ಸಮಯ ವಾಹಿನಿಯ ಹೊಸ ಲೋಗೋ ಪ್ಯಾಟ್ರನ್ ಹಾಗೂ ಬಣ್ಣ ಸಖತ್ತಾಗಿದೆ. ನೂರು ದಿನದ ಸಂಭ್ರಮ ಆ ವಾಹಿನಿಗೆ ಈಗ. ಏನ್ರೀ ಟೀಆರ್ಪಿ ಜ್ವರ ಏರಿದಂಗೆ ಏರ್ತಾ ಇದೆ :-). ಭದ್ರ ಸಮಯ ಗ್ರೂಪ್ ಜ್ವರ ಇಳಿಸೋಕೆ ಸಿಕ್ಕಾಪಟ್ಟೆ ಜನ ಕಾಯ್ತಾ ಇರ್ತಾರೆ, ಆಮೇಲೆ ನಿಶಕ್ತಿ ಆಗಿ ಮೂಲೇಲಿ ಪಾಚಿಕೊಳ್ಳ ಬೇಕು ಅಷ್ಟೆ :-).ಸಮಯ ವಾಹಿನಿಯಲ್ಲಿ ಹೆಚ್ಚಿನ ಸಂಖ್ಯೆಯ ರಿಪಿಟರ್ಸ್ ಇರೋದು .
ಅವರು ಬೈದು ಕೊಂಡ್ರು ಪರವಾಗಿಲ್ಲ ಕಣ್ರೀ ನೇರವಾಗಿ ಹೇಳಿ ಬಿಡ್ತೀನಿ ಇವರಲ್ಲಿ ಹೆಚ್ಚು ಎಕ್ಸ್ ಪರ್ಟ್ ಗಳಿಗೆ ಫೇಲ್ ಆದ ಮೇಲೆ ಬುದ್ಧಿ ಬಂತು ಎಂದು ಕಾಣುತ್ತೆ . ಶಾಲೆಯಲ್ಲಿ ಮೂರು ಗ್ರೂಪ್ ಇರುತ್ತೆ ಒಂದು ಕ್ಷಣ ಕ್ಷಣವನ್ನು ಸದುಪಯೋಗ ಮಾಡಿಕೊಳ್ಳುವ ಗುಂಪು, ಎರಡನೆಯದು ನನ್ನಂತಹವರು ಅಲ್ಲೂ ಇಲ್ಲ ಇಲ್ಲೂ ಇಲ್ಲ, ಪ್ರತಿ ಪರೀಕ್ಷೆ ತಪ್ಪದೆ ಪಾಸ್ ಕ್ಲಾಸ್ :-). ಮೂರನೇ ಗ್ರೂಪ್ನಲ್ಲಿ ತುಂಬಾ ಬುದ್ಧಿವಂತರು ಇರ್ತಾರೆ ಆದ್ರೆ ಸದಾ ಫೇಲು.. ಪ್ರಪಂಚವನ್ನೇ ಅಲುಗಾಡಿಸಿ ಬಿಡುವಷ್ಟು ಜಾಣರು. ಆದರೆ ಸದಾ ಫೇಲು.;-) !
ಪೂರ್ಣ ಓದಿಗೆ: ಮೀಡಿಯಾ ಮೈಂಡ್



0 Comments