ಜಯಶ್ರೀ ಬಿ ಕದ್ರಿ
ಹೂಗಳಲ್ಲೊಂದಾದರೂ
ಆರ್ಕಿಡ್‌ಹೂವಲ್ಲ
ಗುಂಪಿಗೆ ಸೇರದ ಪದ
ಬೇರು ಇಳಿಸಲು ಬರದ
ಇಳಿಸಲಾಗದ ಸುಮ
ಗಾಳಿಗೆ ಜೋತಾಡುವ
ಬೇರುಗಳು ಆರ್ಕಿಡ್ ಗೆ
ನೆಲದ ಹಂಗಿಲ್ಲ
ಮರದತುಸುವೇ ಸ್ಪರ್ಶ

ನೆಲದ ಮಲ್ಲಿಗೆ ಹೂವು
ಕೊಳದ ತಾವರೆ ಹೂವು
ಬೇಲಿಯಂಚಿನ ಸುಮವು
ಕರುಬುವುದುಆರ್ಕಿಡ್ ಗೆ
ಏನು ಬಣ್ಣದ ಶೋಕಿ
ವಯ್ಯಾರ ಸೊಬಗು
ಆರ್ಕಿಡ್ ಗೆ ಮಾತ್ರವೇಗೊತ್ತು
ಬಣ್ಣವಷ್ಟೇ ಸಲ್ಲುವ ಪರಿ
ಹಸಿ ಮಣ್ಣಒಸರಿಲ್ಲ
ಸುಡು ಮರಳ ಕಾವಿಲ್ಲ
ಮರದ ಹಿಡಿ ಒಲವಿನಲಿ
ಬದುಕು ಅರಳಿಸುವ ವಿಧಿ






0 Comments