ವಿಜಯಕ್ಕ ಅಜ್ಜೀಮನೆ
ಉಡುಪಿ ಪರ್ಯಾಯಕ್ಕೆ ಬೆಳಗಿನ ೮-೩೦ ಕ್ಕೆ ಹೊರಡುವ ಐರಾವತವನ್ನು ಅರ್ಧ ಘಂಟೆಯ ಮೊದಲೇ ಏರಿ ಕಿಟಕಿ ಪಕ್ಕ ಕುಳಿತವಳಿಗೆ ಬಸ್ಸಿನ ಹೊರಗೆ ನಿಂತಿದ್ದ ಅಕ್ಕನ ಮಗ ಜಗ್ಗುನ ನೋಡಿ ಆಶ್ಚರ್ಯ !!
ಆತ ಸಂಸಾರ ಸಮೇತ ನಾಳೆ ಉಡುಪಿಗೆ ಹೊರಡೋದಿತ್ತು..ಯಾರೂ ಬರೋಲ್ಲ ಅಂದ್ರು ನಾನಂತು ಹೊರಡ್ತೇನೆ ಅಂದಿದ್ದ .. ಅಲ್ಲಿಂದ ಮುಂದೆ ೨-೩ ಕಡೆ ಹೋಗೋ ಪ್ಲಾನ್ ಹಾಕೊಂಡಿದ್ದ ..ನಾಳೆ ಬದ್ಲು ಈವತ್ತೇ ಹೊರ್ಟನೇನೋ ಅನ್ಕೊಂಡೆ ..
ಇಲ್ಲ ಪಚ್ಚಿ,. ಬರ್ತಿಲ್ಲ ನಾನು.. ಪ್ರೋಗ್ರಾಮ್ ಕ್ಯಾನ್ಸಲ್ ಮಾಡಿದ್ದೀನಿ ಅಂದಾಗ ನಂಬೋದು ಕಷ್ಟವಾಯಿತು ..ಪರ್ಯಾಯದ ಬೆಳಗ್ಗಿನ ಜಾವದ ಸ್ವಾಮಿಗಳ ಮೆರವಣಿಗೆ ನೋಡೋ ಹುಚ್ಚು ಅವನಿಗೆ ..
ಯಾಕೋ? ಅಂದೆ
ಕೊಟ್ಟ ಕಾರಣ ಮನಸ್ಸನ್ನು ಕಲಕಿತು
ಇವನು ನಡೆಸುವ ತಿಂಡಿ ಅಂಗಡಿಯ ಗಿರಾಕಿಯೊಬ್ಬರಿಗೆ ಆಪರೇಷನ್ ಅಂತೆ ..ಯಾರೂಇಲ್ಲ ಅವರಿಗೆ .. ಒಂಟಿ ಜೀವ ..ಆಸ್ಪತ್ರೆಯಲ್ಲಿ ನಿಮ್ಮ ನಂಬರ್ ಕೊಟ್ಟಿದ್ದೇನೆ ಅಂದ್ರು..ಏನೋ ಒಂಥರಾ ಮನಸ್ಸಿಗೆ.. ನಾಳೆ ಅವರ ಜೊತೆ ಇರ್ತೇನೆ.. ಅಂತ ಹೇಳಿ ಬಸ್ಸಿನಿಂದಿಳಿದು ಹೋದ ..
ಜಗ್ಗುವಿನಂತವರ ಸಂಖ್ಯೆ ಹೆಚ್ಚಲಿ ಓಕೆ
ಆದ್ರೆ . ಆಯ್ಕೆನೋ.. ಪರಿಸ್ಥಿತಿನೋ ..ಒಂಟಿಜೀವಿಗಳೇ .. ಹೆದರಬೇಡಿ..ಚಿಂತಿಸಬೇಡಿ ..
ಎಲ್ಲ ಇದ್ದೂ.. ಬಾಯಿಗೆ ನೀರ್ ಹಾಕೋರು ಇಲ್ಲದೆ ಹೋದವರ ಕಥೆಗಳು ಇವೆ






0 Comments