ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಬಿ ಕದ್ರಿ ಹೊಸ ಕವಿತೆ- ಅಂಚಿನಲ್ಲಿರುವುದು ಸುಲಭವಲ್ಲ

ಜಯಶ್ರೀ ಬಿ ಕದ್ರಿ

ಸೀರೆಯಂಚಿನ ನವಿಲು
ಬೇಲಿಯಂಚಿನ ಹೂವು
ಆರತಿಯ ತಟ್ಟೆಯಲಿ
ಉರಿದು ಹೋಗುವ ತೈಲ
ಅಂಚಿನಲ್ಲಿರುವುದು ಸುಲಭವಲ್ಲ

ಮೆತ್ತನೆಯ ಮಲ್ಲಿಗೆಯ
ಹಾರ ಪೊರೆಯುವ ದಾರ
ಮಡಿಲ ಕೌದಿಯಲವಚಿ ಮರಗುವ
ಪೊರೆಯುವ ಮಾತೆ
ಅಂಚಿನಲ್ಲಿರುವುದು ಸುಲಭವಲ್ಲ

ಕೊನೆಯ ಸಾಲಲಿ ಕುಳಿತು
ಕೈಯ ಬೀಸುವ ಒಲವು
ತಿಳಿಗೊಳದ ಮನದಲ್ಲಿ
ಮುಗುಳು ನಗುವಾ ಚೆಲುವು
ಅಂಚಿನಲ್ಲಿರುವುದು ಸುಲಭವಲ್ಲ

ದೇಶ ಭಾಷೆಯ ಗಡಿಯ
ಜಾತಿಮತ ಬಣ್ಣಗಳ
ಅಂಚಿನಲ್ಲಿರುವುದು
ಸುಲಭವಲ್ಲ

‍ಲೇಖಕರು Admin

19 August, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading