@@ ನಿನ್ನೆ ಸುವರ್ಣ ನ್ಯೂಸ್ ಮತ್ತು ಸಮಯ ವಾಹಿನಿಯಲ್ಲಿ ಎರಡು ವಿಷಯ ನನ್ನ ಗಮನ ಸೆಳೆಯಿತು. ಸುವರ್ಣ ನ್ಯೂಸ್ ನಲ್ಲಿ ನಿರೂಪಕಿ ಶ್ವೇತ ಮೂರು ಜನ ಅಸಮಾನ್ಯರ ಬಗ್ಗೆ ತಿಳಿಸಿ ಕೊಟ್ರು . ಒಬ್ಬರಿಗೆ ಕಣ್ಣೆ ಇರಲಿಲ್ಲ,ಬಾಲ್ಯದಲ್ಲಿ ಕ್ಯಾನ್ಸರ್ ತಡೆಯುವ ಉದ್ದೇಶದಿಂದ ಆ ಮಗುವಿಗೆ ಕಣ್ಣು ತೆಗೆಯಲಾಯಿತಂತೆ. ಆ ಹುಡುಗ ಈಗ ಅದೆಷ್ಟರ ಮಟ್ಟಿಗೆ ಸಮಾಜಕ್ಕೆ ಉಪಯುಕ್ತ ಆಗಿದ್ದಾನೆ ಅಂದ್ರೆ ಹ್ಯಾಟ್ಸಾಫ್ ! ಪ್ರತಿಯೊಂದು ಕೆಲಸವನ್ನು ಸರಾಗವಾಗಿ ಮಾಡಬಲ್ಲ ಧೀರ
.
ಇವನ ಈ ಬೆಳವಣಿಗೆಗೇ ಆತನ ಅಮ್ಮನ ಸಾಧನೆ ಅಪಾರ ! ಸಾಕಷ್ಟು ಸಾಧಕರಿಗೆ ಅದರಲ್ಲೂ ಇಂತಹವರ ಸಾಧನೆಗೆ ಪೋಷಕರ ಪಾತ್ರ ತುಂಬಾ ವಿಶೇಷವಾಗಿರುತ್ತದೆ. ಮುಖ್ಯವಾಗಿ ಅವರು ಸತ್ಯವನ್ನು ಒಪ್ಪಿಕೊಂಡು ಮಗುವಿನ ಸರ್ವತೋಮುಖ ಬೆಳವಣಿಗೆಗೆ ಕಾರಣ ಆಗ್ತಾರೆ ಅಂತಹವರಿಗೆ ನಮಿಸ ಬೇಕು.
ಪೂರ್ಣ ಓದಿಗೆ: ಮೀಡಿಯಾ ಮೈಂಡ್




0 Comments