ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಚೇತನಾ ತೀರ್ಥಹಳ್ಳಿಯ ಖುಷಿ, ಬೇಸರ ಹಾಗೂ ಗುಟ್ಟು..

ಅಯ್ಯಬ್ಬ! ಮುಗ್ದೇ ಹೋಯ್ತಲ್ಲ ಮತ್ತೊಂದ್ ವರ್ಷ!! ನೆನೆಸ್ಕೊಂಡ್ರೆ ಬೇಜಾರಾಗತ್ತೆ. ಹೀಗೇ ವರ್ಷಾ ವರ್ಷಾ ಶುಭಾಷಯಗಳನ್ನ ಹೇಳ್ಕೊಂಡು ಕಳೆದುಬಿಡ್ಬೇಕಲ್ಲ ಅಂತ. ನಂಗಂತೂ ಸುಮ್ನೇ ಒಂದಿನ ಸತ್ತೋಗ್ಬಿಡಕ್ಕೆ ಬೇಜಾರಪ್ಪ. ಎಷ್ಟೊಂದು ದಿನಗಳಿವೆ ನಮ್ಮ ಕೈಲಿ. ಉಪಯೋಗಿಸ್ಕೊಳೋಕೆ ಬರೋಲ್ವಲ್ಲಾ ಅಂತ…
ಇರಲಿ. ವೇದಾಂತದ ಮೂಡ್ ಇಲ್ಲ. ನಾಳೆ ಚಾರ್ಜ್ ಆಗತ್ತೇಂತ ಇವತ್ತೇ ಕೆಲವರೆಲ್ಲ ವಿಶಸ್ ಕಳಿಸಿದ್ರು. ಆಗ ಗಾಬರಿಯಾಗೋಯ್ತು, ೨೦೦೯ ಮುಗ್ದೇಬಿಡ್ತಲ್ಲ ಅಂತ. ಈ ಹೊತ್ತಲ್ಲಿ ಒಂದ್ ಸಲ ಹಿಂತಿರುಗಿ ನೋಡಿದಾಗ ಕಂಡ ೨೦೦೯ರ ಖುಷಿ, ಬೇಸರ, ಗುಟ್ಟುಗಳು ಇಲ್ಲಿವೆ. ಜತೆಗೆ ಹೊಸ ವರ್ಷಕ್ಕೆ ನನ್ನ ಸಿಲ್ಲೀಸಿಲ್ಲಿ ರೆಸಲ್ಯೂಷನ್ಸ್ ಕೂಡಾ!
ಖುಷಿ:
೧. ಮಗು ಜೊತೆ ಕಳೆದ ಪೂರ್ತಿ ಒಂದು ತಿಂಗಳು
೨. ಅಣ್ಣನ ಜತೆ ಜಗಳ ಕಡಿಮೆ ಆಡಿದ್ದು.
ಅವನು ಕೊಡಿಸಿದ ಹೊಸ ಕಂಪ್ಯೂಟರ್.
೩. ಹೊಸ ಗೆಳೆಯರ ಪರಿಚಯ.
ಹಳೆ ಗೆಳೆಯ(ರಲ್ಲದಿದವರು)ರಲ್ಲಿ ಕೆಲವರು ಕಳಚಿಕೊಂಡಿದ್ದು.
೪. ೪೩ ಪುಸ್ತಕಗಳ ಓದು.
೩೧ ಸಿನೆಮಾಗಳನ್ನು ನೋಡಿದ್ದು (ಬೇರೆ ಬೇರೆ ಭಾಷೆಗಳದ್ದು)
೫. ಹೊಸ ಕೆಲಸ.
ಜೊತೆಗೇ ದೊರೆತಿರುವ ಬೀಎಮ್‌ಟೀಸಿ ಭಾಗ್ಯ!
೬. ಬ್ಲಾಗಲ್ಲಿ ಕಿತ್ತಾಟವಿಲ್ಲದ್ದು
೭. ಸುಮಾರು ಐದು ವರ್ಷಗಳ ನಂತರ ತೀರ್ಥಹಳ್ಳೀಲಿ ಖುಷಿಯಾಗಿ ಒಂದು ವಾರ ಇದ್ದು ಬಂದಿದ್ದು.
೮. ಜಾಗೋ ಭಾರತ್ ಯಶಸ್ಸು.


ಬೇಸರ:
೧. ವರ್ಷಾಂತ್ಯದ ಮೂರು ಸಾವುಗಳು- ನನ್ನ ರಾಘು ಮಾವ, ಅಶ್ವತ್ಥ್, ವಿಷ್ಣುವರ್ಧನ್.
೨. ಉತ್ತರ ಕರ್ನಾಟಕದ ನೆರೆ ಹಾವಳಿ.
೩. ಹದಗೆಡುತ್ತಲೇ ಹೋಗುತ್ತಿರುವ ವಿಕೃತ ರಾಜಕಾರಣ.
೪. ಅಂದುಕೊಂಡ ಹಾಗೆ ‘ಸುತ್ತಾಟ’ ಸಾಧ್ಯವಾಗದೆ ಹೋಗಿದ್ದು.
೫. ನನಗೆ ಬರೀಲಿಕ್ಕೆ ಬರೋದಿಲ್ಲ ಅಂತ ಸಾಬೀತಾಗಿದ್ದು. (ಬರೀಲಿಕ್ಕೆ ಬರೋಲ್ಲ ಅನ್ನೋದು ಬೇಜಾರು. ಸಾಬೀತಾಗಿದ್ದು ಖುಷಿ)
ಗುಟ್ಟು:
೧. ಎಂದಿನಂತೆ, ‘ಅವನು’.
ರೆಸಲ್ಯೂಷನ್:
೧. ಪ್ರತಿದಿನ ಅಡುಗೆ
೨. ವಾರಕ್ಕೊಂದು ಪುಸ್ತಕ, ಸಿನೆಮಾ
೩. ಫೋನ್ ಬಳಕೆಯಲ್ಲಿ ಕಡಿತ
೪. ಚಾಕೊಲೇಟ್‌ಗೆ ಟಾಟಾ
೫. ಕುಡಿತ ಬಿಡೋದು (ಕಾಫಿ)
೬. ಸೇವಿಂಗ್ಸ್ (ಈ ಸಲಾನಾದ್ರೂ… ವಿಶ್ ಮಿ ಪ್ಲೀಸ್)
೭. ಮುಂದಿನ ಮುನ್ನೂರರವತ್ತೈದು ದಿನಗಳಲ್ಲಿ ಒಂದಿನಾನಾದ್ರೂ ಸೀರೆ ಉಡೋದು
೮. ಮಾತಾಡೋಕೆ ಕಲಿಯೋದು… (ಇದ್ ಸ್ವಲ್ಪ ಕಷ್ಟ. ದಿನಕ್ಕೊಂದು ‘ಕೆಸ’ದ ಎಲೆ ತಿನ್ನೋ ಪ್ಲ್ಯಾನ್ ಇದೆ!)
ನಿಮಗೆಲ್ರಿಗೂ ಹೊಸ ವರ್ಷಕ್ಕೆ ನನ್ನ ಶುಭಾಶಯ. ನೀವೂ ಹಾರೈಸಿ ನಂಗೆ ಪ್ಲೀಸ್…
ನಲ್ಮೆ,
ಚೇತನಾ ತೀರ್ಥಹಳ್ಳಿ

‍ಲೇಖಕರು avadhi

31 December, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

12 Comments

  1. ನಾಗರಾಜ ರಾವ್ ಜವಲಿ

    ಪ್ರಿಯ ಚೇತನಾರವರಿಗೆ,
    ನಮಸ್ತೆ.
    ನಿಮ್ಮ ಖುಷಿ, ಬೇಸರ, ಗುಟ್ಟು ಮತ್ತು ರೆಸಲ್ಯೂಷನ್ ಓದಿ ಸಂತೋಷವಾಯಿತು. ಹೊಸ ವರುಷದ ಪ್ರತಿದಿನವೂ ಸಂತಸ ಮತ್ತು ಉತ್ಸಾಹ ನಿಮ್ಮದಾಗಿರಲಿ ಎಂದೇ ಹಾರೈಸುತ್ತೇನೆ.
    ನನಗೆ ಬೇಸರವೆಂದರೆ ನೀವು ತೀರ್ಥಹಳ್ಳಿಯಲ್ಲಿ ವಾರವಿದ್ದರೂ ನಂಮನೆಗೆ ಬರಲಿಲ್ಲವಲ್ಲ . ಮತ್ತೊಮ್ಮೆ ಬಂದಾಗ ಕಂಡಿತಾ ಬನ್ನಿ
    ಶುಭಾಶಯಗಳೊಂದಿಗೆ-
    ಜವಳಿ

    • chetana Teerthahalli

      ಓಹ್! ನಾನು ಇಲ್ಲೂ ಇದೀನಿ!!
      ಎಲ್ರಿಗೂ ಥ್ಯಾಂಕ್ಸ್.
      ಜವಳಿ ಸರ್, ಮುಂದಿನ ಸಾರ್ತಿ ಬಂದಾಗ ಖಂಡಿತ ನಿಮ್ಮ ಮನೆಗೆ ಅದಕ್ಕಿಂತ ಮುಖ್ಯವಾಗಿ ಲೈಬ್ರರಿಗೆ ಬರ್ತೀನಿ.
      ನಲ್ಮೆ,
      ಚೇತನಾ

  2. ಶಂಕರ್

    ಚೇತನಾ,
    ಮಾಡಿಕೊಂಡಿರುವ ರೆಸಲ್ಯೂಶನ್‌ಗಳ ಜೊತೆಗೆ ಸುಪ್ತವಾಗಿರುವವೂ ಕೂಡಾ ಕೈಗೂಡಲಿ..
    ನಿಮಗೆ ಬರೀಲಿಕ್ಕೆ ಬರೋದಿಲ್ಲ ಎಂಬ ನಿಮ್ಮ ಭ್ರಮೆ ನಿಮ್ಮಿಂದ ಬೇಗ ದೂರಾಗಲಿ! (ಅವುಗಳೇನಿದ್ದರೂ ಬರೆಯದೆ ಇರುವ ನಮ್ಮ ಆಸ್ತಿಗಳು!)…
    ಜೊತೆಗೆ ಮೊಗೆದಷ್ಟೂ ಖಾಲಿಯಾಗದ ಶುಭಹಾರೈಕೆಗಳೊಂದಿಗೆ..

  3. cautiousmind

    ಆಲ್ ದಿ ಬೆಸ್ಟ್ ಫಾರ್ ದಿ ರೆಸಲ್ಯೂಷನ್….ಖುಷಿ ಓದಿ ಖುಷಿಯಾಯಿತು. ಬೇಸರಕ್ಕೆ ಬೇಸರ. ಗುಟ್ಟು ರಟ್ಟಾಗಲಿ. ರೆಸಲ್ಯೂಷನ್ ಸಫಲವಾಗಲಿ…

  4. K VITTAL SHETTY

    Good article.You know writing

  5. Nisha

    ಪ್ರಿಯ ಚೇತನಾರ,
    ನಿಮ್ಮ ಖುಷಿ, ಬೇಸರ, ಗುಟ್ಟು ಮತ್ತು ರೆಸಲ್ಯೂಷನ್ ಓದಿ ಸಂತೋಷವಾಯಿತು. ಹೊಸ ವರುಷದ ಪ್ರತಿದಿನವೂ ಸಂತಸ ಮತ್ತು ಉತ್ಸಾಹ ನಿಮ್ಮದಾಗಿರಲಿ ಎಂದೇ ಹಾರೈಸುತ್ತೇನೆ.

  6. Shashi Jois

    ಹೊಸ ವರ್ಷದ ಶುಭಾಶಯಗಳು.
    ಚೇತನ ಹಲೋ .
    ನಿಮ್ಮ ರೆಸಲ್ಯೂಶನ್ ಇಷ್ಟ ವಾಯಿತು. “ಮಾತು ಕಲಿಯೋಕೆ ಕೇಸು ತಿನ್ನುವ ಐಡಿಯಾ “ಚೆನ್ನಾಗಿದೆ.. ಆದರೆ ಇಷ್ಟು ಚೆನ್ನಾಗಿ ಬರಿತೀರ ನಿಮಗೆ ಮಾತು ಕಲಿಯುವ ಮದ್ದು ಬೇಕಾ ಅಂತ ನನ್ನ ಸಣ್ಣ ಸಂದೇಹ.ಹಾಗಾದರೆ ನಿಮ್ಮನೇಲಿ ದಿನಾ ಪತ್ರೋಡೆನಾ ತಿಂಡಿ!!!

  7. umesh desai

    ಚೇತನ ಶುಭಾಷಯಗಳು…ನಿಮ್ಮ ಒಂದು ರೆಸುಲೂಷನ್ ಸೇರ್ತು ಅದೆಂದರೆಮುಂದಿನ ೩೬೫ ದಿನಗಳಲ್ಲಿ ಒಂದಿನಾದ್ರೂ ಸೀರೆ ಉಡೋದು ಅಂತ ಆಲ್ ದಿ ಬೆಸ್ಟ….!

  8. ramamoorthy b

    thumba chennagi barediddiri

  9. chandragouda kulkarni

    chetana
    vandane shubhavandane hosavarshakke
    nimma bEsarada sangati noDide.
    khushiyaaytu.
    chandragouda kulkarni
    talikoti
    9448790787

  10. mranu

    Hey chethana,
    Its a good article.I liked it very much. Did u study
    in Hiriyur in chitradurga. If its true i’m ur senior…nice to see u here:).
    All the best
    Sri

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading