ನಿನ್ನೆ ಸಂಜೆ ಹಾಗೆ ಆ ಚಾನಲ್ ಕಡೆ ಗಮನ ಹರಿಸಿದೆ, ಅದರಲ್ಲಿ ಹಿಂದಿ ವಾಹಿನಿಯ ಪ್ರಖ್ಯಾತ ಹಸಿ ಬಿಸಿ ಕಾರ್ಯಕ್ರಮ ಎಮೋಷನಲ್ ಅತ್ಯಾಚಾರ್ ರಿಯಾಲಿಟಿ ಷೋ ಬಗ್ಗೆ ಪ್ರಸಾರ ಮಾಡ್ತಾ ಇದ್ರು. ಹಾಗೆ ನೋಡಿದ್ರೆ ಆ ಕಾರ್ಯಕ್ರಮ ಮನುಷ್ಯನ ಕ್ರೌರ್ಯ ವನ್ನು ಬಿಚ್ಚಿ ತೋರಿಸುತ್ತೆ. ಮನಸ್ಸು, ಬಾಂಧವ್ಯ, ಪ್ರೀತಿ , ನಂಬಿಕೆ…ಇಂತಹ ಯಾವುದೇ ಅಂಶಕ್ಕೆ ಬೆಲೆ ಕೊಡದ ಮಂದಿ ಈ ಕಾರ್ಯಕ್ರಮದಲ್ಲಿ ಕಾಣ ಸಿಗುತ್ತಾರೆ.
ಪ್ರೀತಿ ಕೈ ಕೊಡುವ, ನಂಬಿಕೆ ದ್ರೋಹ ಮಾಡುವ ಅವನು/ ಅವಳು ಯಾರೇ ಆಗಿರಲಿ ಅಂತಹವನ್ನು ಕಂಡ್ರೆ ನನಗೆ ತುಂಬಾ ಜಿಗುಪ್ಸೆ ಆಗುತ್ತೆ. ಆದರೆ ಆ ನಂಬಿಕೆ ದ್ರೋಹದಿಂದ ನೋಯುವ ಆ ಜೀವಗಳ ಬಗ್ಗೆ ತುಂಬಾ ದುಃಖ ಆಗುತ್ತದೆ. ಬಿಡಿ ನಾವು ಹೇಳಿದಂತೆ ಆಗುತ್ತದೆಯೇ? ಬಾಯ್ತುಂಬ ಒಳ್ಳೆ ಮಾತಾಡಿ ಹೃದಯದ ತುಂಬಾ ಕೆಟ್ಟತನ ಇಟ್ಟುಕೊಂಡಿರುವವರೇ ಹೆಚ್ಚು



0 Comments