ಮೂಲ : ರೂಮಿ

ಕನ್ನಡಕ್ಕೆ : ಜಯರಾಮಚಾರಿ
ನಾನು ನಿನ್ನ
ಮೌನದಲ್ಲೇ ಪ್ರೀತಿಸಲು ಬಯಸುವೆ
ಯಾಕೆಂದರೆ
ಮೌನದಲ್ಲಿ ತಿರಸ್ಕಾರಗಳಿಲ್ಲ
ನಾನು ನಿನ್ನ
ಏಕಾಂತದಲ್ಲೇ ಪ್ರೀತಿಸಲು ಬಯಸುವೆನು
ಯಾಕೆಂದರೆ
ಏಕಾಂತದಲ್ಲಿ ನೀನು ಯಾರ ಸ್ವತ್ತಲ್ಲ, ನನ್ನ ಹೊರತು
ನಾನು ನಿನ್ನ
ದೂರದಿಂದಲೇ ಪ್ರೀತಿಸುವೆ
ಯಾಕೆಂದರೆ
ನನ್ನ ನೋವು ನಿನಗೆ ತಾಕದು ಅಳು ಕಾಣಿಸದು

ನಾನು ನಿನ್ನ
ತುಟಿಗಳಿಗೆ ಗಾಳಿಯಲ್ಲೇ ಮುತ್ತಿಡಲು ಬಯಸುವೆ
ಯಾಕೆಂದರೆ
ನನ್ನ ಈ ತುಟಿಗಳಿಗಿಂತ ಗಾಳಿ ಬಲು ಹಗುರ
ನಾನು ನಿನ್ನ
ಕನಸುಗಳಲ್ಲೇ ತಬ್ಬುತ್ತೇನೆ
ಯಾಕೆಂದರೆ
ಕನಸುಗಳಲ್ಲಿ ನಿನ್ನ ತಬ್ಬುಗೆಗಳಿಗೆ ಕೊನೆಯಿಲ್ಲ






ಸೊಗಸಾಗಿದೆ