ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೈತ್ರಾ ಶಿವಯೋಗಿಮಠ ಹೊಸ ಕವಿತೆ- ಒಮ್ಮೊಮ್ಮೆ…

ಚೈತ್ರಾ ಶಿವಯೋಗಿಮಠ

ಒಮ್ಮೊಮ್ಮೆ ಭಯವಾಗುತ್ತದೆ
ಇಷ್ಟು ಭಾವುಕಳಾಗಿರುವುದು
ಒಳ್ಳೆಯದೇ ಎಂದು

ನಾಲ್ಕೂ ಕವಾಟುಗಳ
ಸದಾ ತೆರೆದೆ ಇದ್ದರೆ
ಹೃದಯದೊಳಗೆ ಸಿಕ್ಕ
ಸಿಕ್ಕವರೆಲ್ಲಾ ನುಗ್ಗಿ
ಲೂಟಿ ಮಾಡುವರೆಂದು

ಅತಿಯಾದ ಆರ್ದ್ರತೆಯಿಂದಾಗಿ
ಒಡನಾಡಿದವರೆಲ್ಲಾ ಎದೆ
ನೆಲದ ಒದ್ದೆಯಿಂದಾಗಿ
ಸೀದಾ ಜಾರಿ
ಬಿದ್ದು ನನ್ನೊಂದಿಗೆ
ಒದ್ದುಕೊಂಡಾರೆಂದು

ಸದಾ ಹೃದಯದಿಂದಲೇ
ಯೋಚಿಸಿ, ನಿರ್ಧರಿಸಿ
ಒಂದೊಮ್ಮೆ ಮಿದುಳು
ನಿಷ್ಕೃಯೆಗೊಂಡು ನರಮಂಡಲವೇ
ಕುಸಿದೀತೆಂದು

ಪ್ರತಿಯೊಂದಕ್ಕೂ ಮಿಡಿದು
ಅಂತಃಕರಣದ ಕೂಗು
ಕೇಳುವವರ ಕಿವಿಗಡಚಿಕ್ಕಿ
ಮುಂದೆಂದೂ ನನ್ನ
ಮಿಡಿತಗಳೇ ಕೇಳಲಾರರೆಂದು

ಒಮ್ಮೊಮ್ಮೆ ಭಯವಾಗುತ್ತದೆ
ಭಾವುಕತೆಯ ನಾಟಕೀಯವೆಂದು
ಭ್ರಮಿಸಿಯಾರೆಂದು

ಒಮ್ಮೊಮ್ಮೆ…

‍ಲೇಖಕರು Admin

30 June, 2021

6 Comments

  1. ನಾಗರಾಜ್ ಹರಪನಹಳ್ಳಿ

    ಚೆಂದ ಕವಿತೆ

  2. Kotresh Arsikere

    ಕವಿತೆ ಇಷ್ಟವಾಯಿತು

  3. km vasundhara

    ಇಷ್ಟವಾಯ್ತು ಕವಿತೆ.

  4. km vasundhara

    ಇಷ್ಟವಾಯ್ತು ಕವಿತೆ

  5. T S SHRAVANA KUMARI

    ವಾವ್, ತುಂಬಾ ಚೆನ್ನಾಗಿದೆ ಚೈತ್ರಾ

  6. ಚೈತ್ರಾ ಶಿವಯೋಗಿಮಠ

    ಮೆಚ್ಚಿ ಸ್ಪಂದಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading