
ನಾನು ದಂಡೋರ ಸೋಮು.., ನೀವು ನಮ್ಮ ಕೆಲಸ
ಮಾಡಿಕೊಡದಿದ್ರೆ ಮೈಮೇಲೆ ಮಲ ಸುರಿದುಕೊಳ್ಳುತ್ತೇವೆ ಸ್ವಾಮಿ
ಹೌದು ಈ ಮೇಲಿನ ಮಾತನ್ನು ನಮ್ಮ ಡಿಸಿ ಸಾಹೇಬರಿಂದ ಹಿಡಿದು ರಾಜ್ಯದ ವಿರೋಧ ಪಕ್ಷದ ನಾಯಕ ಸಿದದ್ರಾಮಯ್ಯ, ಗೋವಿಂದ ಕಾರಜೋಳ, ಎ, ನಾರಾಯಣಸ್ವಾಮಿ. ಯಾವ ಮಂತ್ರಿ ಬೇಕು ಹೇಳಿ ಥಟ್ಟನೆ ತನ್ನ ಟಚ್ ಸ್ಕ್ರೀನ್ ಮೊಬೈಲ್ನಿಂದ ಪೋನ್ ಹಚ್ಚಿ ತಕ್ಷಣ ಮಾತನಾಡುತ್ತನೆ. `ನಾನು ಸೋಮು ಸಾರ್ ಹಾಸನದ ಪೌರ ಕಾರ್ಮಿಕ. ಆ ಕಡೆಯಿಂದ ಹೇಳು ಸೋಮು ಎನ್ನುತ್ತಾರೆ. ಸಾರ್ ಐದು ಜನರನ್ನು ಪರ್ಮನೆಂಟ್ ಮಾಡುವ ಕೆಲಸ ಏನಾಯ್ತು..? ಅದೂ ಇದು ಎಂದರೆ ಮುಗಿಯಿತು. `ನೀವು ಮಾಡಿಕೊಡದಿದ್ದರೆ ನೋಡಿ ಕೊನೆಯದಾಗಿ ಹೇಳುತ್ತೇನೆ. ನಾವೆಲ್ಲಾ ಮಲ ಸುರಿದುಕೊಂಡು ಪ್ರತಿಭಟನೆ ನಡೆಸುತ್ತೇವೆ’ ಎನ್ನುತ್ತಾನೆ.
ಈ ಮಾತು ಕೇಳಿದರೆ ಎಂಥಹವರು ತಣ್ಣಗಾಗುತ್ತಾರೆ. ಆ ಕಡೆಯಿಂದ `ಆಯ್ತು ಕಣಪ್ಪಾ ನಾವು ಮಾಡಿಕೊಡುತ್ತೇವೆ. ಆದ್ರೆ ಮಲ ಮಾತ್ರ ಸುರಿದುಕೊಳ್ಳಬೇಡಿ’ ಎನ್ನುತ್ತಾರೆ.
ಹೀಗೆ ಮಂತ್ರಿ ಮಹೋದಯರೊಂದಿಗೆ, ಎಸ್ಪಿ, ಡಿಸಿ ಎಲ್ಲರಿಗೂ ಆತ್ಮೀಯವಾಗಿರುವ ದಂಡೋರ ಸೋಮು ಈಗ ಮಾದಿಗ ದಂಡೋರ ನಗರ ಅಧ್ಯಕ್ಷ. ಹಸನ್ಮುಖಿ ಯುವ ಹೋರಾಟಗಾರ. ತಮ್ಮ ಬಾಂಧವರಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾನೆ. ಇವರ ಕುಟುಂಬ ಪೌರಕಾರ್ಮಿಕರಾಗಿ ದುಡಿದಿದೆ. ಓದಲು ಮಾತ್ರ ಬರುವ ಈತನ ತಂದೆ, ತಾಯಿ ಕೂಡ ಪೌರ ಕಾಮರ್ಿಕರಾಗಿ ಕೆಲಸ ಮಾಡುತ್ತಿದ್ದಾರೆ. 5 ವರ್ಷದ ಹಿಂದೆ ಸಕರ್ಾರ 25 ಮಂದಿಯನ್ನು ಪರ್ಮನೆಂಟ್ ಮಾಡಿತು. ಆದರೆ ಇದರಲ್ಲಿ 12 ವರ್ಷ ದುಡಿದಿದ್ದ 5 ಮಂದಿಯ ಹೆಸರು ಸೇರಲಿಲ್ಲ ಕಾರಣ ನಗರಸಭೆಯ ಅಧಿಕಾರಿಗಳು ಮಾಡಿದ ತಪ್ಪು. ಇದರಿಂದ ಈ 5 ಮಂದಿ ಜೀವನವೇ ಬರಡಾಯಿತೆಂದು ಕುಳಿತರು. ಕಂಕಂಡವರಲ್ಲಿ ನಮ್ಮ ಕೆಲಸ ಪರ್ಮನೆಂಟ್ ಮಾಡಿಸಿ ಸ್ವಾಮಿ ಎಂದು ಅಂಗಲಾಚಿದ್ದಾರೆ. ಯಾರೊಬ್ಬರೂ ಈ ಬಗ್ಗೆ ಗಮನ ಹರಿಸಲಿಲ್ಲ. ನನ್ನವ್ವನಿಗೆ ಹೀಗೆ ಮೋಸ ಆಯಿತಲ್ಲ ಎಂದು ಹೋರಾಟಕ್ಕಿಳಿದ ಸೋಮು ಕಳೆದ 5 ವರ್ಷದಿಂದ ನಿರಂತರವಾಗಿ ಪರ್ಮನೆಂಟ್ ಮಾಡಿಸಲು ಹೋರಾಟ ನಡೆಸುತ್ತಿದ್ದಾನೆ.
ಈ ವ್ಯಕ್ತಿ ಭೇಟಿ ಮಾಡದ ಮಂತ್ರಿಯಿಲ್ಲ. ಬರೆಯದ ಪತ್ರಗಳಿಲ್ಲ. ಒಂದು ಹೊರೆಯೇ ಇತನ ಬಳಿ ಇದೆ. ಹೀಗಿದ್ದರೂ ನ್ಯಾಯ ಸಿಕ್ಕಿಲ್ಲ. `ಈ ಕಾರಣಕ್ಕಾಗಿಯೇ ನಾನು ಇದೀಗ ಮಲ ಸುರಿದುಕೊಳ್ಳುತ್ತೇನೆ ಎಂದು ಹೆದರಿಸುತ್ತೇನೆ. ಹೀಗೂ ಯಾರೂ ಬಗ್ಗುತ್ತಿಲ್ಲ. ನಮ್ಮ ಡಿಸಿ ಸಾಹೇಬರು ಈ ಬಗ್ಗೆ ಕರೆದು ಕೂರಿಸಿಕೊಂಡು ನಾನು ಇರುವಾಗ ನಿನ್ನ ಕೆಲಸ ಮಾಡಿಸಿಯೇ ತೀರುತ್ತೇನೆ ಎಂದು ಆಶ್ವಾಸನೆ ಕೊಟ್ಟಿದ್ದಾರೆ. ಹೀಗಾಗಿ ಮಲ ಸುರಿದುಕೊಂಡು ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯಿಂದ ಹಿಂದೆ ಸರಿದಿದ್ದೇನೆ. ಒಂದು ವೇಳೆ ಈಗಲೂ ಅವರು 5 ಜನರನ್ನು ಪರ್ಮನೆಂಟ್ ಮಾಡದಿದ್ದರೆ ಇದೇ ಡಿಸಿ ಆಪೀಸ್ ಎದುರು ಮಲ ಸುರಿದುಕೊಂಡು ಪ್ರತಿಭಟನೆ ನಡೆಸಿ ನಮ್ಮ ನೋವನ್ನು ಆಕ್ರೋಶವನ್ನು ಸರ್ಕಾರಕ್ಕೆ ಮುಟ್ಟಿಸುತತೇನೆ’ ಎನ್ನುತಾನೆ.
ಇನ್ನಾದರೂ ಸರ್ಕಾರಕ್ಕೆ, ಮಂತ್ರಿ ಮಹೋದಯರಿಗೆ, ಮಾಜಿ ಪ್ರದಾನಿ ಎಚ್.ಡಿ ದೇವೇಗೌಡ, ರೇವಣ್ಣ, ಶಾಸಕ ಪ್ರಕಾಶ್ ಕಣ್ಣು ತೆರೆದು ಐವರ ಕೆಲಸ ಪರ್ಮನೆಟಂಟ್ ಮಾಡಿಸಿಕೊಡಲಿ. ಇಲ್ಲವಾದಲ್ಲಿ ಜಿಲ್ಲೆ ಮತ್ತೊಂದು ಮಲ ಸುರಿದುಕೊಳ್ಳುವ ಪ್ರಕರಣಕ್ಕೆ ಸಾಕ್ಷಿಯಾಗಿ ಹಾಸನದ ಮರ್ಯಾದೆ ರಾಷ್ಟ್ರಮಟ್ಟದಲ್ಲಿ ಮಾನ ಹರಾಜಾಗುವುದನ್ನು ತಪ್ಪಿಸಲಿ ಎಂಬುದಷ್ಟೆ ನಮ್ಮ ಆಶಯ.
ಸೋಮು ಹೇಳುವ ಪೌರ ಕಾರ್ಮಿಕರ ನೋವುಗಳಿವು
*ರೋಡಲ್ಲಿ ಯಾರೂ ಮಾತನಾಡಿಸುವುದಿಲ್ಲ
*ಸರಿಯಾಗಿ ಸಂಬಳ ನೀಡುವುದಿಲ್ಲ
*ಇವರ್ಯಾರಿಗೂ ಮನೆಗಳಿಲ್ಲ, ನಿವೇಶನಗಳಿಲ್ಲ
*ಕೆಲ ನಗರಸಭೆ ಸದಸ್ಯರಿಂದ ಕಿರುಕುಳ
*ಸರ್ಕಾರದಿಂದ ಯಾವುದೇ ಸೌಲಭ್ಯ ಇಲ್ಲ
*ಆರೋಗ್ಯ ನಿರೀಕ್ಷಕರಿಂದ ಕೆಲಸದ ಒತ್ತಡ
*ಜೀವಕ್ಕೆ ಯಾವುದೇ ಗ್ಯಾರಂಟಿ ಇಲ್ಲ
*ಈಎಸ್ಐ ಆಸ್ಪತ್ರೆ ಎಲ್ಲಿದೆ ಎಂದೇ ಗೊತ್ತಿಲ್ಲ
*ಹೊರಗುತ್ತಿಗೆ ಕಾರ್ಮಿಕರಿಗೆ ಪಿ.ಎಫ್ ನೀಡುವುದರಲ್ಲೂ ಮೋಸ, ಕೊಡುವುದಿಲ್ಲ
* ಹೊರಗುತ್ತಿಗೆ ಕಾರ್ಮಿಕರಿಗೆ ಕೆಲಸದಿಂದ ತೆಗೆದು ಹಾಕುತ್ತಾರೆ ಎಂದು ಬೆದರಿಕೆ
*ಬಡ್ಡಿ ಸಾಲದಿಂದ ಜೀವನ ಸಾಗಿಸುವ ಸ್ಥಿತಿ
*ನಗರಸಭೆಯ ಶೆ18 ಹಣವನ್ನು ಪೌರ ಕಾಂರ್ಇಕರಿಗೆ ಈವರೆಗೆ ಬಳಕೆ ಮಾಡುತ್ತಿಲ್ಲ
*ಸತ್ತವರ ಹೆಣವನ್ನೆ ಪೌರಕಾರ್ಮಿಕರೆ ಎತ್ತಿ ಧಫನ್ ಮಾಡಬೇಕು
*ದಿನದ 24 ಗಂಟೆಯೂ ಕೆಲಸದ ಅನಿವಾರ್ಯತೆ
*ಸಂಬಳವನ್ನು ತಡವಾಗಿ ಹಾಕಿ ಅಲೆಸುವ ಅಧಿಕಾರಿಗಳು
*ಆರೋಗ್ಯ ಸರಿ ಇಲ್ಲದಿದ್ದರೂ ಕೆಲಸ ಮಾಡಿಸುವ ಒತ್ತಡ
*ಸಮವಸ್ತ್ರ ನೀಡದಿರುವುದು, ಗುದ್ದಲಿ, ಮಾಸ್ಕ್ ಸೌಲಭ್ಯ ನೀಡದಿರುವುದು.

ಚಪ್ಪಲಿಯನ್ನು ಹೊರಗೆ ಬಿಟ್ಟು ಮಾದಿಗರಿಗೆ ಅವಮಾನ ಮಾಡಬೇಡಿ…: ಕೆಟಿ. ಶಿವಪ್ರಸಾದ್
ಹಾಸನದಲ್ಲಿ ಪೌರ ಕಾರ್ಮಿಕರಿಗೆ ನಿವೇಶನ ಕೊಡಿ ಎಂದು ಹೋರಾಟ ನಡೆಸುತ್ತಿರುವರ ಪೈಕಿ ಮುಂಚೋಣಿ ಹೆಸರು ಖ್ಯಾತ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್ ಅವರದ್ದು. ಎತ್ತ ಕಡೆಯಿಂದ ನೋಡಿದರೂ ಪೌರ ಕಾರ್ಮಿಕರೂ ಅಲ್ಲದ ಅವರಿಗೆ ಸಂಬಂಧವೂ ಇಲ್ಲದ ಮೇಲ್ವರ್ಗಕ್ಕೆ ಸೇರಿದ ಕೆ.ಟಿ ಶಿವಪ್ರಸಾದ್ ಪೌರ ಕಾರ್ಮಿಕರ ಸ್ಥಿತಿ-ಗತಿ ಬಗ್ಗೆ ಏನೆನ್ನುತ್ತಾರೆ ಎಂಬ ಬಗ್ಗೆ ಮಾತನಾಡಿಸಬೇಕೆಂದು ನಿರ್ಧರಿಸಿ ಅವರ ಮನೆಗೆ ಹೋದೆ. ಜತೆಗಿದ್ದವರು ಮಾನವ ಹಕ್ಕು ಹೋರಾಟಗಾರ ಮರಿ ಜೋಸೆಫ್.
ವಿಚಾರ ತಿಳಿಸಿ ಅವರಿಗೆ ಕರೆ ಮಾಡಿಕೊಂಡು ಹೋಗಿದ್ದೆ. ಮನೆಯ ಬೆಲ್ ಒತ್ತುತ್ತಿದ್ದಂತೆ ಬಂದ ಕೆಟಿಎಸ್ `ಬನ್ರೋ’ ಎಂದರು. ಸರಿ ಎಂದು ಬಾಗಿಲ ಬಳಿ ಶೂ ಬಿಚ್ಚಲು ಅಣಿಯಾದೆವು. ತಕ್ಷಣ ನಮ್ಮನ್ನು ಗಮನಿಸಿದ ಕೆಟಿಎಸ್ ` ಏನೋ ಇಡೀ ಸಮಾಜವೇ ಮಾದಿಗರನ್ನು, ಚಪ್ಪಲಿ ಹೊಲೆಯುವರನ್ನು ಹೊರಗಿಟ್ಟಿದೆ ನೀವು ಅವರನ್ನು ಹೊರಗೆ ಇಟ್ಟು ಬರುತ್ತೀರಲ್ಲೋ ಶೂ ಹಾಕ್ಕೊಂಡು ಬಾರೂ, ಹೊರಗೆ ಬಿಟ್ಟು ನೀವು ಅವರನ್ನು ಮನೆಯಿಂದ ಆಚೆ ಇಡಬೇಡಿ’ ಎಂದರು.
ಇದನ್ನು ನಿರಿಕ್ಷಿಸದಿದ್ದ ನಾನು ಜೋಸೆಫ್ ಮುಖ ನೋಡಿಕೊಂಡು ಅವಕ್ಕಾಗಿ ಮುಖ ಮುಖ ನೋಡಿಕೊಂಡೆವು.
ಯಾವತ್ತೂ ನಮ್ಮ ಮನೆಗೆ ಬಂದಾಗ ಶೂ ಆಗಲಿ, ಚಪ್ಪಲಿ ಯನ್ನಾಗಲಿ ಹೊರಗೆ ಬಿಡಬೇಡಿ ಎಂದರು.
ಸರಿ ಎಂದು ತಲೆ ಆಡಿಸಿದೆವು.
ಪೌರ ಕಾರ್ಮಿಕರ ಬಗ್ಗೆ ಅವರು ಹೇಳುವುದಿಷ್ಟು
`ಭಾರತದ ಜಾತಿ ವ್ಯವಸ್ಥೆಯ ಅತ್ಯಂತ ಕೆಳಗಿನವರು ಪೌರ ಕಾರ್ಮಿಕರು. ವಿಧ್ಯೆ, ಶಿಕ್ಷಣ ಯಾವುದೊಂದು ಸಿಗದೆ ವಂಚಿತರಾಗಿರುವ ಪೌರ ಕಾರ್ಮಿಕರು ಕನಿಷ್ಟ ಜನರಿಂದ ಗೌರವವನ್ನೂ ನಿರೀಕ್ಷಿಸದ ಏಕೈಕ ಜನ.
ದುರಂತ ಎಂದರೆ ಈ ಜನಕ್ಕೆ ನಮ್ಮ ಸಮಾಜ ಒಂದು ಹನಿ ನೀರು ಕೂಡ ಕೊಡಲು ಹಿಂದೆ ಮುಂದೆ ನೋಡುತ್ತಾರೆ. ಬಹುತೇಕ ಮಂದಿ ಕೊಡುವುದೂ ಇಲ್ಲ. ಆದರೂ ಕೂಡ ಅವರು ನಮ್ಮ ಮನೆಯ ಕಸವನ್ನು, ನಮ್ಮ ಕೊಳಕನ್ನು ಬೀದಿಯನ್ನು ಶುದ್ದಿ ಮಾಡುತ್ತಾರೆ. ಇವರು ನಮ್ಮ ನಿಜವಾದ ಮನುಷ್ಯರು.
ಬಹುಶಃ ಪೌರ ಕಾರ್ಮಿಕರನ್ನು ನಮ್ಮಷ್ಟು ಅಸಹ್ಯವಾಗಿ ಕಾಣುವಷ್ಟು ಬೇರೆ ಯಾವ ದೇಶದಲ್ಲೂ ನೋಡಿಲ್ಲ. ನಾನು ಸಾಕಷ್ಟು ದೇಶ ಸುತ್ತಿದ್ದೇನೆ ಅಲ್ಲಿ ಪೌರ ಕಾರ್ಮಿಕರನ್ನು ನಡೆಸಿಕೊಳ್ಳುವ ಪರಿಯೇ ಬೇರೆ. ನೋಡು ಇದು ನಮ್ಮ ವ್ಯವಸ್ಥೆ, ಇವರು ಡಾಕ್ಟರ್ಗಿಂತ ದೊಡ್ಡವರು ಕಣಯ್ಯ. ಇವರು ಸರಿ ಇದ್ದರೆ ನಾವೆಲ್ಲಾ ಆರೋಗ್ಯದಿಂದ ಇರುತ್ತೇವೆ. ಆದರೆ ನಮ್ಮ ದೇಶದ ಜನ ಇವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಈ ಜಾತಿ ವ್ಯವಸ್ಥೆ ಇದಕ್ಕೆ ಅವಕಾಶ ಮಾಡಿಕೊಡುತ್ತಿಲ್ಲ. ಜಾತಿ ವ್ಯವಸ್ಥೆಯಲ್ಲಿ ಇವರೊ ಕೊನೆಯಲ್ಲಿರುವುದರಿಂದ ಇವರನ್ನು ಸಮಾಜದಲ್ಲಿ ಹೊರಗಿಟ್ಟಿರುವ ಈ ನಮ್ಮ ಸಮಾಜಕ್ಕೆ ಏನೆನ್ನಬೇಕು.
`ಪೌರ ಕಾರ್ಮಿರ ಪೈಕಿ ನನ್ನ ಸ್ನೇಹಿತನೊಬ್ಬನಿದ್ದಾನೆ. ಹೆಸರು ನಲ್ಲಪ್ಪ. ಒಮ್ಮೆ ಅವರ ಮನೆಗೆ ಹೋಗಿದ್ದೆ. ಕರೆದು ಬಾಡೂಟ ಹಾಕಿದ. ಆದರೆ ಅವರು ವಾಸಿಸುವ ಸ್ಥತಿ ನೋಡಿ ಸಂಕಟ ಆಕ್ರೋಶ ಎಲ್ಲವೂ ಆಯಿತು ಅವರು ವಾಸಿಸಲು ಒಂದು ಮನೆ ಇಲ್ಲ ಕಣಯ್ಯ. 12 ಅಡಿ ಜಾಗದಲ್ಲಿ 2 ಕುಟುಂಬ ವಾಸಿಸುತ್ತಿದ್ದಾರೆ. ಕನಿಷ್ಟ ಇವರಿಗೆ ಒಂದು ಮನೆ ಕಟ್ಟಿಕೊಡದ ಇದೆಂತ ಸಮಾಜ, ಎಂಥಹ ಜಿಲ್ಲಾಡಳಿತ ಥೂ ನಾಚಿಕೆ ಆಗಬೇಕು. ಈ ದೇಶದಲ್ಲಿ ಡೆಮೋಕ್ರಸಿ ಇದೆಯೋ ಇಲ್ಲವೋ ಎಂಬಂತೆ ಇವರನ್ನು ನಡೆಸಿಕೊಳ್ಳುತ್ತಿದ್ದೇವೆ. ಈ ಜಾತಿ ವ್ಯವಸ್ಥೆ ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯವರೆಗೆ ನಾವು ಭಾರತವನ್ನು ಪ್ರಜಾಪ್ರಭುತ್ವ ರಾಷ್ಟ್ರ ಎನ್ನಲು ಸಾಧ್ಯವೇ ಇಲ್ಲ. ಇದಕ್ಕೆ ಉದಾಹರಣೆ ನಮ್ಮ ಪೌರ ಕಾಮರ್ಿಕರು. ಕನಿಷ್ಟ ಇವರಿಗೆ ಒಂದು ಮನೆ, ಇವರ ಮಕ್ಕಳಿಗೆ ವಿದ್ಯೆ, ಸಕರ್ಾರಿ ಕೆಲಸ ಕೊಡಿಸಲು ಆಗದ ಇದೆಂಥಹ ಸಕರ್ಾರಗಳು. ಹೀಗಾಗಿಯೇ ಭಾರತ ಇನ್ನೂ ಅನ್ ಡೆಮೋಕ್ರಟಿಕ್ ಆಗಿ ಉಳಿದಿದೆ. ಈ ಕಾರಣಕ್ಕಾಗಿಯೇ ಅಂಬೇಡ್ಕರ್ ಹಿಂದೂ ಧರ್ಮದಲ್ಲಿ ಉಳಿಯಲಿಲ್ಲ ಎಂಬುದನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕು’
ಇವರಿಗೆ ನಿವೇಶನ, ಮನೆ ಬೇಕು ಎಂಬುದು 30 ವರ್ಷಗಳ ಬೇಡಿಕೆ. ಇವತ್ತೂ ಹೋರಾಟ ನಡೆಸುತ್ತಿದ್ದಾರೆ. ನೋಡು ಈ ಮೂಲಕ ನಾವೆಲ್ಲಾ ಇವರ ಪರ ಹೋರಾಡದಿದ್ದರೆ ಇನ್ನೂ 20 ವರ್ಷ ಇವರಿಗೆ ಕನಿಷ್ಟ ನಿವೇಶನ ಸಿಕ್ಕುವುದಿಲ್ಲ. ಹೀಗಾಗಿ ನಾವೆಲ್ಲಾ ಅಂದರೆ ಇವರು ಗುಡಿಸುವ ಬೀದಿ ಬೀದಿಯ ಜನರು ಒಂದು ದಿನ ಇವರ ಪರ ಹೋರಾಟ ಮಾಡೋಣ. ಇವರು ಬೀದಿ ಗುಡಿಸಲು ಬಂದಾಗಲೋ, ಚರಂಡಿ ಸ್ವಚ್ಛ ಮಾಡಲು ಬಂದಾಗಲೋ ಕನಿಷ್ಟ ಪ್ರೀತಿಯಿಂದ ಮಾತನಾಡಿಸಿ. ಕುಡಿಯಲು ನೀರು ಕೊಡಿ. ಇವರು ನಮ್ಮಂತೆಯೇ ಮನುಷ್ಯರು. ನಮ್ಮೆಲ್ಲರ ಆರೋಗ್ಯವನ್ನು ಕಾಪಾಡುವವರು. ಒಂದು ದಿನ ಇವರು ಕಸ ಎತ್ತದಿದ್ದರೆ ಇಡೀ ಹಾಸನ ಎಷ್ಟು ಗಬ್ಬೆದ್ದು ಹೋಗಲಿದೆ ಎಂಬುದನ್ನು ನೆನಪಿಸಿಕೊಳ್ಳಿ. ಹಾಸನದ ಮಹಾ ಜನತೆಗೆ ನನ್ನದೊಂದು ಮನವಿ ಎಲ್ಲರೂ ಬನ್ನಿ ಒಂದು ದಿನ ಹಾಸನದಲ್ಲಿ ಜಾಥಾ ಮಾಡೋಣ ಇವರ ಒಂದು ಸೂರಿಗಾಗಿ ಒಂದು ದಿನ ದನಿ ಎತ್ತೊಣ. ಇವರಿಗೆ ನಿವೇಶನ ಕೊಡದಿದ್ದರೆ ಡಿ.ಸಿ. ಬಂಗಲೆಯೊಳಗೆ ಟೆಂಟ್ ಹಾಕೋಣ. ಮಾನ್ಯ ಡಿಸಿ ಯವರೇ ಮೊನ್ನೆ ಪ್ರತಿಭಟನೆ ಮಾಡಿ ಮನವಿ ಕೊಟ್ಟಿದ್ದೇವೆ. ಒಂದು ತಿಂಗಳ ಗಡುವು ನೀಡಿದ್ದೆವು. ಆದರೂ ಏನೊಂದು ಆಗಿಲ್ಲ. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಇವರಿಗೆ ನ್ಯಾಯ ಬದ್ಧವಾಗಿ ನಿವೇಶ ನೀಡದಿದ್ದರೆ ಎಲ್ಲೂ ಇವರು ಕಸ ಎತ್ತುವುದಿಲ್ಲ. ಇದು ಸಮಾಜದ ಪರವಾಗಿ ನಿಮಗೆ ಶಾಸಕ ಎಚ್.ಎಸ್. ಪ್ರಕಾಶ್ ಹಾಗೂ ಮನುಷ್ಯರಾಗಿರುವಂತಹ ಎಲ್ಲಾ ಜನಪ್ರತಿನಿಧಿಗಳಿಗೆ ನಮ್ಮ ವಿನಯಪೂರ್ವಕ ಮನವಿ ಮತ್ತು ಎಚ್ಚರಿಕೆ.
ಜಾಡಮಾಲಿಗಳ ಜಗತ್ತು : ’ನಾನು ದಂಡೂರ ಸೋಮ…’
ನಿಮಗೆ ಇವೂ ಇಷ್ಟವಾಗಬಹುದು…




KT avare, nallappana snehita anteeri, nimma mane charandi clean maadalu avarige helteeri! idu yaava sneha? neevu nallappana mane charandi clean maadi sneha torisi nodona.
[ಚಪ್ಪಲಿಯನ್ನು ಹೊರಗೆ ಬಿಟ್ಟು ಮಾದಿಗರಿಗೆ ಅವಮಾನ ಮಾಡಬೇಡಿ…: ಕೆಟಿ. ಶಿವಪ್ರಸಾದ್]
ಇದು ತೀರಾ ಆಯ್ತು..ಇಂತಹ ಅಸಂಬದ್ಧ, ಹೊಸ ಹೊಸ ಹೊಳಹುಗಳು ಏನನ್ನಬೇಕೊ..ಇದನ್ನು ಅವಕ್ಕಾಗಿ ಕೇಳಿದೆವು ಎನ್ನುವ ನಿಮ್ಮ ವಿಶ್ಲೇಷಣೆ ಬೇರೆ. ಇವತ್ತಿನ ತನಕ ನನಗೆ ಚಪ್ಪಲಿ ಎಂದರೆ ಮಾದಿಗರ ನೆನಪು ಬರುತ್ತಿರಲಿಲ್ಲ. ಅಂದ ಹಾಗೆ ಮಾದಿಗರಿಗೆ ಅವಮಾನ ಮಾಡಬಾರದು ಎಂದು ಕೆ.ಟಿ ಯವರು ಚಪ್ಪಲಿ ಧರಿಸಿಯೇ ಮಲಗುತ್ತಾರೆಯೆ?
ನಾಗರಾಜ್..
ಈಗಿನ ಜಾಡಮಾಲಿಗಳ ಸಮಸ್ಯೆ ಜಾತಿಯತೆಯದ್ದೊ (ಕೆ.ಟಿ ಶಿವಶಂಕರ ಪ್ರಕಾರ) ಅಥವಾ ಸರಕಾರದ್ದೊ (ದಂಡೋರ ಸೋಮು ಉದ್ಯೋಗ ಖಾಯಂಮಾತಿಗೆ ಒತ್ತಾಯ)? ಇದು ಇಡಿ ದೇಶದ ಸಮಸ್ಯೆಯೊ ಅಥವಾ ನಗರಕೇಂದ್ರಿತ ಸಮಸ್ಯೆಯೊ? ಸಮಸ್ಯೆಯ ಸುಧಾರಣೆ ಅವರನ್ನು ಮೇಲೆ ಬಂದವರ ಮಟ್ಟಕ್ಕೆ ಏರಲು ಸಹಾಯ ಮಾಡುವುದರಿಂದ ಆಗುತ್ತದಯೊ ಅಥವಾ ಒಂದು ದಿನ ಹೋಗಿ ಅವರ ಮನೆಯಲ್ಲಿ ಉಂಡು ಬಂದು, ಅದನ್ನೆ ಸಮಾನತೆ ಎನ್ನುವುದರಿಂದ ಆಗುತ್ತದೆಯೊ? ನನಗೆ ಈ ಎಲ್ಲ ವಿಷಯಗಳಲ್ಲಿ ನಿಮ್ಮೊಂದಿಗೆ ಚರ್ಚೆ ಮಾಡೋಣ ಅನಿಸಿದೆ.
ಹಾದಿಬೀದಿಗೊಂದು ಗುಡಿಕಟ್ಟಿ ಅಡ್ಡುದ್ದ ಬೀಳುವ ಮುನ್ನ ಅಂಥಹ ಬೀದಿ ಬೀದಿಗಳನ್ನು ತಮ್ಮ ಮನೆಯ ಅಂಗಳವೇನೋ ಎಂಬಂತೆ ಜತನ ಮಾಡುವ ಪೌರ ಕಾರ್ಮಿಕರಿಗೆ ಕನಿಷ್ಟ ಸೌಜನ್ಯವನ್ನೂ ತೋರದ ವ್ಯವಸ್ಥೆಯ ಜಾಣ ಕುರುಡಿಗೆ ಪ್ರಜ್ಞಾವಂತರು ಬಿಸಿ ಮುಟ್ಟಸದಿದ್ದರೆ ‘ತಿಪ್ಪೆ ತೊಟ್ಟಿಗಳ ನಡುವೆ ಅಲ್ಲೊಂದು ಇಲ್ಲೊಂದು ಮನೆಗಳಿವೆ ಅಲ್ಲಿ’ಎಂದು ಅನ್ನಿಸಿಕೊಳ್ಳಬೇಕಾಗುತ್ತೆ. ನಾಗರಾಜ್ ನಿಮ್ಮ ಬರಹ ಮತ್ತು ಹೋರಾಟಕ್ಕೆ ಜಯ ಸಿಗಲಿ. ಜೊತೆಗೆ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೂ ಈ ಕುರಿತು ಜಾಗೃತಿ ಮೂಡಲಿ.
ಈ ವಿಷಯಕ್ಕೆ ಸಂಬಂಧಿಸಿದಂತೆ http://hrpfudupien.hpage.co.in/index.html ಎಂಬ ಜಾಲತಾಣದಲ್ಲಿ “ಅಕ್ಕು ಲೀಲಾ” ಎಂಬ ವೀಡಿಯೋ ಇದೆ. ಯು ಟ್ಯೂಬಿನಲ್ಲೂ ಅದು ಇದೆ. ಆಸಕ್ತರು ನೋಡಬಹುದು.
ನಾಗರಾಜ್,ಲೇಖನ ಮಾಲೆ ಚೆನ್ನಾಗಿ ಬರುತ್ತಿದೆ. ಇಲ್ಲಿಯವರೆಗೆ ಕನ್ನಡದಲ್ಲಿ ಈ ಜನ ಸಮುದಾಯದ ಬದುಕು ಚಿತ್ರಿತವಾಗಿದೆಯೋ ಇಲ್ಲವೋ. ನನ್ನ ಓದಿನ ಅಳವಿಗೆ ಸಿಕ್ಕಿಲ್ಲ. ಜಾಡಮಾಲಿಗಳ ಜೊತೆಗೆ ನಾನು ಸಾಕಷ್ಟು ಒಡನಾಡಿದ್ದೇನೆ. ಅವರ ಬದುಕು ಸ್ವಲ್ಪ ತಿಳಿದಿದೆ. ಆದರೆ ನನಗೆ ವಿವರಗಳು ಅವರದೇ ಮಾತುಗಳಲ್ಲಿ ಸಿಗುತ್ತಿದೆ.ಇಡೀ ಜನಮನ ಮಿಡಿಯುವಂತಹ ಬದುಕು.ಮನಸ್ಸೆಂಬುದೊಂದು ಊನವಾಗಿರುವವರ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಭಾರತದ ಜಾತಿ ವ್ಯವಸ್ಥೆ ಎಂತಹ ಕರುಳಿರಿಯುವ ಬದುಕಿನ ಬಗೆಗಳನ್ನು ಸೃಷ್ಟಿಸಿದೆ ಎಂಬುದಕ್ಕೇ ನೇರ ಉದಾಹರಣೆಯಾಗಿದೆ.ಕೆಟಿ ಶಿವಶಂಕರರ ರೀತಿ, ಇನ್ನು ಅಂತಹ ಕೆಲವೇ ಜನರ ಹೊರತಾಗಿ ಇಡೀ ಮೇಲ್ಜಾತಿಯ ಜನ ಸಮುದಾಯ ಅವರನ್ನು ತಮ್ಮ ಮನೆಯಲ್ಲಿ ಸಮಾನರಂತೆ ಕಂಡರೆ,ಅವರ ಮನೆಗೆ ಹೋಗಿ ಅವರ ಬದುಕಿನ ಬವಣೆಯನ್ನು ಕಂಡರೆ,ಅವರ ಅಡುಗೆ ಊಟ ಮಾಡಿದರೆ ಬಹಳಷ್ಟು ಬದಲಾದೀತು. ಅದನ್ನು ಸಾಧಿಸುವ ಪ್ರಯತ್ನಕ್ಕೆ ನಿಮ್ಮ ಬರಹ ಒಂದು ಸಹಾಯಕ ಸಾಧನ.ಇದನ್ನು ನಗರದ ದುರಾಡಳಿತದ ಸಮಸ್ಯೆ ಮಾತ್ರ ಎಂದು ಪರಿಗಣಿಸಬಹುದಿತ್ತು. ಇಂತಹುದೇ ಒಂದು ಕೂಲಿ ಕೆಲಸದಲ್ಲಿ-ಉದಾ:ಕಟ್ಟಡ ಕಟ್ಟುವ ಕೆಲಸದಲ್ಲಿ ಹೇಗೆ ಇಂತಹ ಕೆಲಸದಿಂದ ಹೊಟ್ಟೆ ಹೊರೆಯಬೇಕಾದ ಅಗತ್ಯವಿರುವ ಎಲ್ಲ ಜಾತಿಯವರೂ ಸೇರಿ ಕೆಲಸದಲ್ಲಿ ತೊಡಗುತ್ತಾರೋ ಹಾಗೆ ತೊಡಗಿದ್ದರೆ. ಆದರೆ ಭಾರತದಲ್ಲಿ ಬಹುತೇಕ ಎಲ್ಲೂ ಹಾಗೆ ಆಗಿಲ್ಲವೆಂಬುದು ಕಣ್ಣಿಗೇ ಬೀಳದಂತೆ ಕೆಲವರಿಗೆ ದೃಷ್ಠಿದೋಷ ಆಗಿದೆಯಲ್ಲಾ ? ಇದು ಕೇವಲ ದೈಹಿಕ ಆರೋಗ್ಯದ ಸಮಸ್ಯೆಯೇ ? ಅಥವಾ ಇನ್ನೂ ಹೆಚ್ಚಿನದೇ ಎಂಬುದಕ್ಕೆ ಒಂದು ಸಂಶೋಧನಾ ವಿಧಾನವನ್ನು ಹಾಗೂ ಒಂದು ತಂಡವನ್ನೇ ರೂಪಿಸಬೇಕಾಗಿದೆ. ಅದಕ್ಕೆ ಸೂಕ್ತ ಅರ್ಹತೆ ಪಡೆದವರು ನಿಮ್ಮ ಕಣ್ಣಿಗೆ ಬಿದ್ದಿದ್ದರೆ ದಯವಿಟ್ಟು ತಿಳಿಸಿ.
ಸಂಶೋಧನಾ ಮನಸ್ಸಿನ ಮಹಾನುಭಾವರು ದೆಹಲಿಯಲ್ಲಿ ಸುಲಭ ಶೌಚಾಲಯಗಳನ್ನು ನೋಡಿಕೊಳ್ಳುವವರು, ಸ್ವಚ್ಛ ಮಾಡುವವರು ಯಾರು ಎಂಬ ಕಡೆ ಸ್ವಲ್ಪ ಗಮನ ಹರಿಸಬಹುದು. ಗುಡಿಸಲಿಗೆ ಹೋಗಿ ಉಂಡು ಬರುವುದರಿಂದ ದಲಿತರ ಉದ್ಧಾರ ಆಗುವುದಿಲ್ಲ..ಬದಲಿಗೆ ಅವರನ್ನು ಶಿಕ್ಷಣ ಮತ್ತು ಉದ್ಯೋಗದಿಂದ ಆರ್ಥಿಕವಾಗಿ ಸಬಲರನ್ನಾಗಿ ಮಾಡಬಹುದು ಎನ್ನುವುದನ್ನು ತಿಳಿಯುವುದಕ್ಕೆ ಯಾವ ಸಂಶೋಧನೆಯೂ ಬೇಕಾಗಿಲ್ಲ. ಇವತ್ತು ಗಟಾರ ಮತ್ತು ಇತರ ಕಸ ಸ್ವಚ್ಛ ಮಾಡಲು ಯಂತ್ರಗಳ ಸಹಾಯವನ್ನು ಸುಲಭವಾಗಿ ತೆಗೆದುಕೊಳ್ಳಬಹುದು. ಇದನ್ನು ಜಾರಿಗೆ ತರುವುದು ನಗರದಲ್ಲಿ ಜನರಿಂದ ತೆರಿಗೆ ವಸೂಲಿ ಮಾಡುವ ಸರಕಾರಗಳು, ಸಂಸ್ಥೆಗಳು ಮಾಡಬೇಕು. ಅಯ್ಯೋ ಪಾಪ ಎನ್ನುವ ಲಿಪ್ ಸಿಂಪಥಿಯಿಂದ ಸಿಗುವುದು ಕ್ಷಣಿಕ ಸುಖವಷ್ಟೆ..ಸುಧಾರಣೆಯಲ್ಲ.
G n ngaraj sir and shivu nimma pratikriya mattu salahege swagatha. Poura karmikara bagge navu este baredaroo avara novugalige samavalla.. Teekeyinda sudharane sadyavilla avarinda sadyaviruva prayatna madali. Illadiddare salahe kodali kelavaru teekeyanne baduku madikondare ayyo annade vidhi illa………….
“kelavaru teekeyanne baduku madikondare ayyo annade vidhi illa” Ellaa ok aadre jaadamaaligala bagge tanagobbanige maatra kaalaji ide anta vartisuvudu yaake? Odugara commentugala bagge ashtondu taatsaara asahane iddare avadhiyalli bareyuvudu yaatakke?
ಎಲ್ಲರ ಕಾಯಕ ಒಂದೇ ಇದನ್ನು ನಾವು ಮೋದಲು ತಿಳಿಯಬೇಕು . ಮೌಡ್ಯ ಬಿತ್ತಬಾರದು. ನಲ್ಲ್ಬಪ್ಪನನ್ನು ಕರೆದು ಚರಂಡಿ ಸ್ವಚ್ಚಗೋಳಿಸಿದರು ಆದನ್ನು ಕೆ.ಟಿ. ಮಾಡಬಹುದಿತ್ತಲ್ಲ ಆನ್ನುವುದಕ್ಕೆ ನಾನು ಹೇಳುವುದು ಹೀಗೆ ಕೆ.ಟಿ.ೊಬ್ಬರು ಚಿತ್ರಕಲಾವಿದರು ಆವರು ಮಾಡುವ ಕಾಯಕಕ್ಕೆ ನಲ್ಲಪ್ಪನ ಕಾಯಕನು ಸಮ ೆಂದು ಭಾವಿಸಿದ್ದಾರೆ. ನಲ್ಲಪ್ಪ ಚರಂಡಿ ಸ್ವಚ್ಚಗೋಳಿಸಲು ಪೋರಕೆ ಹಿಡಿದರೆ ಕೆ.ಟಿ.ಶಿವಪ್ರಸಾದ್ ಚಿತ್ರಬರೆಯಲು ಬ್ರೆಷ್ ಹಿಡಿಯುತ್ತಾರೆ ಇಬ್ಬರು ಮಾಡುವ ಕೆಲಸವು ಸಮ ೆಂದು ಭಾವಿಸಿದ್ದರೆ. ಕೆ.ಟಿ.ಯವರ ಚಿಂತನೆಯಲ್ಲಿ ಇಬ್ಬರು ಮಾಡುತ್ತಿರುವ ಕೆಲಸ ಒಂದೇ ನಲ್ಲಪ್ಪನ ಹತ್ತಿರ ಚರಂಡಿ ಸ್ವಚ್ಚಗೋಳಿಸಲು ಬೇಕಗಿರುವ ಸಲಕರಣೆ ಇದೆಎಂದು ಅವರಿಗೆ ತಿಳಿಸಿದ್ದರೆ ಆಷ್ಟೆ.ಕೆ.ಟಿ.ಗೆ ಆ ರೀತಿ ಮೇಲು ಕೀಳು ಭಾವನೆ ಇದಿದ್ದ್ವದರೆ ನಲ್ಲಪ್ಪನನ್ನು ಒಬ್ಬಅತ್ಮೀಯ ಗೆಳೆಯ ಎಂದು ಹೇಳುತ್ತಿರಲಿಲ್ಲ ಅವರ ಜೋತೆ ಒಡನಾಟಇಟ್ಟುಕೋಳ್ಳುತ್ತಿರಲಿಲ್ಲ ಿದನ್ನು ಮೋದಲು ನಾವು ಆಥ ಮಾಡಿಕೋಳ್ಳಬೇಕು.
ಯಾವುದೇ ವ್ಯಕ್ತಿ ಹುಷಾರಿಲ್ಲ್ಷದಿದ್ಲರೆ ಡಾಕ್ಟರ್ ಹತ್ತಿರ ಹೋಗುತ್ತಾರೆಯೇ ಹೋರತು ಇಂಜಿನಿಯರ್ ಹತ್ತಿರ ಅಲ್ಲ .ಎಲ್ಲಿಯ ವರೆಗೆ ಜನರು ಕಸಗುಡಿಸುವುದು ಒಂದು ಕೆಲಸ ದುಕ್ಕೂ ಗೌರವವಿದೆ ಎಂದು ಗೌರವಿಸುವುದಿಲ್ಲವೋ ಅಲ್ಲಿಯವರೆಗೆ ಮೌಡ್ಯತೆ ಇದ್ದೆ ಇದೆ. ಕೆ.ಟಿ.ಯವರ ಚಿಂತನೆಯನ್ನು ಮೋದಲು ಅಥ ಮಾಡಿಕೋಂಡು ನಂತರ ವರ ಬಗ್ಗೆ ಕಾಮೇಂಟ್ಸ್ ಮಾಡುವುದು ಒಳಿತು.
ಎಲ್ಲ ಕಾಯಕ ಗೌ ರವಿಸಿ ಎಲ್ಲರನ್ನು ಸಮನಾಗಿ ಕಾಣಿ ಇಲ್ಲಿ ಯಾರೂ ದೋಡ್ಡವರಲ್ಲ ಯಾರೋ ಚಿಕ್ಕವರಲ್ಲ ೆಲ್ಲ ವೃತ್ತಿಗೂ ಅದರದೇ ಆದ ಗೌರವವಿದೆ. ಆದ್ದರಿಂದ ಪ್ರತಿಯೋಬ್ಬರ ಕಾಯಕವನ್ನು ಗೌರವಿಸಬೇಕು ಮೌಡ್ಯತೋಲಗಿಸಿ ಎನ್ನುವುದು ಕೆ.ಟಿ.ಶಿವ ಪ್ರಸಾದರ ಚಿಂತನೆ. ಅದರಂತೆ ಪ್ರತಿಯೋಬ್ಬರು ಪ್ರತಿಯೋಂದು ಕೆಲಸಕ್ಕೂ ಗೌರವ ಕೋಡಬೇಕು ಇದನ್ನು ಮೋದಲು ಎಲ್ಲರು ಚಾಲನೆಗೆ ತಂದರೆ ಸಮಾಜಕ್ಕೆ ಒಳಿತು.