅರವತ್ತು, ಸಂಗೀತ ರಸನಿಮಿಷಗಳು ರೂ ಕುವೆಂಪು ದರ್ಶನ ಸಂದರ್ಶನ ರೂ ಅತ್ರಿಸೂನು ಉವಾಚ ರೂ ಮೂವತ್ತು, ಎನ್.ಸಿಸಿ ದಿನಗಳು ರೂ ಐವತ್ತೈದು ಇತ್ಯಾದಿ






0 Comments