ರಾಜಕುಮಾರ ಮಡಿವಾಳರ
ಶೃಂಗಾರದ ಹೊಂಗೆ ಮರ ಹೂ ಬಿಟ್ಟಿದೆ
ವಯಸ್ಸಾದ ಭಟ್ಟರೇ ತೀರ ಈ ನಮೋನಿ ಕೆಟ್ಟರೆ
ಹರೆಯದ ಹುಡುಗರು ನಾವು ಕಾಮನ ಸುಡಲು
ತರೋದೆಲ್ಲಿಂದ ಮೂರನೇ ಕಣ್ಣು..?

ಸುಡು ಬೇಸಿಗೆ ಇದು ಗಾಳಿ ಕುಲುಮೆ
ತಿದಿಯಿಂದೆದ್ದ ಬೆಂಕಿಯ ಹಾಗಿದೆ
ಬೆವೆತ ಮೈಯೊಳಗೆ ಒಲಮೆ ಮೆಳ್ಳಗಣ್ಣಲಿ ನೋಡಿದೆ
ಬೆವರ ಕೂಡಿ ಬೆವರು ಜೀವ ಜಿನುಗಲನುವಾಗುತಿದೆ!
ಸುಟ್ಟು ಬಿಡಲಿ ಕಾಮ
ತಬ್ಬಿ ಹಚ್ಚು ಕಿಡಿ ತುಟಿಗೆ ಚಾಚಿ ಕೆನ್ನಾಲಿಗೆ!
ನೋಡಿ ಈ ಮದನ ಮಿಥುನ
ಜಗವೇ ನಾಚಿ ಜಗದ ಕೆನ್ನೆ ಬಣ್ಣ ಬಣ್ಣ…!
। ಸುಮಾರು 250 ವರ್ಷ ಇತಿಹಾಸದ ನಮ್ಮ ಭೂಸಪ್ಪ ಚೌಕ ರತಿಕಾಮ ।







0 Comments