ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಜನ ಮರುಳೋ, ಜಾತ್ರೆ ಮರುಳೋ..’ – ಪ್ರತೀಭಾ ಕಾಗೆ

ಪ್ರತೀಭಾ ಕಾಗೆ


ಜನ ಮರುಳೋ, ಜಾತ್ರೆ ಮರುಳೋ
ಒಬ್ಬರ ಕಣ್ಣು ಮತ್ತೊಬ್ಬರ ಮೇಲೆ
ಹಲವರ ಕಣ್ಣು ಒಬ್ಬರ ಮೇಲೆ
ದೇವತಾ ಪುರುಷನೇನೊ
ಎಂಬಂತೆ ಬಿಂಬಿಸುವ
ಯತ್ನದಲಿ ಎಲ್ಲ
ದೋಷಗಳು ಮಂಕಾಗಿ
ಕಣ್ಣಿಗೆ ಕಪ್ಪು ಬಟ್ಟೆ
ಧರಿಸಿದಂತೆ ಎಲ್ಲವೂ
ಮಂಕಾಗಿ ಕಾಣುತಿಹುದು
ನೀ ಯಾರವ ನೀ ಯಾರವ
ನೀ ನಮ್ಮವ, ನೀ ನಮ್ಮವ
ಎನ್ನುವ ಶರಣರ ವಚನಗಳು
ಎದುರು ಬಂದಂತಾಗಿ
ಆಹಾ ಯುಗಪುರುಷನೇನೊ
ಎಂಥಾ ನೀರಿಕ್ಷೆಗಳು
ನಿಮ್ಮಿಂದ ನಮ್ಮ ಜೀವನ
ಪಾವನ ಎಂದು
ಹತ್ತು ಹಲವು
ಬಾರಿ ಕಾಲಿಗೆರಗಿ
ನಮಸ್ಕರಿಸಿ ಹೇಳಿದ್ದಕ್ಕೆಲ್ಲ
ಹೂಂಗುಟ್ಟುತ ನಡೆವ
ನಾವುಗಳಿಗೆ ನಿಜ
ಯಾರೊ, ಕಪಟಿ ಯಾರೊ
ತಿಳಿಯದೆ ಬುಧ್ಧಿಗೆ ಮಂಕು
ಕವಿದಂತಾಗಿಹುದು.
 

‍ಲೇಖಕರು G

2 June, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading