ಹೊಣೆ
– ಸ್ಮಿತಾ ಅಮೃತರಾಜ್

ಹೇಗೋ ಏನೋ ಒಮ್ಮೊಮ್ಮೆ
ಎಡವಿಬಿಡುತ್ತೇವೆ
ಗೊತ್ತಿಲ್ಲದೇ..
ಹೆಬ್ಬೆರಳಿಗೆ ಎಡತಾಕಿದ ಪುಟ್ಟ
ಚೆರಳೆ ಕಲ್ಲು ಕೂಡ ಸಾಕು
ಹೀಗೇ ಮುಗ್ಗರಿಸಿ ಬೀಳಲು
ಪುಣ್ಯಕ್ಕೆ ಯಾರೂ ನೋಡಲಿಲ್ಲ!
ಎಡವಿಬಿದ್ದ ನೋವಿಗಿಂತ
ಯಾರದೋ ನೆಟ್ಟ ಕಣ್ಣಿಗೆ
ಕರುಣಾದೃಷ್ಟಿಗೆ ಅಪಮಾನ
ಹೆಚ್ಚು.
ಹೇಳಿ ಕೇಳಿ ಬೀಳುವ
ವಯಸ್ಸೇ ಇದು?
ಒಮ್ಮೊಮ್ಮೆ ಯಾವುದೋ ಗುಂಗು
ಜೋಮು ಹಿಡಿದಂತಾಗಿ
ಆಯತಪ್ಪಿದಂತಾಗುತ್ತದೆಯಷ್ಟೆ.
ಅಲ್ಲ! ಎಡವುದ್ದಕ್ಕೆ ,ಎಡವಿ
ಬೀಳುವುದ್ದಕ್ಕೆ ವಯಸ್ಸಿನ
ಮಿತಿ ಉಂಟೇ?
ಮಗು ಬಿದ್ದರೆ ನಕ್ಕು ನಡೆದೀತು
ನಮಗೆ ಸುಮ್ಮಗೆ ನಗಲಾದೀತೇ?
ನಕ್ಕು ನಡೆಯಲಾದೀತೇ?
ನೆಲ ನೀರಿನ ದ್ವಂದ್ವಕ್ಕೆ ಬಿದ್ದ
ದೂರದೃಷ್ಟಿಯ ದುಯರ್ೋದನನಿಗೂ
ತಿಳಿಯಲಿಲ್ಲ ಬದುಕಿನೊಳಗಣ
ಮರ್ಮ.
ಇಲ್ಲಿ ಎಲ್ಲವೂ ಮಿಥ್ಯ
ಸರ್ವಕಾಲಕ್ಕೂ ಈ ಮಾತು
ಎಷ್ಟು ಸತ್ಯ!
ಆದಷ್ಟೂ ಕಣ್ಣನ್ನು ಹಿರಿದುಗೊಳಿಸಿ
ಸುತ್ತೊಮ್ಮೆ ನಿರುಕಿಸಿ
ಖಾತರಿ ಪಡಿಸಿಕೊಂಡ ಬಳಿಕವಷ್ಟೇ
ಮುಂದಡಿಯಿಟ್ಟರೆ ಒಳಿತು.
ತಿಳಿದೂ ತಿಳಿದೂ
ಮತ್ತೂ ಎಡವಿದರೆ…
ಎಡವಿಬಿದ್ದ ನೋವಿಗೆ
ಯಾರಾದರೂ ಆಗುವರೆ
ಹೊಣೆ?!






nice..smita.
Nice
good one.
ಬಿದ್ದ ನೋವು ಗೊತ್ತಾಗದೇ ಮರೆಯಾದರೂ ಮರೆಯದೇ ನೆನೆಯುವ ನೋಡುವವರ ಭಾವ ಎಷ್ಟು ಸೋಜಿಗ…ಅಲ್ವಾ ಸ್ಮಿತಾ ಚೆನಾಗಿದೆ ನಿಮ್ಮ ಭಾವದ ಅಭಿವ್ಯಕ್ತಿ….ಮುಂದುವರೆಸಿ……
Kavithe chennagide.
olleya kavite…
it content deep meaning….goood
Nice and meaningful … continue
ಅಲ್ಲ! ಎಡವುದ್ದಕ್ಕೆ ,ಎಡವಿ
ಬೀಳುವುದ್ದಕ್ಕೆ ವಯಸ್ಸಿನ
ಮಿತಿ ಉಂಟೇ? well said. makes one to be watchful and receptive