ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಜಾರಿಬಿದ್ದ ಹನಿಯೊಂದು ಅವಳ ತುಟಿಕಚ್ಚಿ’ – ಹೇಮಲತಾ ಕವಿತೆ

ಇಳೆಗೆ ಮಳೆ

ಹೇಮಲತಾ

ರಾತ್ರಿ ಮಳೆ ಜುನುಗುತ್ತಿದೆ ಹೀಗೆ
ನೆನೆಯೋ ಅಭೀಪ್ಸೆ ಹೊತ್ತುರಿಯುವ ಹಾಗೆ
ಬೆಳಗಾನ ಸುರಿಯುತ್ತಿರಬೇಕು
ಹನಿದು ತೊಪ್ಪೆಯಾಗಬೇಕು
ಮತ್ತು ಮಿಂದು ಬೆಚ್ಚಗಾಗಬೇಕು
 
ದಿಗಂತದಲ್ಲಿ ಕಾಣೆಯಾದ ಚುಕ್ಕಿ ಚಂದ್ರಮರು
ಅವನ ಕಣ್ಣಲ್ಲಿ ಇಳಿದು ಇಣುಕಿದ್ದಾರೆ
ಜಾರಿಬಿದ್ದ ಹನಿಯೊಂದು
ಅವಳ ತುಟಿಕಚ್ಚಿ
ಜೇನಮುತ್ತಾಗಿ ಹೊಳೆದು ತೂಗುತ್ತಿದೆ

ಮಿಂಚು ಆಕಾಶದಲ್ಲಷ್ಟೇ ಅಲ್ಲ
ಮಿನುಗುತ್ತಿದೆ ಇಬ್ಬರ ಮೈಯೆಲ್ಲಾ
ಏರಿದ ಹದ ಎದೆಬಡಿತ ಸುಶ್ರಾವ್ಯ ಶಬ್ದ
ಕಲಿಯಲು ಕಿವಿಗೊಟ್ಟ ಗುಡುಗು ಸಿಡಿಲು
ಈ ವೇಳೆ ಮಾತು ಮರೆತು ಸ್ತಭ್ದ
 
ಕತ್ತಲೆ ದಾರಿಗೆ ಬೆಳಕಿನ ಕಿರಣ
ನಲ್ಲನ ಸಂಗಾತ
ಕಣ್ಮುಚ್ಚಿ ಆಲಿಂಗಿಸುವೆ
ಮರೆಸುತ್ತ , ಕರಗಿಸುತ್ತಾ , ಸೆಳೆದೋಯ್ವ
ಸ್ವಚ್ಛ ಪ್ರೇಮ ಹರಿಯುತ್ತಿರಲಿ ಅವಿರತ
 
ನಿನ್ನ ಸಾನಿಧ್ಯದಲ್ಲಿ
ಚಂಡಿ ಮಳೆಯೂ ಮಾದಕ
ಕಲ್ಲುಮುಳ್ಳ ಹಾದಿಯು ರಮ್ಯ-ರೋಚಕ
ಬಿಡಿಸಿದ ಕೊಡೆ ಮಡಚದಿರಲಿ
ಅಮೋಘ ಮಳೆಗಾಲ ಮುಗಿಯದೇ ಹೋಗಲಿ
 

‍ಲೇಖಕರು G

10 October, 2014

6 Comments

  1. samyuktha

    Beautiful!

  2. mmshaik

    wonderful………………….

  3. vidyashankar

    ಅಮೋಘ ಮಳೆಗಾಲ ಮುಗಿಯದೇ ಹೋಗಲಿ… 🙂 Nice

  4. ಕುಸುಮಬಾಲೆ

    ಬೆಚ್ಚಗಿನ ಮಳೆಯಾಗುತ್ತಿರಲಿ ಆಗಾಗ:-)

  5. hema

    Samyuktha, mmashaik. and vidyashankar – mechiddakke dhanyavaadagalu

  6. Hema

    Thanks kusumabaale haaraikegalige 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading