ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಾರಿ ಬಿದ್ದಿದ್ದು ಯಾವ ದಿಕ್ಕಿಗಿ ಹೇಳು ಖರೆ!

ರಮೇಶ ಆರೋಲಿ

ನದಿತೀರ

ಹನಿ ಮುಡ್ಯಾವ ಖರೆ
ದನಿ ಕಾಡ್ಯಾವ ಖರೆ
ಆದ್ರ… ಈ ನಗಿಡ್ಯಾಗ ನೆಪ್ಪಾಗೊ
ಆ ಹಾಡು ಯಾರದು ಹೇಳು ಖರೆ!
–
ಹೂವು ದಿನಾ ಬಿಡ್ತಾವ ಖರೆ
ನೋಡೋರ ಕೈಮಾಡಿ ಕರಿತಾವ ಖರೆ
ಆದ್ರ… ಜಡಿಗೆ ಮುಡಿದಿದ್ದು
ಯಾರ ಹೆಸರಲೆ ಹೇಳು ಖರೆ!
–
ಹಕ್ಕಿ ತೆಲ್ಯಾವ ಖರೆ
ಮತ್ತ ಗೂಡಿಗೆ ಹೊಂಟಾವ ಖರೆ
ಆದ್ರ… ಎದಿವಳಗ ಬಚ್ಚಿಟ್ಟ
ಗುಟ್ಟು ಯಾರದು ಹೇಳು ಖರೆ !
–
ನೆನಪು ಬರ್ತಾವ ಖರೆ
ನಗು ಬರ್ಸ್ತಾವ ಖರೆ
ಆದ್ರ…ಜೀವ ಹಿಂಡಿದ್ದು
ಯಾರು ಹೇಳು ಖರೆ!
–
ದು:ಖ ಆಗ್ತಾದ ಖರೆ
ಅಳು ಉಕ್ಕಿ ಬರ್ತಾದ ಖರೆ
ಆದ್ರ…ಕಣ್ಣಾಗ ನಿಂತಾವ
ಚೆಲುವ ಯಾರು ಹೇಳು ಖರೆ!
–
ಕನಸು ಬಿಳ್ತಾವ ಖರೆ
ಎಲ್ಲೆಲ್ಲೊ ಹೊಯ್ತಾವ ಖರೆ
ಆದ್ರ… ನೀ ಕುಂತಿದ್ದು
ಯಾರ ಕುದರೆ ಮ್ಯಾಲ ಹೇಳು ಖರೆ!
–
ಚುಕ್ಕಿ ಹೊಳ್ದಾವ ಖರೆ
ಬೆಳಕ ತಳ್ದಾವ ಖರೆ
ಆದ್ರ…ನೀ ಜಾರಿ ಬಿದ್ದಿದ್ದು
ಯಾವ ದಿಕ್ಕಿಗಿ ಹೇಳು ಖರೆ!

‍ಲೇಖಕರು avadhi

28 July, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

2 Comments

  1. Dhananjaya

    ಇಂಥಾ ಕವನ ಬರೀ ಅಂತ ನಿನ್ನನ್ನ ಕಾಡಿದ್ದು ಯಾರು ಹೇಳು ಖರೆ!!!

  2. Vithal Dalawai

    Very nice ramesh

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading