ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೈತ್ರಚೇತನ ಕೊನರಿ…

ಅರ್ಚನಾ ಎಚ್

ಹೆಡೆಯರಳಿ ಬುಸುಗುಟ್ಟಿ
ಕೋಪದುರಿಬುಗ್ಗೆಗಳ ಎಸರು..
ತಿಳಿಬಾನಿಗೆರಚಿ ಕೆಸರು..!!
ರಾಡಿಕೊಳದಲಿ ಕಂಡದ್ದು ಭಗ್ನ ಬಿಂಬ..!
ಬಾಂದಳದುದರಕ್ಕೆ ಕಗ್ಗತ್ತಲಮವಾಸ್ಯೆ
ಹೊಳೆವ ವಸ್ತ್ರವ ಕಳಚಿ ಹೊರಟ ಚಂದ್ರ..!!

ನಗೆಯ ತಿಳಿಗೊಳದಲ್ಲಿ
ಅಲ್ಲೋಲ ಕಲ್ಲೋಲ..!
ಅಳುವ ನಗು, ನಗುವ ಅಳು
ಮರುಳು ಮನಸು..!
ಸೀಳು ದರ್ಪಣವಲ್ಲಿ ಛಿದ್ರ ಕನಸು..!!
ಮರುಗುತಾ ಬಿಕ್ಕುತಾ
ಉತ್ತುಂಗಕೇರಿದ ದುಃಖದುನ್ಮಾದ…
ಸಮಸ್ಥಿತಿಯೇ ಸಾಧನೆ; ಬಾಳಿನುದ್ದಿಶ್ಯ..!

ಬಾಳ ಬಟ್ಟೆಯ ಪರಿಕ್ರಮಿಸಿ ಕ್ರಯಿಸಿ..
ಜನುಮ ಜನ್ಮೋಪಾದಿಗಳ ಸವೆಸಿ
ಪ್ರಸ್ತುತದಿ ಮೇಳೈಸಿ ಸಂಭ್ರಮಿಸಿ ತಣಿಸಿ
ಬಾಳು ಬಡಿಸಿದ್ದು ಬರಿದೆ ಬೇವು..
ಕಹಿಯೂಟ.., ಕರ್ಮಫಲಗಳ ಕೂಟ..!!

ಬಲಿತೆಲೆಯ ಬಾಳುದುರಿ
ಬಿರುಗಾಳಿ ಯುಗಳ ನೀರಸುಳಿಗಂಬ..!!
ಚೈತ್ರಚೇತನ ಕೊನರಿ
ಹೊನಲ ವನಸಿರಿ ಮರಳಿ,
ಅರುಣೋದಯಕೆ ಅಡಿಬಾಗಿ
ತಮನ ನಿರ್ಗಮನ…!
ಮನಕೋಣೆ ಕೋನದೊಳಗೊಳಗೆ ಹೊರಗೆ,
ಉತ್ಕರ್ಷ ಬೆಳಕ ಹರ್ಷ…!!

‍ಲೇಖಕರು Avadhi

25 November, 2020

2 Comments

  1. Mahesh

    Super

  2. Archana H

    ಧನ್ಯವಾದಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading